ಮೈಸೂರು: ಪತ್ರಿನಿತ್ಯ ಗಂಡನೊಂದಿಗೆ ನಡೆಯುತ್ತಿದ್ದ ಗಲಾಟೆಯಿಂದ ಬೇಸತ್ತ ಪತ್ನಿ, ತನ್ನಿಬ್ಬರ ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಮೈಸೂರು ತಾಲ್ಲೂಕಿನ ಮಾನಸಿ ನಗರದಲ್ಲಿ ನಡೆದಿದೆ.
ಉಮಾ ಅವರು ತನ್ನಿಬ್ಬರ ಮಕ್ಕಳಾದ ಲೇಖನಾ ಹಾಗೂ ರಚನಾಳೊಂದಿಗೆ ನಾಪತ್ತೆಯಾದವರು. ಮೈಸೂರು ತಾಲ್ಲೂಕಿನ ಮಾನಸಿ ನಗರದ ನಿವಾಸಿ ಬಸವಣ್ಣ ಪತ್ನಿ ಉಮಾ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದರಿಂದ ಸಂಬಂಧಿಕರು ರಾಜಿ ಮಾಡಿ ಕುಟುಂಬ ನಡೆಸುವಂತೆ ತಿಳಿ ಹೇಳಿದ್ದರು. ಆದರೆ ಮತ್ತೆ ಗಂಡ-ಹೆಂಡತಿ ನಡುವೆ ಗಲಾಟೆ ನಡೆದಿದೆ. ಇದರಿಂದ ಬೇಸರಗೊಂಡು ಉಮಾ ತನ್ನಿಬ್ಬರ ಮಕ್ಕಳೊಂದಿಗೆ ಮಾ.2ರಂದು ನಾಪತ್ತೆಯಾಗಿದ್ದಾರೆ.
ತವರು ಮನೆ ಅಥವಾ ಸಂಬಂಧಿಕರ ಮನೆಗೆ ಹೋಗಿರಬಹುದು ಮತ್ತೆ ಹೆಂಡತಿ ಮಕ್ಕಳೊಂದಿಗೆ ವಾಪಸ್ ಬರುತ್ತಾಳೆ ಎಂದು ಭಾವಿಸಿದ ಗಂಡನಿಗೆ, ಇಷ್ಟು ದಿನವಾದರು ಬಾರದೇ ಇದ್ದಾಗ ಆತಂಕಗೊಂಡು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ.