ETV Bharat / state

ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರ ಡ್ರೆಸ್‌ಕೋಡ್ ಅಭಿಯಾನಕ್ಕೆ ಸಂಪೂರ್ಣ ಬೆಂಬಲ: ಪ್ರತಾಪ್ ಸಿಂಹ - ಮೈಸೂರು ಚಾಮುಂಡಿ ಬೆಟ್ಟ

ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದ ಡ್ರೆಸ್ ಕೋಡ್ ಅಭಿಯಾನಕ್ಕೆ ನನ್ನ ಬೆಂಬಲ ಇದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಇದೇ ವೇಳೆ ಕೋವಿಡ್‌ ಬಗ್ಗೆ ಮಾತನಾಡಿದ ಅವರು, ಚೀನಾದ ಪರಿಸ್ಥಿತಿ ನಮ್ಮ ದೇಶಕ್ಕೆ ಬರಲ್ಲ ಎಂದರು.

pratap simha
ಪ್ರತಾಪ್ ಸಿಂಹ
author img

By

Published : Dec 27, 2022, 6:41 PM IST

ಮೈಸೂರು: ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಆರಂಭವಾಗಿರುವ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮುಡಾ ಕಚೇರಿಗೆ ಭೇಟಿ ನೀಡಿ ಪಕ್ಷದ ಹಿರಿಯರಾದ ಯಶಸ್ವಿನಿ ಸೋಮಶೇಖರ್ ಅವರಿಗೆ ಅಭಿನಂದನೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಮೈಸೂರು ನಗರದ ಮುಡಾದಲ್ಲಿ ಸಕಾಲಕ್ಕೆ ಸಭೆಗಳು ನಡೆಯದೇ ಜನರು ಹಾಗೂ ಡೆವಲಪರ್ಸ್​ಗಳಿಗೆ ಸಮಸ್ಯೆ ಆಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಸಭೆ ನಡೆಸಿ ಎಲ್ಲ ಫೈಲ್​ಗಳನ್ನು ಕ್ಲಿಯರ್ ಮಾಡುವಂತೆ ನೂತನ ಅಧ್ಯಕ್ಷರಲ್ಲಿ ಕೋರಿದ್ದೇನೆ ಎಂದು ತಿಳಿಸಿದರು.

ನಗರದಲ್ಲಿ ಪ್ರತಿ ತಿಂಗಳು ಸಭೆ ನಡೆಯದೇ ಇರುವುದರಿಂದ ಜನರಿಗೆ ಡೆವಲಪರ್ಸ್‌ಗಳ ಬಗ್ಗೆ ಕೆಟ್ಟ ಅಭಿಪ್ರಾಯ ಬಂದಿದೆ. ಅಲ್ಲದೇ ಜನರಿಗೂ ಇದರಿಂದಾಗಿ ನಿಗದಿತ ಸಮಯದಲ್ಲಿ ಸೈಟ್ ಕೊಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರು ಬಗೆಹರಿಸಬೇಕೆಂದು ಕೇಳಿಕೊಂಡಿದ್ದೇನೆ ಎಂದರು.

ಚಾಮುಂಡಿ ಬೆಟ್ಟ ಡ್ರೆಸ್ ಕೋಡ್ ಅಭಿಯಾನ: ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಇಂದು ಆರಂಭವಾಗಿರುವ ಅಭಿಯಾನಕ್ಕೆ ನನ್ನ ಬೆಂಬಲವಿದೆ. ಅಲ್ಲದೇ ಈ ವಿಷಯವನ್ನು ಸಾರ್ವಜನಿಕರು ನನ್ನ ಗಮನಕ್ಕೆ ಹಲವು ಬಾರಿ ತಂದಿದ್ದಾರೆ. ಕೆಲವರು ದೇವಿಯ ದರ್ಶನಕ್ಕೆಂದು ಬರುವಾಗ ಬೇರೆ ಬೇರೆ ತರಹದ ಬಟ್ಟೆಗಳನ್ನು ಧರಿಸಿಕೊಂಡು ಬರುತ್ತಾರೆ. ಇದು ಕೆಲವು ಸಲ ಮುಜುಗರಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ಮೂಗಿನ ಮೂಲಕ ಹಾಕುವ ಇಂಕೋವ್ಯಾಕ್ಸ್​ ಕೊರೊನಾ ಲಸಿಕೆಗೆ ದರ ನಿಗದಿ.. ದರ ಎಷ್ಟು ಗೊತ್ತಾ?

ಹೊರ ರಾಜ್ಯ ಕೇರಳ ಹಾಗೂ ನಮ್ಮ ರಾಜ್ಯದ ಕೆಲವು ದೇವಸ್ಥಾನಗಳಲ್ಲೂ ಸಹ ಡ್ರೆಸ್ ಕೋಡ್ ಇದೆ. ಅದೇ ರೀತಿ ಚಾಮುಂಡಿ ಬೆಟ್ಟಕ್ಕೆ ಬರುವ ಪುರುಷರು ಹಾಗೂ ಮಹಿಳಾ ಭಕ್ತರಿಗೆ ಸಾಂಪ್ರದಾಯಿಕ ರೀತಿಯ ಉಡುಗೆಗಳನ್ನು ಪ್ರತ್ಯೇಕವಾಗಿ ಡ್ರೆಸ್ ಕೋಡ್ ರೀತಿಯಲ್ಲಿ ನಿಗದಿ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಬರುವವರಿಗೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಬರುವಂತೆ ನಾನು ಕೂಡ ಮನವಿ ಮಾಡುತ್ತೇನೆ ಎಂದರು.

ಜನರಿಗೆ ಕೋವಿಡ್ ಬಗ್ಗೆ ಭಯ ಬೇಡ: ಚೀನಾದಲ್ಲಿ ಕೋವಿಡ್ ಪ್ರಮಾಣಗಳು ಹೆಚ್ಚಾಗಿರುವುದಕ್ಕೆ ನಾವು ಭಯಪಡಬೇಕಾಗಿಲ್ಲ. ಅಲ್ಲಿ ಹೆಚ್ಚಾಗಿದೆ ಇಲ್ಲಿಗೆ ಬಂದೇ ಬಿಡ್ತು ಎಂಬ ಭೂತದ ಕತೆ ನಮಗೆ ಅಗತ್ಯವಿಲ್ಲ. ಚೀನಾದ ಪರಿಸ್ಥಿತಿಯೇ ಬೇರೆ ನಮ್ಮ ಪರಿಸ್ಥಿತಿಯೇ ಬೇರೆ. ಚೀನಾದಲ್ಲಿ ಏನಾಗುತ್ತಿದೆ ಎಂಬುದು ಹೊರ ಜಗತ್ತಿಗೆ ಗೊತ್ತಾಗುತ್ತಿಲ್ಲ ಅಷ್ಟೇ. ಅಲ್ಲಿನ ಸಮಸ್ಯೆ ಭಾರತದಲ್ಲಿ ಆಗಲು ಸಾಧ್ಯವಿಲ್ಲ.

ಅಲ್ಲದೇ ಭಾರತದಲ್ಲಿ ಎರಡು ವರ್ಷ ಕೋವಿಡ್ ನಿಭಾಯಿಸಿದ ಅನುಭವ ಕೇಂದ್ರ ಸರ್ಕಾರಕ್ಕೆ ಇದೆ. ಎಲ್ಲ ದೇಶಕ್ಕಿಂತ ಮುಂಚಿತವಾಗಿ ನಮ್ಮ ದೇಶದಲ್ಲಿ ಸ್ವದೇಶಿ ಉತ್ಪಾದನೆ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಎಲ್ಲರಿಗೂ ಕೊಡಿಸಿದೆ. ಕೋವಿಡ್​ನಿಂದ ಜನರನ್ನು ಪಾರು ಮಾಡಿದೆ. ಹೀಗಿರುವಾಗ ಯಾವುದೇ ರೀತಿಯ ಭಯ ನಮಗೆ ಬೇಡ. ಯಾವುದೇ ಸಂದರ್ಭ ಬಂದರೂ ಪರಿಸ್ಥಿತಿ ಎದುರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದರು. ಇನ್ನು ಜನಾರ್ಧನ ರೆಡ್ಡಿ ತಮ್ಮ ಹೊಸ ಪಕ್ಷ ಕಟ್ಟಿದ್ದು ಬಿಜೆಪಿಗೆ ತೊಂದರೆ ಆಗುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಇದನ್ನೂ ಓದಿ: ಕೋವಿಡ್ ರೂಪಾಂತರಿ ತಳಿಯ ಬಗ್ಗೆ ಸರ್ಕಾರ ಎಚ್ಚರವಹಿಸಿದೆ: ಸಚಿವ ಸುಧಾಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.