ಮೈಸೂರು: ಕ್ಯಾನ್ಸರ್ ರೋಗದಿಂದ ತಾಯಿ ಸಾವನ್ನಪ್ಪಿದ್ದು, ಇದರ ನೋವಿನ ನಡುವೆಯೂ ಮಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ಘಟನೆ ನಡೆದಿದೆ.
ಬೀರಿಹುಂಡಿ ಗ್ರಾಮದ ಲಕ್ಷ್ಮಮ್ಮ ನಿನ್ನೆ ಸಂಜೆ ಸಾವನ್ನಪ್ಪಿದ್ದು , ಇಂದು ಅವರ ಮಗಳು ದೀಪಾ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಿತ್ತು. ಆದರೆ ತಾಯಿಯ ಸಾವಿನಿಂದ ಪರೀಕ್ಷೆ ಬರೆಯಲು ದೀಪಾ ನಿರಾಕರಿಸಿದ್ದಳು.
ಮನೆಯಲ್ಲೆ ಇದ್ದ ವಿದ್ಯಾರ್ಥಿನಿಗೆ ಗ್ರಾಮದ ಜನರು ಧೈರ್ಯ ತುಂಬಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ ಶಿವಣ್ಣ ದೀಪಾಳನ್ನು ತನ್ನ ಕಾರ್ನಲ್ಲಿ ಕರೆದುಕೊಂಡು ಹೋಗಿ ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿದ್ದಾರೆ.
ವಿದ್ಯಾರ್ಥಿನಿ ಪರೀಕ್ಷೆ ಬರೆದ ನಂತರ ಮಧ್ಯಾಹ್ನ ತಾಯಿಯ ಶವ ಸಂಸ್ಕಾರ ನಡೆಯಲಿದೆ.