ETV Bharat / state

ಖಾಸಗಿ ಆಸ್ಪತ್ರೆಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಮೈಸೂರು ಡಿಸಿ - Mysore DC Warns to Private Hospitals

ಮೈಸೂರಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್​ಎಆರ್​ಐ, ಐಎಲ್​ಐ ಮತ್ತು ಕೋವಿಡ್​ ಶಂಕಿತರ ವರದಿಗಳನ್ನು https//kpme.Karnataka.tech/index.php/login ಇದರ ಮೂಲಕ ಪ್ರತಿದಿನ ದಾಖಲಿಸಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಖಡಕ್ ವಾರ್ನಿಂಗ್ ನೀಡಿದ ಡಿಸಿ ಅಭಿರಾಮ್ ಜಿ.ಶಂಕರ್

author img

By

Published : Jun 30, 2020, 3:56 PM IST

ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ನಗರದಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ವೈರಸ್ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು (ಅಲೋಪತಿ, ಆಯುಷ್, ಲ್ಯಾಬ್​​ಗಳು, ದಂತ ವೈದ್ಯರು ಹಾಗೂ ಎಲ್ಲಾ ತಜ್ಞ ವೈದ್ಯರು) ಎಸ್​ಎಆರ್​ಐ, ಐಎಲ್​ಐ ಮತ್ತು ಕೋವಿಡ್​ ಶಂಕಿತರ ವರದಿಗಳನ್ನು https//kpme.Karnataka.tech/index.php/login ಇದರ ಮೂಲಕ ಪ್ರತಿದಿನ ದಾಖಲಿಸಬೇಕು. ಈಗಾಗಲೇ ಹಲವು ಬಾರಿ ದೂರವಾಣಿ, ಇ-ಮೇಲ್ ಇತ್ಯಾದಿಗಳ ಮೂಲಕ ಎಚ್ಚರಿಕೆ ನೀಡಲಾಗಿದ್ದರೂ ತಮ್ಮ ಆರೋಗ್ಯ ಸಂಸ್ಥೆಯಿಂದ ದೈನಂದಿನ ವರದಿಯನ್ನು ದಾಖಲು ಮಾಡುತ್ತಿಲ್ಲ.

ಖಡಕ್ ವಾರ್ನಿಂಗ್ ನೀಡಿದ ಡಿಸಿ ಅಭಿರಾಮ್ ಜಿ.ಶಂಕರ್
ಖಡಕ್ ವಾರ್ನಿಂಗ್ ನೀಡಿದ ಡಿಸಿ ಅಭಿರಾಮ್ ಜಿ. ಶಂಕರ್

ಮಾಹಿತಿಗಳ ಪ್ರಕಾರ ಕೋವಿಡ್-19 ದೃಢಪಟ್ಟು ಸಾವನ್ನಪ್ಪಿರುವ ಪ್ರಕರಣ ತಡವಾಗಿ ವರದಿಯಾಗಿರುತ್ತದೆ. ಮತ್ತೊಂದು ಪ್ರಕರಣದಲ್ಲಿ ಕೋವಿಡ್-19 ದೃಢಪಟ್ಟು ಸಾವನ್ನಪ್ಪಿದ್ದರೂ ವರದಿ ಮಾಡಿರುವುದಿಲ್ಲ. ಆದ್ದರಿಂದ ಖಾಸಗಿ ಆಸ್ಪತ್ರೆಯವರು ದೈನಂದಿನ ವರದಿಯನ್ನು ಪ್ರತಿದಿನ ನೀಡುವುದು ಕಡ್ಡಾಯವಾಗಿರುತ್ತದೆ. ಇದು ಕೊನೆಯ ಎಚ್ಚರಿಕೆಯಾಗಿದ್ದು, ತಮ್ಮ ಆರೋಗ್ಯ ಸಂಸ್ಥೆಯ ನೋಂದಣಿಯನ್ನು ಕೆಪಿಎಂಇಎ ಕಾಯ್ದೆಯ ನಿಯಮಾವಳಿಯಂತೆ ಮುಂದಿನ ಆದೇಶದವರೆಗೆ ರದ್ದುಪಡಿಸಲಾಗುವುದು. ಅಲ್ಲದೇ ರಾಜ್ಯ ಸರ್ಕಾರದಿಂದ ಗುರುತಿಸಲ್ಪಡುವ ಪ್ರತಿಯೊಂದು ಎಸ್​ಎಆರ್​ಐ, ಐಎಲ್​ಐ ಮತ್ತು ಕೋವಿಡ್​ ಶಂಕಿತ ಪ್ರಕರಣಗಳಿಗೆ ಉಚಿತ ಸ್ವ್ಯಾಬ್ ಟೆಸ್ಟಿಂಗ್​ ಮಾಡಿಸುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.