ETV Bharat / state

ಮೈಸೂರು: ಹಳೇ ದ್ವೇಷಕ್ಕೆ ಓರ್ವ ಬಲಿ, ಮತ್ತೋರ್ವ ಗಂಭೀರ - Mysore Crime news

ಹಲ್ಲೆಯಿಂದ ಗಂಭೀರ ಗಾಯಗೊಂಡ ನವೀನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಕಟೇಶ್​ ಎಂಬಾತ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

murder case one died one injured
ಹಳೇ ದ್ವೇಷಕ್ಕೆ ಓರ್ವ ಬಲಿ.. ಮತ್ತೋರ್ವ ಗಂಭೀರ
author img

By

Published : Sep 1, 2022, 9:27 AM IST

ಮೈಸೂರು: ಹಳೇ ದ್ವೇಷದಲ್ಲಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಇಲ್ಲಿನ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ ಕೊಲೆಯಾದಾತ. ನವೀನ್ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಲೆ ಆರೋಪಿಗಳಾದ ಚಂದ್ರು ಹಾಗೂ ಶೆಟ್ಟಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಸಂಪೂರ್ಣ ವಿವರ: ಕ್ಯಾತಮಾರನಹಳ್ಳಿಯ ಅಶ್ವತ್ಥಕಟ್ಟೆ ಬಳಿ ನವೀನ್ ಹಾಗೂ ವೆಂಕಟೇಶ್ ರಾತ್ರಿ ಮಾತನಾಡುತ್ತ ನಿಂತಿದ್ದಾಗ ಅಲ್ಲಿಗೆ ಬಂದ ಚಂದ್ರು ಹಾಗೂ ಶೆಟ್ಟಿ ಗಲಾಟೆ ಶುರು ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಶೆಟ್ಟಿ ಎಂಬಾತ ವೆಂಕಟೇಶ್​ಗೆ ಚಾಕುವಿನಿಂದ ಇರಿದಿದ್ದಾನೆ. ವೆಂಕಟೇಶ್ ಸಹಾಯಕ್ಕೆ ಬಂದ ನವೀನ್​ಗೂ ಚಾಕುವಿನಿಂದ ಇರಿಯಲಾಗಿದೆ.

ತೀವ್ರ ಗಾಯಗೊಂಡ ಇಬ್ಬರನ್ನೂ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ಸಾವನ್ನಪ್ಪಿದ್ದಾನೆ. ನವೀನ್ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರಾಯೋಗಿಕ ಅಂಕ ನೀಡದ್ದಕ್ಕೆ ಶಿಕ್ಷಕರನ್ನು ಮರಕ್ಕೆ ಕಟ್ಟಿ ಥಳಿಸಿದ ವಿದ್ಯಾರ್ಥಿಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.