ETV Bharat / state

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪ್ರತಾಪ್​ ಸಿಂಹ ಸಾಧನೆ ಅಲ್ಲ : ಹೆಚ್ ವಿಶ್ವನಾಥ್

author img

By

Published : Aug 22, 2021, 3:50 PM IST

ಪ್ರತಾಪ್ ಸಿಂಹ ನಾನೇ ಮಾಡಿಬಿಟ್ಟೆ ಅನ್ನೋದು ಸರಿ ಅಲ್ಲ. ಪ್ರತಾಪ್ ಸಿಂಹ ನಾನು‌ ಮಾಡಿದೆ, ನಾನು ಕಡಿದೆ ಅಂತಾ ಹೇಳುವುದು ಸರಿ ಅಲ್ಲ.10-12 ವರ್ಷದ ಹಿಂದೆ ಇದು ಆಗಿದ್ದು. ಸುಳ್ಳು ಎಷ್ಟು ದಿನ ಅಂತಾ ಹೇಳುತ್ತೀರಾ ? ಸುಳ್ಳು ಹೇಳಬಾರದು. ಇದು ನಾನು ಆರ್ ಧೃವನಾರಾಯಣ್, ರಮ್ಯಾ ಎಂಪಿ ಆಗಿದ್ದಾಗ ಆದ ಕೆಲಸ..

ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ಹೇಳಿಕೆ

ಮೈಸೂರು : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿರುವುದು ಸಂಸದ ಪ್ರತಾಪ್​ ಸಿಂಹ ಸಾಧನೆ ಅಲ್ಲ ಎಂದು ಸ್ವಪಕ್ಷೀಯ ಸಂಸದರ ವಿರುದ್ಧವೇ ವಿಧಾನ ಪರಿಷತ್ ಸದಸ್ಯ ಹೆಚ್‌ ವಿಶ್ವನಾಥ್ ಕುಟುಕಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗ್ತಿರೋದು ಸಂಸದ ಪ್ರತಾಪ್ ಸಿಂಹ ಸಾಧನೆ ಅಲ್ಲ. ಈ ಹಿಂದೆ ಇದ್ದ ಸಂಸದರ, ಯುಪಿಎ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಸಾಧನೆಯಾಗಿದೆ ಎಂದರು.

ಪ್ರತಾಪ್ ಸಿಂಹ ನಾನೇ ಮಾಡಿಬಿಟ್ಟೆ ಅನ್ನೋದು ಸರಿ ಅಲ್ಲ. ಪ್ರತಾಪ್ ಸಿಂಹ ನಾನು‌ ಮಾಡಿದೆ, ನಾನು ಕಡಿದೆ ಅಂತಾ ಹೇಳುವುದು ಸರಿ ಅಲ್ಲ. 10-12 ವರ್ಷದ ಹಿಂದೆ ಇದು ಆಗಿದ್ದು. ಸುಳ್ಳು ಎಷ್ಟು ದಿನ ಅಂತಾ ಹೇಳುತ್ತೀರಾ ? ಸುಳ್ಳು ಹೇಳಬಾರದು. ಇದು ನಾನು ಆರ್ ಧೃವನಾರಾಯಣ್, ರಮ್ಯಾ ಎಂಪಿ ಆಗಿದ್ದಾಗ ಆದ ಕೆಲಸ.

ನೀವು ಹೊಸದಾಗಿ ತಂದಿದ್ದರೆ ಬೇಕಾದರೆ ಹೇಳಿ ಅಂತಾ ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದರು. ರಾಷ್ಟ್ರೀಯ ಹೆದ್ದಾರಿ ವಿಚಾರವಾಗಿ ಪಾಪ ಹೆಣ್ಣು ಮಗಳು ಹೇಳಿದ್ದು ಸರಿ ಇದೆ ಅಂತಾ ಸಂಸದೆ ಸುಮಲತಾ ಅಂಬರೀಶ್ ಮೇಲೆ ಸಾಫ್ಟ್ ಧೋರಣೆ ತಳೆದರು.

ಶಾಸಕ ಜಿ.ಟಿ. ದೇವೇಗೌಡ ವಿರುದ್ಧವೂ ವಾಗ್ದಾಳಿ : ಉಂಡುವಾಡಿ ಕುಡಿಯುವ ನೀರು ಯೋಜನೆ ಜಿ ಟಿ ದೇವೇಗೌಡ ಸಾಧನೆ ಅಲ್ಲ. ಅದನ್ನು ನಾನು ಮಾಡಿದ್ದು, ನೀವು ಎಲ್ಲಿದ್ದಿರೀ ಮಿಸ್ಟರ್ ಜಿ‌.ಟಿ.ದೇವೇಗೌಡ? ಎಂದು ಗುಡುಗಿದರು.

ಶಾಲೆಗಳ ಪುನಾರಂಭ ವಿಚಾರವಾಗಿ ಮಾತನಾಡಿ, ಮುಂಜಾಗ್ರತಾ ಕ್ರಮಗಳು ನಗರಕ್ಕೆ‌ ಸೀಮಿತವಾಗಿವೆ. ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಶೌಚಾಲಯ, ನೀರಿನ ವ್ಯವಸ್ಥೆ ಇರಬೇಕು. ಸ್ಯಾನಿಟೈಸ್ ಸಂಪೂರ್ಣ ಮಾಡಬೇಕು. ಮಕ್ಕಳು ಮಾನಸಿಕ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು‌ ಎಂದರು.

ಮಕ್ಕಳು ಖುಷಿಯಾಗಿ ಶಾಲೆಗೆ ಬರುತ್ತಾರೆ. ಮಕ್ಕಳ ಆರೋಗ್ಯದ ಕಡೆ ಗಮನ ಕೊಡಬೇಕು. ಆರೋಗ್ಯ ಇಲಾಖೆ, ಗ್ರಾಪಂ ಜವಾಬ್ದಾರಿ ತೆಗೆದುಕೊಳ್ಳಬೇಕು. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಇದನ್ನು ಯಾರು ಲಘುವಾಗಿ ಸ್ವೀಕರಿಸಬಾರದು, 3ನೇ ಅಲೆ‌ ತೂಗುಗತ್ತಿ ಮಕ್ಕಳ ಮೇಲೆ ಇದೆ ಎಂದು ಎಚ್ಚರಿಸಿದರು.

ದಸರಾ ಶುರುವಾಗಲಿದೆ, ಅಗತ್ಯ ಕ್ರಮಕೈಗೊಳ್ಳಬೇಕು. ದಸರಾ ಸರಳ ಹಾಗೂ ಸಾಂಪ್ರದಾಯಿಕವಾಗಿರಬೇಕು. ದುಷ್ಟ ಶಿಕ್ಷಕ, ಶಿಷ್ಟ ರಕ್ಷಕವಾಗಿ ದಸರಾ ಆಚರಣೆ ಆಗಬೇಕು. ಮೊದಲು ದಸರಾ ಪ್ರಾಧಿಕಾರ ಮಾಡಬೇಕು ಎಂದರು.

ಇದನ್ನೂ ಓದಿ : ತವರೂರಿಗೆ ಕೇಂದ್ರ ಸಚಿವ ಎ ನಾರಾಯಣಸ್ವಾಮಿ.. ಸಂಭ್ರಮದ ವೇಳೆ ಬೈಕ್‌ಗೆ ತಗುಲಿತು ಪಟಾಕಿ ಕಿಡಿ..

ಜಾತಿಗಳಿಗೆಲ್ಲ ಪ್ರಾಧಿಕಾರ ಇರುವಾಗ ದಸರಾ ಆಚರಣೆಗೆ ಯಾಕೆ ಪ್ರಾಧಿಕಾರ ಇಲ್ಲ? ಮೊದಲು ಸರ್ಕಾರ ಪ್ರಾಧಿಕಾರ ರಚನೆ ಮಾಡಿ ದಸರಾ ಇದರೊಟ್ಟಿಗೆ ಮಾಡಿ ಎಂದು ಆಗ್ರಹಿಸಿದರು. ಇನ್ನು, ರಾಜಕೀಯ ಸಭೆಗಳಿಗೆ ಕಡಿವಾಣ ಹಾಕಬೇಕು. ಆದರೆ, ವಾರಾಂತ್ಯ ಕರ್ಪ್ಯೂ ಮಾಡಿದರೆ ಏನು ಪ್ರಯೋಜನ ಎಂದು ಕೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.