ETV Bharat / state

ಮೈಸೂರು: ಬರ್ತ್ ಡೇ ಪಾರ್ಟಿಯಲ್ಲಿ ಬಿಜೆಪಿ ಮುಖಂಡನ ಕೊಲೆ - ಬಿಜೆಪಿ ಮುಖಂಡ ಎಸ್​. ಆನಂದ್​

ಬರ್ತ್ ಡೇ ಪಾರ್ಟಿ ಮಾಡುವ ವೇಳೆ ಬಿಜೆಪಿ ಮುಖಂಡ ಎಸ್​. ಆನಂದ್​ನನ್ನು ಆತನ ಸ್ನೇಹಿತರೇ ಬಿಯರ್​ ಬಾಟಲಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.

Anandh
ಎಸ್​. ಆನಂದ್
author img

By

Published : Mar 6, 2020, 9:00 AM IST

Updated : Mar 6, 2020, 9:35 AM IST

ಮೈಸೂರು: ಬರ್ತ್ ಡೇ ಪಾರ್ಟಿಯಲ್ಲಿ ಬಿಜೆಪಿ ಮುಂಖಡ ಭೀಕರವಾಗಿ ಕೊಲೆಯಾಗಿರುವ ಘಟನೆ ಕುವೆಂಪು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುವೆಂಪು ನಗರದ ಲವಕುಶ ಪಾರ್ಕ್ ಬಳಿ ಇರುವ ಸರ್ವಿಸ್ ಅಪಾರ್ಟ್ ಮೆಂಟ್​ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಆನಂದ್ ಹಾಗೂ ಆತನ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ತಿರುಗಿ ಆತನ ಸ್ನೇಹಿತರು ಆನಂದ್​ ಹೊಟ್ಟೆಗೆ ಬಿಯರ್​ ಬಾಟಲಿನಿಂದ ಮನಸೋ ಇಚ್ಚೆ ಚುಚ್ಚಿ ಕೊಲೆ ಮಾಡಲಾಗಿದ್ದು, ಸ್ಥಳಕ್ಕೆ ನಗರ ಪೋಲಿಸ್ ಕಮಿಷನರ್ ಸೇರಿದಂತೆ ಹಿರಿಯ ಪೋಲಿಸ್ ಅಧಿಕಾರಿಗಳು ಧಾವಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್​ ಕಮಿಷನರ್ ಡಾ.ಚಂದ್ರಗುಪ್ತ

ಈ ಘಟನೆ ಬಗ್ಗೆ ನಗರ ಪೊಲೀಸ್​ ಕಮಿಷನರ್ ಡಾ.ಚಂದ್ರಗುಪ್ತ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಈ ಕೊಲೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ, ಬರ್ತ್ ಡೇ ಪಾರ್ಟಿ ಮಾಡುವ ವೇಳೆ ಕೊಲೆ ನಡೆದಿದೆ. ಆರೋಪಿಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದರು. ಕೊಲೆಯಾದ ವ್ಯಕ್ತಿಯೂ ರೌಡಿಶೀಟರ್ ಎನ್ನಲಾಗಿದ್ದು, ಈತ ನಗರ ಬಿಜೆಪಿ ಸ್ಲಂ ಮೋರ್ಚದ ಅಧ್ಯಕ್ಷ ಎನ್ನಲಾಗಿದೆ.

Last Updated : Mar 6, 2020, 9:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.