ETV Bharat / state

ಸರೋದ್ ವಾದಕ ರಾಜೀವ್ ತಾರಾನಾಥ್ ಬಳಿ ಕಮೀಷನ್ ಬೇಡಿಕೆ ಸುಳ್ಳು.. ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ ಸಾಂಸ್ಕೃತಿಕ ಉಪಸಮಿತಿ - Mysore Dasara Mahotsav

ಸರೋದ್ ವಾದಕ ರಾಜೀವ್ ತಾರಾನಾಥ್ ಬಳಿ ಕಮೀಷನ್ ಬೇಡಿಕೆ ಇಡಲಾಗಿದೆ ಎಂಬುದು ಸುಳ್ಳು. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂದು ದಸರಾ ಮಹೋತ್ಸವದ ಸಾಂಸ್ಕೃತಿಕ ಉಪಸಮಿತಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

Dasara culture programme
Dasara culture programme
author img

By ETV Bharat Karnataka Team

Published : Oct 14, 2023, 5:13 PM IST

Updated : Oct 14, 2023, 7:02 PM IST

ಮೈಸೂರು: ನಾಡಹಬ್ಬ ದಸರಾ ಕಾರ್ಯಕ್ರಮದ ಸಂಭಾವನೆಯಲ್ಲಿ ಕಮಿಷನ್ ಬೇಡಿಕೆ ಇಡಲಾಗಿದೆ ಎಂಬ ವಿಚಾರವನ್ನು ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅಲ್ಲಗಳೆದಿದ್ದಾರೆ. ''ತಮ್ಮನ್ನು ಯಾರೂ ಕಮಿಷನ್​ ಕೇಳಿಲ್ಲ, ಯಾರೂ ಸಂಪರ್ಕ ಸಹ ಮಾಡಿಲ್ಲ'' ಎಂದು ಸ್ವತಃ ಅವರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ ಎಂದು ದಸರಾ ಮಹೋತ್ಸವದ ಸಾಂಸ್ಕೃತಿಕ ಉಪಸಮಿತಿ ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ತಮಗೆ ನೀಡುವ ಸಂಭಾವನೆಯಲ್ಲಿ ಕಮಿಷನ್ ನೀಡುವಂತೆ ರಾಜೀವ್ ತಾರಾನಾಥ್ ಬಳಿ ಬೇಡಿಕೆ ಇಟ್ಟಿದ್ದರು ಎಂಬ ಮಾಧ್ಯಮಗಳ ವರದಿ ಹಿನ್ನೆಲೆ ಸಚಿವ ಡಾ. ಹೆಚ್​​.ಸಿ. ಮಹದೇವಪ್ಪ ಈ ಬಗ್ಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದರು. ಅವರ ಈ ಸೂಚನೆ ಮೇರೆಗೆ, ದಸರಾ ಸಾಂಸ್ಕೃತಿಕ ಉಪಸಮಿತಿಯ ವಿಶೇಷಾಧಿಕಾರಿ ಕೆ.ಎಂ. ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದ ತಂಡ ಸ್ವತಃ ತಾರಾನಾಥರ ಮನೆಗೆ ಭೇಟಿ ನೀಡಿತ್ತು.

ತಾರಾನಾಥರ ಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳು
ತಾರಾನಾಥರ ಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳು

''ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ತಮ್ಮ ಬಳಿ ಯಾವುದೇ ಅಧಿಕಾರಿಗಳು ಕಮಿಷನ್​ ಬೇಡಿಕೆ ಇಟ್ಟಿಲ್ಲ. ಅಲ್ಲದೇ ನಾನು ಯಾವುದೇ ಮಾಧ್ಯಮಕ್ಕೆ ಹೇಳಿಕೆಯೂ ನೀಡಿಲ್ಲ ಎಂದು ಸ್ವತಃ ಪಂಡಿತ್ ರಾಜೀವ್ ತಾರಾನಾಥರೇ ನಮ್ಮ ಬಳಿ ಹೇಳಿದ್ದಾರೆ'' ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

''ಅವರಮನೆ ವೇದಿಕೆಯಲ್ಲಿ ಸರೋದ್​ ವಾದಕ ಕಾರ್ಯಕ್ರಮ ಪ್ರಸ್ತುತಪಡಿಸಲು ತಾರಾನಾಥ್ ಅವರನ್ನು ಸಮಿತಿಯು ಈ ಹಿಂದೆ ಸಂಪರ್ಕಿಸಿ ವಿನಂತಿಸಿತ್ತು. ಬಳಿಕ ಅವರ ಹೆಸರನ್ನು ಸೇರಿಸಿ ಕಲಾವಿದರ ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧಪಡಿಸಿತ್ತು. ಆದರೆ, ನಂತರ ಅವರ ಆರೋಗ್ಯದ ವಿಚಾರ ತಿಳಿದು ಅವರ ಸರೋದ್ ಕಾರ್ಯಕ್ರಮ ಕೈಬಿಡಲಾಗಿತ್ತು. ಆದರೆ, 21ರಂದು ಅರಮನೆ ಪ್ರಧಾನ ವೇದಿಕೆಯಲ್ಲಿ ಒಂದು ಗಂಟೆ ಅವಧಿ ಕಾರ್ಯಕ್ರಮ ಪ್ರಸ್ತುತಪಡಿಸಲು ಅವರು ಒಪ್ಪಿಗೆ ನೀಡಿರುವುದಾಗಿಯೂ'' ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಲ್ಲದೇ ''ಈ ಕಮಿಷನ್ ಬೇಡಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸ್​ ಇಲಾಖೆಗೆ ದೂರು ಸಲ್ಲಿಸಲು ಕ್ರಮವಹಿಸಲಾಗಿದೆ. ಯಾವುದೇ ಕಲಾವಿದರಿಗೆ ಯಾವುದೇ ವ್ಯಕ್ತಿಯಿಂದ ಹಣದ ಬೇಡಿಕೆ ಇಟ್ಟಿದ್ದು ಕಂಡುಬಂದಲ್ಲಿ ತಕ್ಷಣ ದೂರು ನೀಡುವಂತೆಯೂ'' ಉಪಸಮಿತಿ ತಿಳಿಸಿದೆ.

ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಸ್ಪಷ್ಟೀಕರಣ
ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಸ್ಪಷ್ಟೀಕರಣ

''ತಾರಾನಾಥ್ ಅವರ ಬಳಿಯಲ್ಲಿ ದಸರಾ ಕಾರ್ಯಕ್ರಮ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಿರುವ ಯಾರೇ ಆಗಿದ್ದರೂ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಯಾವುದೇ ರೀತಿಯ ಭ್ರಷ್ಟಾಚಾರವನ್ನು ನಾವು ಸಹಿಸುವುದಿಲ್ಲ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೂಡ ಸ್ಪಷ್ಟೀಕರಣ ನೀಡಿದ್ದಾರೆ.

ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ತಾರಾನಾಥ್ ಅವರನ್ನು ಆಹ್ವಾನಿಸಿದ ದಸರಾ ಅಧಿಕಾರಿಗಳು, ಸಂಭಾವನೆಯಲ್ಲಿ ಕಮಿಷನ್​ಗೆ ಬೇಡಿಕೆ ಇಟ್ಟಿದ್ದು ಈ ಕುರಿತು ಸ್ವತಃ ಪಂಡಿತ್ ರಾಜೀವ್ ತಾರಾನಾಥ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿತ್ತು. ಈ ವಿಚಾರ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು.

ಇದನ್ನೂ ಓದಿ: ಅರಮನೆಯಲ್ಲಿ ಶರನ್ನವರಾತ್ರಿ: ರಕ್ತ ಚಿಮ್ಮುವ 'ವಜ್ರಮುಷ್ಠಿ ಕಾಳಗ' ಹೇಗೆ ನಡೆಯುತ್ತೆ ಗೊತ್ತೇ?

Last Updated : Oct 14, 2023, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.