ETV Bharat / state

ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬಂದಾಗ ಪ್ರಳಯ ಆಗಿತ್ತಾ..? ಹೆಚ್​.ವಿಶ್ವನಾಥ್ - ಹೆಚ್​.ವಿಶ್ವನಾಥ್ ಹೇಳಿಕೆ

ಮೈಸೂರಿನಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

MLC H Vishwantah press meet
ಸಿದ್ದರಾಮಯ್ಯ ವಿರುದ್ದ ವಿಶ್ವನಾಥ್ ವಾಗ್ದಾಳಿ
author img

By

Published : Jul 4, 2021, 12:53 PM IST

Updated : Jul 4, 2021, 2:29 PM IST

ಮೈಸೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆದಾಕ್ಷಣ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. ಆದರೆ, ಅವರ ಸೌಜನ್ಯ ಇದೆಯಲ್ಲ ಅದು ಮೆಚ್ಚುವಂತಹದ್ದು.
ಸಿದ್ದರಾಮಯ್ಯಗೆ ನಾವು ಬಂದು ಬಿಡ್ತೀವಿ ಅನ್ನೋ ಆತಂಕನೂ‌ ಬೇಡ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಒಬ್ಬ ಸಂಘಟನಾ ಚತುರ. ನಿಮ್ಮನ್ನು (ಸಿದ್ದರಾಮಯ್ಯ) ಜೆಡಿಎಸ್‌ನಿಂದ ಕಿತ್ತೆಸೆದಾಗ, ಇದೇ ಡಿ.ಕೆ. ಶಿವಕುಮಾರ್, ನಾನು, ಎಸ್.ಎಂ. ಕೃಷ್ಣ ಎಲ್ಲಾ ಸೇರಿ ಕಾಂಗ್ರೆಸ್​ಗೆ ಸೇರಿಸಿಕೊಂಡೆವು. ಅವಾಗ ಯಾರಾದ್ರು ಸಿದ್ದರಾಮಯ್ಯ ಬಂದ್ರು ಪ್ರಳಯ ಆಗುತ್ತೆ ಅಂದ್ರಾ..? ದ್ವೇಷ ಸಾಧನೆ‌ ಮಾಡುವುದಲ್ಲ. ಡಿಕೆಶಿಯಂತ ಸೌಜನ್ಯ ಸಿದ್ದರಾಮಯ್ಯಗೂ ಬರಬೇಕು ಎಂದು ಕುಟುಕಿದರು.

ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್

SSLC ಪರೀಕ್ಷೆ ನಡೆಸಲು ಇದು ಸೂಕ್ತ ಸಮಯವಲ್ಲ. ಜುಲೈ 3ನೇ ವಾರದಲ್ಲಿ ಡೆಲ್ಟಾ ಪ್ಲಸ್ ಅಲೆ ಶುರುವಾಗುವ ಸಾಧ್ಯತೆ ಇದೆ ಹೇಳುತ್ತಿದ್ದಾರೆ. ಡೆಲ್ಟಾ ಪ್ಲಸ್ ಮಕ್ಕಳ ಮೇಲೆ‌ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದರಿಂದ ಎಲ್ಲಾ ಕಡೆ ಒಂದು ರೀತಿಯ ಆತಂಕದ ವಾತಾವರಣವಿದೆ ಎಂದರು.

ಓದಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳ್ತಾರೆ.. ಅವರು ಬರ್ತಾರಂತೆ, ಟಚ್‌ನಲ್ಲಿದಾರಂತೆ..

ಪರೀಕ್ಷೆಗೂ ಮುನ್ನ ಮಕ್ಕಳಿಗೆ ಸರಿಯಾದ ಪಾಠ ಪ್ರವಚನಗಳಾಗಿಲ್ಲ. ಮಕ್ಕಳು ಶಾಲೆ‌ಯ ಮುಖ ನೋಡಿ ತಿಂಗಳುಗಟ್ಟಲೆ ಆಗಿದೆ. ಹೆಚ್ಚಿನ ಮಕ್ಕಳು ಆನ್ ಲೈನ್ ಪಾಠ ಕೇಳಲು ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಪರೀಕ್ಷೆಯಿಂದ ಮಕ್ಕಳ ಮೇಲೆ‌ ಏನಾದರು ಅನಾಹುತ ಆದರೆ ಯಾರು ಹೊಣೆ? ಸುರೇಶ್ ಕುಮಾರ್ ಪರೀಕ್ಷೆ ನಡೆಸುವ ಹಠದಿಂದ ಹಿಂದೆ‌ ಬರಬೇಕು ಎಂದು ಸಲಹೆ ನೀಡಿದರು.

ಸಚಿವ ಶ್ರೀರಾಮುಲು ಪಿಎ ಬಂಧನ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಮುಲು, ಲಕ್ಷ್ಮಣಲು, ಸೀತಲು, ವಿಚಾರವನ್ನು ನಾಳೆ ಮಾತಾಡೋಣ. ಸದ್ಯ SSLC ಪರೀಕ್ಷೆ ವಿಚಾರ ಮುಖ್ಯವಾಗಿದೆ ಎಂದರು.

Last Updated : Jul 4, 2021, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.