ETV Bharat / state

ತಾಲೂಕು ಕೋರ್ಟ್​​​ನಲ್ಲಿ ಪ್ರ್ಯಾಕ್ಟೀಸ್ ಮಾಡಿದ್ದ ಸಿದ್ದರಾಮಯ್ಯಗೆ ಎಕಾನಮಿ ಹೇಗೆ ಅರ್ಥವಾಗುತ್ತೆ? - ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ

ಪಿಎಂ ನರೇಂದ್ರ ಮೋದಿ ಅವರ 8 ವರ್ಷದ ಸಾಧನೆ ಬಗ್ಗೆ ಶುಕ್ರವಾರದಂದು ಪತ್ರಿಕಾ ಹೇಳಿಕೆ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದ ಹಿನ್ನೆಲೆ ಸಿದ್ದರಾಮಯ್ಯ ಅವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಟೀಕೆಗಳ ಮಳೆ ಸುರಿಸಿದ್ದಾರೆ.

mp pratap simha
ಸಂಸದ ಪ್ರತಾಪ್ ಸಿಂಹ
author img

By

Published : Jun 4, 2022, 12:40 PM IST

ಮೈಸೂರು: ತಾಲೂಕು ಕೋರ್ಟ್​​ನಲ್ಲಿ ಪ್ರ್ಯಾಕ್ಟೀಸ್ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಎಕಾನಮಿ ಹೇಗೆ ಅರ್ಥ ಆಗುತ್ತೆ? ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ 8 ವರ್ಷದ ಸಾಧನೆ ಬಗ್ಗೆ ಶುಕ್ರವಾರದಂದು ಪತ್ರಿಕಾ ಹೇಳಿಕೆ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದ ಹಿನ್ನೆಲೆ, ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಅವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ಸಂಸದ ಪ್ರತಾಪ್ ಸಿಂಹ

ತಾಲೂಕು ಕೋರ್ಟ್​ನಲ್ಲಿ ಪ್ರ್ಯಾಕ್ಟೀಸ್ ಮಾಡಿದ್ದ ಸಿದ್ದರಾಮಯ್ಯಗೆ ಎಕಾನಮಿ ಹೇಗೆ ಅರ್ಥ ಆಗುತ್ತೆ? ಯಾವುದೋ ಒಂದು ಲಾ ಕಾಲೇಜಿನಲ್ಲಿ ಲಾ ಓದಿದವರಿಗೆ ದೇಶದ ಎಕಾನಮಿ ಅರ್ಥ ಆಗೋದು ಹೇಗೆ? ಎಂದು ಪ್ರಶ್ನಿಸಿದರು. ಅನ್ನ ಭಾಗ್ಯ ಕೊಟ್ಟೆ ಎನ್ನುವ ಸಿದ್ದರಾಮಯ್ಯ ಅವರು, ಅವರ ಸ್ವಂತ ಹಣದಿಂದ ಕೊಟ್ಟರೇ? 13 ಬಜೆಟ್ ಬಿಡುಗಡೆ ಮಾಡಿದ್ದ ವ್ಯಕ್ತಿ ಈ ರೀತಿಯ ಅಸಂಬದ್ಧ ಹೇಳಿಕೆ ನೀಡುತ್ತಾರೆ. ಮೈಸೂರಿನಿಂದ ಇಂತಹ ಒಬ್ಬ ವಿಚಾರಹೀನ ವ್ಯಕ್ತಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇವರು ನಮ್ಮೂರಿನವರು ಅಂತಾ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಾಲದ ಸುನಾಮಿಯಲ್ಲಿ ದೇಶ, ರಾಜ್ಯ - ಇದು ಮೋದಿ ಸರ್ಕಾರದ ಸಾಧನೆ: ಸಿದ್ದರಾಮಯ್ಯ ವ್ಯಂಗ್ಯ

ದೇವರಾಜ ಮಾರುಕಟ್ಟೆಯನ್ನು ಸ್ವಂತ ದುಡ್ಡಿನಿಂದ ಮಾಡಿದರಾ ಎಂದು ಪ್ರಶ್ನೆ ಮಾಡಿದರು, ಅದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸ್ವಂತ ದುಡ್ಡಿನಲ್ಲಿ ಮಾಡಿದ್ದೇನು? ಇನ್ನೊಬ್ಬರನ್ನು ಟೀಕಿಸುವ ಮೊದಲು ನಿಮ್ಮ ಆಡಳಿತಾವಧಿಯಲ್ಲಿ ಆದ ವ್ಯವಸ್ಥೆ ನೋಡಿ ಎಂದು ಕಿಡಿ ಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.