ETV Bharat / state

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ವರ್ಗಾವಣೆ - Mysore DC latest news

ಜಿಲ್ಲಾಧಿಕಾರಿ ಅಭಿರಾಮ್ ಬಿ. ಶಂಕರ್ ಅವರನ್ನು ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ನೇಮಕ ಮಾಡಲಾಗಿದೆ.

Mysore DC Abhiram Shankar
Mysore DC Abhiram Shankar
author img

By

Published : Aug 28, 2020, 8:22 PM IST

ಮೈಸೂರು: ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರನ್ನು ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ನಿಯೋಜನೆಗೊಳಿಸಿ ವರ್ಗಾವಣೆ ಮಾಡಲಾಗಿದೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ, ಲೋಕಸಭಾ ಚುನಾವಣೆ, ದಸರಾ ಮಹೋತ್ಸವ, ಪ್ರವಾಹ ನಿರ್ವಹಣೆ, ಕೊರೊನಾ ನಿರ್ವಹಣೆಯಲ್ಲಿ ಜನಮನ್ನಣೆ ಗಳಿಸಿ ಉತ್ತಮ ಕೆಲಸ ಮಾಡಿದ ಅಭಿರಾಮ್ ಜಿ. ಶಂಕರ್ ಅವರ ವರ್ಗಾವಣೆ ಜಿಲ್ಲೆಯ ಜನತೆಗೆ ಬೇಸರ ತಂದಿದೆ.

ಅಭಿರಾಮ್ ಅವರು ಕೇಂದ್ರ ಸರ್ಕಾರದ ಸೇವೆಗೆ ಹೋಗುವ ಪ್ರಸ್ತಾವನೆ ಎರಡು-ಮೂರು ತಿಂಗಳ ಹಿಂದೆಯೇ ಆರಂಭವಾಗಿತ್ತು. ಇನ್ನು ಸ್ವಲ್ಪ ದಿನದಲ್ಲಿ ಕೇಂದ್ರ ಸರ್ಕಾರದ ಸೇವೆಗೆ ಹೋಗುವವರಿದ್ದಾರೆ. ಸದ್ಯಕ್ಕೆ ಕೇಂದ್ರ ಸರ್ಕಾರದ ಸೇವೆ ಖಾತರಿಯಾದ ಹಿನ್ನೆಲೆಯಲ್ಲಿ ಈ ವರ್ಗಾವಣೆಯಾಗಿದ್ದು, ತಾತ್ಕಾಲಿಕವಾಗಿ ಎ.ಟಿ.ಐ.ಗೆ ಹೋಗಿದ್ದಾರೆ.

ಅವರ ಸ್ಥಾನಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.