ETV Bharat / state

ಬಿಜೆಪಿ, ಕಾಂಗ್ರೆಸ್​​ ನಾಯಕರು ಹೊಂದಾಣಿಕೆಯಲ್ಲಿದ್ದೀರಾ: ಸಂಸದ ಪ್ರತಾಪ್ ಸಿಂಹ ಪ್ರಶ್ನೆ - ವಿದ್ಯುತ್ ಬೆಲೆ ಜಾಸ್ತಿ

ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರುತ್ತೀರಿ‌. ಕರೆಂಟ್ ಬಿಲ್ ಹೆಚ್ಚಾಗಿ ಜನರಿಗೆ ತೊಂದರೆ ಆಗುತ್ತಿದೆ. ಇದನ್ನು ಪ್ರಶ್ನಿಸುವವರನ್ನು ಮನುವಾದಿಗಳು ಎಂದು ಕರೆಯುತ್ತೀರಾ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
author img

By

Published : Jun 13, 2023, 4:56 PM IST

Updated : Jun 13, 2023, 6:03 PM IST

ಸಂಸದ ಪ್ರತಾಪ್ ಸಿಂಹ ಪ್ರಶ್ನೆ

ಮೈಸೂರು : ಬಿಜೆಪಿಯನ್ನು 40% ಸರ್ಕಾರ ಎಂದು ಪ್ರಚಾರ ಮಾಡಿದ್ದೀರಿ. ಈಗ ನಿಮ್ಮದೇ ಸರ್ಕಾರ ಬಂದಿದೆ. ಈ ಬಗ್ಗೆ ತನಿಖೆ ಮಾಡಿಸಿ. ಯಾಕೆ ತನಿಖೆ ಮಾಡಿಸುತ್ತಿಲ್ಲ. ಹಿರಿಯ ನಾಯಕರೆಲ್ಲ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೀರಾ ಎಂದು ಸಂಸದ ​ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, '' ಸ್ವಾಮಿ ಸಿದ್ದರಾಮಯ್ಯನವರೇ ತನಿಖೆ ಮಾಡಿ ಸಾರ್​.. ನೀವು ವಿರೋಧ ಪಕ್ಷದಲ್ಲಿದ್ದಾಗ ನಮ್ಮವರು ಅರ್ಕಾವತಿ ಡಿನೋಟಿಫಿಕೇಷನ್​, ಅದರ ರೀಡೂ ಅಂತಾರೆ. ನಿಮ್ಮ ವಿರುದ್ಧ ಏನೋ ಒಂದು ರೀತಿ ತೋಳ ಬಂತು ತೋಳ ಅನ್ನೋ ಕಥೆ ತರ ಬಿಟ್ಟು ಬಿಟ್ಟು ಬಿಡ್ತೀವಿ ಅಂತಾರೆ. ಬಿಡಲ್ಲ.. ನೀವು ಅಧಿಕಾರಕ್ಕೆ ಬಂದಾದಮೇಲೆ ಈ ಕಥೆ ಹೇಳ್ತಿರಿ. ಅಂದ್ರೆ ಏನ್​ ಅಡ್ಜೆಸ್ಟಮೆಂಟ್​ಲ್ಲಿದ್ದೀರಾ ನೀವೆಲ್ಲ?, ಸೀನಿಯರ್ಸ್​ ಎಲ್ಲಾ ಅಡ್ಜೆಸ್ಟಮೆಂಟ್​ಲ್ಲಿದ್ದೀರಾ ನೀವು? ತನಿಖೆಗೆ ಆದೇಶ ಮಾಡಿ. ನೀವು ಹೇಳಿದ್ದ 40 ಪರ್ಸೆಂಟ್​ ಆರೋಪವನ್ನು ಪ್ರೂವ್​ ಮಾಡಬೇಕು ಈಗ, ಬಿಟ್​ಕಾಯಿನ್​ನಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ ಅಂದ್ರಲ್ಲಾ ಅದನ್ನೀಗ ಪ್ರೂವ್​ ಮಾಡಬೇಕು, ಪಿಎಸ್​ಐ ಹಗರಣದಲ್ಲಿ ಯಾರಾರು ಭಾಗಿಯಾಗಿದಾರೆ, ಅವರು ಬಿಜೆಪಿಯವರೇ ಆಗಿರಬರಬಹುದು ಹಿಡಿದು ತಗೋಬನ್ನಿ, ಶಿಕ್ಷೆ ಕೊಡಿ. ನಾನು ಆವತ್ತೇ ಹೇಳಿದೀನಿ, ನಾನು ಬಂದು ಕಾಲಿಗೆ ನಮಸ್ಕಾರ ಮಾಡ್ತಿನಿ ಅಂತಾ. ನಮಸ್ಕಾರ ಅಷ್ಟೇ ಅಲ್ಲಾ, ನಿಮ್ಮ ಪಾದ ಪೂಜೆನೂ ಮಾಡಿ ಹೋಗ್ತಿನಿ'' ಎಂದರು.

ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರುತ್ತೀರಿ‌. ಕರೆಂಟ್ ಬಿಲ್ ಹೆಚ್ಚಾಗಿ ಜನರಿಗೆ ತೊಂದರೆ ಆಗುತ್ತಿದೆ. ಇದನ್ನು ಪ್ರಶ್ನಿಸುವವರನ್ನು ಮನುವಾದಿಗಳು ಎಂದು ಕರೆಯುತ್ತೀರಿ. ಕರೆಂಟ್ ಬಿಲ್ ಜಾಸ್ತಿ ಆಗಿದೆ ಬಿಜೆಪಿ ಸರ್ಕಾರ ಮಾಡಿದ್ದು ಎನ್ನುತ್ತೀರಿ. ಎಲ್ಲವನ್ನೂ ಬದಲಾಯಿಸುತ್ತೇವೆ ಎಂದು ಹೇಳುವ ನೀವು ಇದನ್ನು ತಡೆ ಹಿಡಿಯಿರಿ. ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಟಿ ವಿದ್ಯುತ್ ಬೆಲೆ ಜಾಸ್ತಿ ಮಾಡಿದೆ. ಇದಕ್ಕೆ ಬಿಜೆಪಿಯನ್ನು ಯಾಕೆ ಹೊಣೆ ಮಾಡುತ್ತೀರಿ, ಇದನ್ನು ತಡೆ ಹಿಡಿಯಿರಿ ಎಂದು ಆಗ್ರಹಿಸಿದರು.

ಎಷ್ಟೇ ಕಷ್ಟ ಬಂದರೂ ನಾವು ಯೋಜನೆಗಳನ್ನು ಕೊಡುತ್ತೇವೆ ಎಂದು ಹೇಳುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಎಂ ಬಿ ಪಾಟೀಲ್, ಜಾರ್ಜ್ ಇವರು ತಮ್ಮ ಸ್ವಂತ ಆಸ್ತಿಯನ್ನು ಮಾರಿ ಹಣ ಕೊಡುವುದಿಲ್ಲ. ಒಂದಿಷ್ಟು ಜನರಿಂದ ದೋಚಿ ಮತ್ತಷ್ಟು ಜನರಿಗೆ ಕೊಡುತ್ತೀರಿ. ನಿಮ್ಮ ಬೆವರಿನ ಹಣ ಅಲ್ಲ. ಇವೆಲ್ಲ ನಾಟಕ ಬೇಡ. ಕರ್ನಾಟಕದಲ್ಲಿ ಮೊದಲ ಮುಖ್ಯಮಂತ್ರಿಯಿಂದ ಹಿಡಿದು ಬಸವರಾಜ ಬೊಮ್ಮಾಯಿ ಆಡಳಿತದವರೆಗೆ ಎಷ್ಟು ಸಾಲ ಇತ್ತು ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಿ, ಜೊತೆಗೆ ನಿಮ್ಮ ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ 56 ಸಾವಿರ ಕೋಟಿ ರೂಪಾಯಿ ಬೇಕು ಎಂದು ಹೇಳಿದ್ದೀರಿ. ಐದು ವರ್ಷಕ್ಕೆ ಎಷ್ಟು ಬೇಕು, ಆದಾಯದ ಮೂಲ ಯಾವುದು ಎಂಬುದರ ಬಗ್ಗೆ ಜನರಿಗೆ ತಿಳಿಸಿ ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದರು.

ಗ್ಯಾರಂಟಿಗಳನ್ನು ನೋಡಿ ಜನ ಮತ ಹಾಕಿದ್ದಾರೆ : ಸರ್ಕಾರ ಅನ್ನುವುದು ನಿರಂತರ ಪ್ರಕ್ರಿಯೆ, ನಿಮ್ಮ ಕಾಂಗ್ರೆಸ್ ಮುಖ ನೋಡಿಕೊಂಡು ಯಾರೂ ವೋಟು ಹಾಕಿಲ್ಲ, ಗ್ಯಾರಂಟಿಗಳನ್ನು ನೋಡಿ ರಾಜ್ಯದ ಜನ ನಿಮಗೆ ಮತ ಹಾಕಿದ್ದಾರೆ. ಇದರಿಂದ ನೀವು ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಮಾಡುವುದು ಬೇಡ ಎಂದು ಸಲಹೆ ನೀಡಿದರು.

2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಬೆಂಬಲಿಸುತ್ತಾರೆ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಪ್ರತಾಪ್ ಸಿಂಹ, ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಮುಖ ನೋಡಿ ಯಾರು ಮತ ಹಾಕಿಲ್ಲ. ನಿಮ್ಮ ಗ್ಯಾರಂಟಿಗಳನ್ನು ನೋಡಿ ಜನ ಕಾಂಗ್ರೆಸ್ ಗೆ ಮತ ಹಾಕಿ ಮೋಸ ಹೋಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಜನರು ಮೋದಿಯವರನ್ನು ಜನ ಬೆಂಬಲಿಸುತ್ತಾರೆ. ಹಿಂದೆ 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಜನ ಮೋದಿಯವರಿಗೆ ಮತ ನೀಡಿದರು ಎಂದು ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು.

ಟೋಲ್ ದರ ಹೆಚ್ಚಳದ ಬಗ್ಗೆ ಸಂಸದರ ಸ್ಪಷ್ಟನೆ : ಮೈಸೂರು-ಬೆಂಗಳೂರು ಹೈ ವೇ ರಸ್ತೆಯಲ್ಲಿ ಫಾಸ್ಟ್ ಟ್ಯಾಗ್ ಸಮಸ್ಯೆ ಬಗ್ಗೆ ಸ್ಪಷ್ಟನೆ ನೀಡಿದ ಅವರು , ಈ ಸಮಸ್ಯೆ ಆರಂಭದಲ್ಲಿ ಇತ್ತು. ಈಗ ಎಲ್ಲಾ ಸರಿಯಾಗಿದೆ. ಫಾಸ್ಟ್ ಟ್ಯಾಗ್ ಇರದಿದ್ದರೆ ಡಬಲ್ ಚಾರ್ಜ್ ಕಟ್ಟುವುದು ಕಡ್ಡಾಯ. ಜೊತೆಗೆ ದೇಶದ ಆರ್ಥಿಕ ವರ್ಷ ಆರಂಭವಾದಾಗ ಟೋಲ್ ದರ ಹೆಚ್ಚುವುದು ಸಹಜ, ಏಪ್ರಿಲ್ ನಲ್ಲಿಯೇ ಹೆಚ್ಚಳ ಆಗಬೇಕಿತ್ತು. ಆದರೆ ಆಗಿಲ್ಲ. ಈಗ ಟೋಲ್ ದರ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು. ಟೋಲ್ ದರ ಹೆಚ್ಚಳದ ಬಗ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಆದರೆ ಈಗ ಅವರದೇ ಸರ್ಕಾರ ಅಧಿಕಾರಕ್ಕೆ ಬಂದಿದೆ, ಟೋಲ್ ದರವನ್ನು ಫ್ರೀ ಮಾಡಿಸಿ, ಟೋಲ್ ದರದ ಹಣವನ್ನು ಸರ್ಕಾರವೇ ಭರಿಸಲಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ : 'ಅರ್ಥರಹಿತ ಮಾತುಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ': ಪ್ರತಾಪ್​ ಸಿಂಹಗೆ ಸಚಿವ ಹೆಚ್.ಸಿ‌‌‌.ಮಹದೇವಪ್ಪ ಟಾಂಗ್​​

Last Updated : Jun 13, 2023, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.