ಮೈಸೂರು: ಮೈಸೂರು ಮಹಾನಗರ ಪಾಲಿಕೆಯು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ಗೃಹೇತರ (ನಾನ್ ಡೊಮಸ್ಟಿಕ್), ವಾಣಿಜ್ಯ ಮತ್ತು ಕೈಗಾರಿಕಾ ಬಳಕೆ ನೀರಿನ ದರಗಳನ್ನು ಪರಿಷ್ಕರಿಸಿದ್ದು, 2021 ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೃಹೇತರ(ನಾನ್ ಡೊಮಸ್ಟಿಕ್) ಕುಡಿಯುವ ನೀರಿನ ಬಳಕೆಗೆ ಕನಿಷ್ಠ ದರ 168 ರೂ.ಗಳನ್ನು ನಿಗದಿಪಡಿಸಿದೆ. ಇದಲ್ಲದೇ ಪ್ರತಿ ಸಾವಿರ ಲೀಟರ್ಗೆ ಹೆಚ್ಚುವರಿಯಾಗಿ ಪ್ರತ್ಯೇಕ ದರ ನಿಗದಿಪಡಿಸಿದೆ. 1ರಿಂದ 10,000 ಲೀಟರ್ವರೆಗೆ 16.80ರೂ., 10,001ರಿಂದ 20,000 ಲೀಟರ್ಗೆ 21.60 ರೂ., 20,001ರಿಂದ 30,000 ಲೀಟರ್ಗೆ 26.40ರೂ., 30,001ರಿಂದ ಮೇಲ್ಪಟ್ಟು ಲೀಟರ್ಗೆ 31.20ರೂ.ಗಳನ್ನು ನಿಗದಿಪಡಿಸಿದೆ.
ವಾಣಿಜ್ಯ ಮತ್ತು ಕೈಗಾರಿಕೆಗಳಲ್ಲಿ ಶುದ್ಧೀಕರಿಸಿದ ನೀರಿನ ಬಳಕೆಗೆ ಕನಿಷ್ಠ ದರ 336 ರೂ.ಗಳನ್ನು ನಿಗದಿಪಡಿಸಿದೆ. ಇದಲ್ಲದೇ ಪ್ರತಿ ಸಾವಿರ ಲೀಟರ್ಗೆ ಹೆಚ್ಚುವರಿಯಾಗಿ ಪ್ರತ್ಯೇಕ ದರ ನಿಗದಿಪಡಿಸಿದೆ. 1ರಿಂದ 10,000 ಲೀಟರ್ವರೆಗೆ 33.60ರೂ., 10,001ರಿಂದ 20,000 ಲೀಟರ್ಗೆ 43.20 ರೂ., 20,001ರಿಂದ 30,000 ಲೀಟರ್ಗೆ 52.80ರೂ., 30,001ರಿಂದ ಮೇಲ್ಪಟ್ಟು ಲೀಟರ್ಗೆ 62.40ರೂ.ಗಳನ್ನು ನಿಗದಿಪಡಿಸಿದೆ.
ವಾಣಿಜ್ಯ ಮತ್ತು ಕೈಗಾರಿಕೆಗಳಲ್ಲಿ ಕಚ್ಚಾ ನೀರಿನ ಬಳಕೆಗೆ 1ರಿಂದ 8,000 ಲೀಟರ್ವರೆಗೆ 300 ರೂ. ಕನಿಷ್ಠ ದರವನ್ನು ನಿಗದಿಪಡಿಸಿದೆ. ಇದಲ್ಲದೇ ಪ್ರತಿ ಸಾವಿರ ಲೀಟರ್ಗೆ ಹೆಚ್ಚುವರಿಯಾಗಿ ಪ್ರತ್ಯೇಕ ದರ ನಿಗದಿಪಡಿಸಿದೆ. 8,001ರಿಂದ 15,000 ಲೀಟರ್ಗೆ 30ರೂ., 15,001ರಿಂದ 25,000 ಲೀಟರ್ಗೆ 40ರೂ., 25,001ರಿಂದ ಮೇಲ್ಪಟ್ಟು ಲೀಟರ್ಗೆ 50ರೂ.ಗಳನ್ನು ನಿಗದಿಪಡಿಸಿದೆ.
ಈ ಸಂಬಂಧ ಎಲ್ಲ ಸಾರ್ವಜನಿಕರಲ್ಲಿ ನೀರನ್ನು ಮಿತವಾಗಿ ಬಳಸಲು ಮತ್ತು ನೀರಿನ ಬಿಲ್ಲನ್ನು ನಿಗದಿತ ಅವಧಿಯೊಳಗೆ ಪಾವತಿಸಲು ಕೋರಿದೆ. ಮುಂದುವರೆದಂತೆ ಮೀಟರ್ ದುರಸ್ತಿಯಲ್ಲಿರುವ ಅಥವಾ ಮೀಟರ್ ಇಲ್ಲದೇ ಇರುವ ಸಂಪರ್ಕಗಳು ತಕ್ಷಣವೇ ಇಲಾಖೆ ಗಮನಕ್ಕೆ ತಂದು ದುರಸ್ತಿಪಡಿಸಿಕೊಳ್ಳಲು ಅಥವಾ ಹೊಸಮೀಟರ್ ಅಳವಡಿಸಿಕೊಳ್ಳುವಂತೆ ತಿಳಿಸಿದೆ. ಇಲ್ಲವಾದಲ್ಲಿ ಸರ್ಕಾರದ ಆದೇಶದ ಸಂಖ್ಯೆ: ನಅಇ 07 ಯುಡಬ್ಲ್ಯೂಎಸ್ 2011 ನಿಗದಿಪಡಿಸಲಾಗದ ದರಗಳಂತೆ ಶೇ.25ರಿಂದ ಶೇ.50ರವರೆಗೆ ಹೆಚ್ಚಾಗಿ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.