ETV Bharat / state

ಬಿದ್ದ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ದೇವೇಗೌಡರ ಸ್ವಭಾವ: ಶ್ರೀನಿವಾಸ್ ಪ್ರಸಾದ್ ಲೇವಡಿ

ದೇವೇಗೌಡರು ಯಾವಾಗ ಏನ್ ತೀರ್ಮಾನ ಮಾಡ್ತಾರೋ ಯಾರಿಗೂ ಗೊತ್ತಾಗಲ್ಲ. ಬಿದ್ದ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ಅವರ ಸ್ವಭಾವ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದ್ದಾರೆ.

author img

By

Published : Dec 21, 2020, 3:49 PM IST

Updated : Dec 21, 2020, 8:08 PM IST

Shrinivas Prasad Statement about HDD
ಶ್ರೀನಿವಾಸ್ ಪ್ರಸಾದ್ ಲೇವಡಿ

ಮೈಸೂರು: ಹೆಚ್‌.ಡಿ.ದೇವೇಗೌಡರದ್ದು ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವ ಸ್ವಭಾವ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದರು.

ಜಯಲಕ್ಷ್ಮಿಪುರಂನ ತಮ್ಮ ನಿವಾಸದಲ್ಲಿ ಬಿಜೆಪಿ ಜೊತೆ ಜೆಡಿಎಸ್ ವಿಲೀನ ವಿಚಾರದ ಬಗ್ಗೆ ಮಾತನಾಡಿದ ಅವರು, ಸದ್ಯದ ಸ್ಥಿತಿಯಲ್ಲಿ ವಿಲೀನ ಕಷ್ಟ ಸಾಧ್ಯ. ವಿಲೀನ, ಹೊಂದಾಣಿಕೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಜೆಡಿಎಸ್‌ಗೆ ಹತಾಶ ಸ್ಥಿತಿ ಇದೆ. ಬಿಜೆಪಿ ಜೊತೆ ಬರುವುದು ಜೆಡಿಎಸ್‌ಗೆ ಅನಿವಾರ್ಯ ಇದೆ. ಜೆಡಿಎಸ್‌ ತನ್ನ ನೆಲೆಗಳಲ್ಲೇ ಸೋಲು ಕಂಡಿದೆ ಎಂದು ಹೇಳಿದರು.

ಸಂಸದ ಶ್ರೀನಿವಾಸ್ ಪ್ರಸಾದ್

ತುಮಕೂರಿನಲ್ಲಿ ಸ್ವತಃ ದೇವೇಗೌಡರೇ ಸೋತರು. ರಾಜಕೀಯ ಭವಿಷ್ಯಕ್ಕಾಗಿ ಅವರಿಗೆ ಬಿಜೆಪಿ ಜೊತೆ ಹೊಂದಾಣಿಕೆ ಅನಿವಾರ್ಯ. ಜೆಡಿಎಸ್ ವಿಲೀನ ವಿಚಾರವಾಗಿ ದೇವೇಗೌಡರೇ ತೀರ್ಮಾನ ಮಾಡಿದಂತಿದೆ‌. ಕಾಂಗ್ರೆಸ್‌ ಮೈತ್ರಿಯಿಂದ ಹೊರ ಬಂದಿದ್ದಾರೆ. ದೇವೇಗೌಡರಿಗೆ ನಾನು‌ ವೈಯುಕ್ತಿಕವಾಗಿ ಸಲಹೆ ಕೊಡಲ್ಲ. ಅವರು ಯಾವಾಗ ಏನ್ ತೀರ್ಮಾನ ಮಾಡ್ತಾರೋ ಯಾರಿಗೂ ಗೊತ್ತಾಗಲ್ಲ. ಬಿದ್ದ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ದೇವೆಗೌಡರ ಸ್ವಭಾವ ಎಂದರು. ಹೊಂದಾಣಿಕೆ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನ ಅಂತಿಮ. ಕೇವಲ ಎರಡು ಮೂರು ಜಿಲ್ಲೆಗೆ ಸೀಮಿತವಾಗಿರುವ ಜೆಡಿಎಸ್‌ಗೆ ಸಿಎಂ ಸ್ಥಾನ ಬಿಟ್ಟುಕೊಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ವಿಲೀನದಂತಹ ಅವಿವೇಕತನ ಪ್ರದರ್ಶನ ಜೆಡಿಎಸ್​​​ ಮಾಡುವುದಿಲ್ಲ: ಹೆಚ್​.ಡಿ.ಕುಮಾರಸ್ವಾಮಿ

ಸಿದ್ದರಾಮಯ್ಯ ಸತ್ತ ಕೋಳಿ: ಒಳ ಒಪ್ಪಂದದಿಂದ ನನ್ನನ್ನು ನಂಜನಗೂಡು ಉಪಚುನಾವಣೆಯಲ್ಲಿ ಸೋಲಿಸಿದ್ರು‌. ಸಿದ್ದರಾಮಯ್ಯನವ್ರೇ ನಿಮಗೆ ಈಗ ಸೋಲಿನ ಕಹಿ ಅರ್ಥ ಆಯ್ತಾ ಎಂದು ಪ್ರಶ್ನಿಸಿದರು. ನಾನು ನಂಜನಗೂಡು ಉಪಚುನಾವಣೆಯಲ್ಲಿ ಸೋತ ಮರುದಿನವೇ ಹೇಳಿದ್ದೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲ್ತಾರೆಂದು. ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಕಾಣಲ್ಲ ಅನ್ಕೊಂಡಿದ್ದೀರಾ. ಸಿದ್ದರಾಮಯ್ಯ ಹತಾಶನಾಗಿ ಸತ್ತ ಕೋಳಿಯಂತಾಗಿದ್ದಾರೆ. ಸತ್ತ ಕೋಳಿ ಬೆಂಕಿಗೆ ಹೆದರುವಂತಾಗಿದೆ ಸಿದ್ದರಾಮಯ್ಯನವರ ಸದ್ಯದ ಸ್ಥಿತಿ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ, ಮಹದೇವಪ್ಪ ತೋರಿದ ದರ್ಪ, ದುರಹಂಕಾರ ಈ ಪರಿಸ್ಥಿತಿಗೆ ಕೊಂಡೊಯ್ದಿದೆ‌ ಎಂದರು.

Last Updated : Dec 21, 2020, 8:08 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.