ಮೈಸೂರು : ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ನೀವು ಬನ್ನಿ ಎಂದು ಮಾಜಿ ಸಚಿವ ಮಹದೇವಪ್ಪ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಂಸದ ಪ್ರತಾಪ್ ಸಿಂಹ ಬಹಿರಂಗವಾಗಿಯೇ ಪಂಥಾಹ್ವಾನ ನೀಡಿದ್ದಾರೆ. ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಆಯೋಜನೆ ಮಾಡಿರುವ ಮಾನವೀಯತೆಗಾಗಿ ಯೋಗ ಪ್ರದರ್ಶನ ಕಾರ್ಯಕ್ರಮದ ಮಾಹಿತಿಯನ್ನೊಳಗೊಂಡ ಪ್ರಾತ್ಯಕ್ಷತೆ ವೀಕ್ಷಣೆ ಮಾಡಿದ ಬಳಿಕ ಅವರು ಕಾಂಗ್ರೆಸ್ ನಾಯಕರಿಗೆ ಈ ಸವಾಲು ಹಾಕಿದ್ದಾರೆ.
ಯೋಗ ವಸ್ತು ಪ್ರದರ್ಶನ ವೀಕ್ಷಣೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಆಗಮಿಸುತ್ತಿದ್ದು, ಇದರಿಂದ ಮತ್ತಷ್ಟು ದಿನಗಳ ಕಾಲ ಯೋಗ ವಸ್ತು ಪ್ರದರ್ಶನವನ್ನು ವಿಸ್ತರಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಹೆಚ್.ಸಿ ಮಹಾದೇವಪ್ಪ, ಸಿದ್ದರಾಮಯ್ಯಗೆ ಪಂಥಾಹ್ವಾನ : ಯಾವುದೇ ಅಭಿವೃದ್ಧಿ ಮಾಡದ ಸಂಸದ ಪ್ರತಾಪ್ ಸಿಂಹ ಕೇವಲ ಬೊಗಳೆ ಬಿಡುತ್ತಾರೆ ಎಂಬ ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ ಸಿಂಹ, ಯಾರು ಬೊಗಳೆ ಬಿಡುತ್ತಿದ್ದಾರೆ ಎಂಬುದನ್ನು ಬಹಿರಂಗವಾಗಿ ಚರ್ಚೆ ಮಾಡೋಣ. ನಾನು ಅಂಕಿ-ಅಂಶಗಳ ಸಮೇತ ನೀವು ಕರೆದ ಜಾಗಕ್ಕೆ, ನೀವು ಕರೆದ ಸಮಯಕ್ಕೆ ಬರುತ್ತೇನೆ. ಸುಮ್ಮನೆ ಮಾಧ್ಯಮಗಳಿಗೆ ಹೇಳಿಕೆ ನೀಡುವುದಕ್ಕಿಂತ ಬಹಿರಂಗ ಚರ್ಚೆ ಮಾಡೋಣ ಎಂದು ಹೆಚ್ .ಸಿ ಮಹದೇವಪ್ಪ ಹಾಗೂ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಪಂಥಾಹ್ವಾನ ನೀಡಿದ್ದಾರೆ.
ಓದಿ : ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ: ಸಚಿವ ಶ್ರೀರಾಮುಲು