ETV Bharat / state

ಶೀಘ್ರದಲ್ಲೇ ಮಂತ್ರಿಮಂಡಲ ವಿಸ್ತರಣೆಯಾಗುತ್ತೆ: ಸಂಸದ ಶ್ರೀನಿವಾಸ್ ಪ್ರಸಾದ್

author img

By

Published : Aug 17, 2020, 8:42 PM IST

ಮಂತ್ರಿಮಂಡಲ ವಿಸ್ತರಣೆ ಹಾಗೂ ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಸಂಸದ ವಿ.ಶ್ರೀನಿವಾಸ್​ ಪ್ರಸಾದ್​​ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

mp srinivas prasad
ಸಂಸದ ಶ್ರೀನಿವಾಸ್ ಪ್ರಸಾದ್

ಮೈಸೂರು: ಹೈಕಮಾಂಡ್ ಜೊತೆ ಚರ್ಚಿಸಿ ಯಾವ ಕ್ಷಣದಲ್ಲಿ ಬೇಕಾದರೂ ಮಂತ್ರಿ ಮಂಡಲ ವಿಸ್ತರಣೆಯಾಗಬಹುದು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್​​ ಈ ಟಿವಿ ಭಾರತದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಂಸದ ಶ್ರೀನಿವಾಸ್ ಪ್ರಸಾದ್

ಇಂದು ಮೈಸೂರಿಗೆ ಆಗಮಿಸಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹಾಗೂ ಎಂಎಲ್​ಸಿ ವಿಶ್ವನಾಥ್ ಜೊತೆ ಗೌಪ್ಯ ಮಾತುಕತೆ ನಡೆಸಿದ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದರು. ಮೈಸೂರು ಭಾಗದಲ್ಲಿ ಬಿಜೆಪಿ ಸ್ಥಳೀಯ ನಾಯಕರಿಗೆ ಮಂತ್ರಿ ಸ್ಥಾನ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಎಸ್.ಟಿ.ಸೋಮಶೇಖರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ವಿಧಾನ ಪರಿಷತ್ ಸದಸ್ಯರಾಗಿ ಹೆಚ್.ವಿಶ್ವನಾಥ್ ಇದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಸುಭದ್ರ ಸರ್ಕಾರ ಇದೆ. ಅದಾಗ್ಯೂ ಇಂದು ವಿಜಯೇಂದ್ರ ಅವರನ್ನು ಮಂತ್ರಿ ಮಂಡಲ ವಿಸ್ತರಣೆ ಏನಾದರೂ ಇದೆಯಾ ಅಂತ ಕೇಳಿದೆ. ಅವರು ನೋಡಬೇಕು ಸರ್ ಅಂದಿದ್ದಾರೆ ಎಂದು ಪ್ರತಿಕ್ರಿಯಿಸಿದರು.

2 ನೇ ಹಂತದಲ್ಲಿ ಬೋರ್ಡ್ ಮತ್ತು ಕಾರ್ಪೊರೇಷನ್ ಅಧ್ಯಕ್ಷರ ಸ್ಥಾನವನ್ನು ಕೊಡಲಾಗುತ್ತಿದೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಜೆಡಿಎಸ್, ಕಾಂಗ್ರೆಸ್ ಬಿಟ್ಟವರ ಪೈಕಿ ಹಾಗೂ ಬಿಜೆಪಿಯ ಹಿರಿಯ ಸದಸ್ಯರಿಗೆ ಮಂತ್ರಿ ಮಂಡಲದಲ್ಲಿ ಅವಕಾಶ ಕೊಡುವ ಬಗ್ಗೆ ಹೈಕಮಾಂಡ್​​ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಡಿಜೆ ಹಳ್ಳಿ ಪ್ರಕರಣದ ಬಗ್ಗೆ ಸಂಸದ ಹೇಳಿದ್ದೇನು ?

ಡಿಜೆ ಹಳ್ಳಿ ಪ್ರಕರಣ ಸೂಕ್ಷ್ಮ ವಿಚಾರ, ಸಾಮಾಜಿಕ ಜಾಲತಾಣದಲ್ಲಿ ಪೈಗಂಬರ್ ಬಗ್ಗೆ ಬರೆದ ಪೋಸ್ಟರ್​​ನಿಂದ ಈ ರೀತಿ ದೊಡ್ಡ ಗಲಾಟೆ ಆಯಿತು. ಸ್ವಲ್ಪ ತಾಳ್ಮೆ ವಹಿಸಬೇಕಾಗಿತ್ತು. ಈ ಘಟನೆಯ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಲ್ಪಸಂಖ್ಯಾತರು ಸಹ ಸಹಕರಿಸಬೇಕೆಂದರು.

ಈ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ದೇಶದಲ್ಲಿ ಕಾಂಗ್ರೆಸ್ ಎಲ್ಲಾ ಕಡೆ ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ. ರಾಜೀವ್ ಗಾಂಧಿ ನಂತರ ಪಕ್ಷಕ್ಕೆ ಒಳ್ಳೆಯ ಅಧ್ಯಕ್ಷರು ಸಿಗಲಿಲ್ಲ. ಈಗ ಅಸ್ತಿತ್ವ ಕಂಡುಕೊಳ್ಳಲು ಪರದಾಡುತ್ತಿದೆ. ಹಾಗಾಗಿ ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದೆ. ಇದ್ರಿಂದ ಅವರಿಗೇನು ಲಾಭವಾಗಲ್ಲ ಎಂದು ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.