ETV Bharat / state

ಹೆಣ್ಣು ಮಕ್ಕಳಿಗೆ ಒತ್ತಡಗಳು ಇರುತ್ತವೆ, ಅದಕ್ಕಾಗಿ ಡ್ರಗ್ಸ್ ಗೆ ಮೊರೆ ಹೋಗುತ್ತಾರೆ: ಹೆಚ್​. ವಿಶ್ವನಾಥ್​ - ಜಮೀರ್​​ ಅಹಮದ್​ ಬಗ್ಗೆ ವಿಶ್ವನಾಥ್​ ಹೇಳಿಕೆ

ಡ್ರಗ್ಸ್​ ದಂಧೆ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಹೆಚ್. ವಿಶ್ವನಾಥ್​ ಎಲ್ಲಾ ಪಕ್ಷಗಳು ಇದರ ವಿರುದ್ಧ ಹೋರಾಟ ನಡೆಸಬೇಕು ಎಂದ್ರು. ಇದೇ ವೇಳೆ ಸಿದ್ದರಾಮಯ್ಯನವರ ಕಣ್ಣಿಗೆ ಜಮೀರ್ ಖಾನ್ ಸತ್ಯವಂತನಂತೆ ಕಾಣಿಸುತ್ತಿದ್ದಾರೆ, ಪೊಲೀಸರ ಕಣ್ಣಿಗೆ ಬೇರೆ ತರಹ ಕಾಣಿಸುತ್ತಾರೆ, ನಮಗೆ ಪೊಲೀಸರ ಕಣ್ಣು ಮುಖ್ಯ, ಸಿದ್ದರಾಮಯ್ಯ ಕಣ್ಣು ಅಲ್ಲ ಎಂದು ವ್ಯಂಗ್ಯವಾಡಿದ್ರು.

mlc H vishwanath reaction about drug issue
ಹೆಚ್.ವಿಶ್ವನಾಥ್ ಲೇವಡಿ
author img

By

Published : Sep 9, 2020, 11:03 PM IST

ಮೈಸೂರು: ಜಮೀರ್ ಅವರು ಸಿದ್ದರಾಮಯ್ಯ ನವರ ಕಣ್ಣಿಗೆ ಸತ್ಯವಂತನಂತೆ ಕಾಣುತ್ತಾರೆ, ಪೊಲೀಸರ ಕಣ್ಣಿಗೆ ಬೇರೆ ತರಹ ಕಾಣಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.

ಹೆಚ್.ವಿಶ್ವನಾಥ್ ಲೇವಡಿ
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್ , ಸರ್ಕಾರ ಯಾರ ಒತ್ತಡಕ್ಕೂ ಮಣಿಯುವುದಿಲ್ಲ, ಡ್ರಗ್ಸ್ ದಂಧೆಯನ್ನು ಬಗ್ಗು ಬಡಿಯುತ್ತೇವೆ ಎಂದು ಹೊರಟಿರುವುದು ಸರಿಯಾಗಿತ್ತು. ಈ ಬಗ್ಗೆ ಎಲ್ಲಾ ಪಕ್ಷಗಳು ಒಟ್ಟಾಗಿ ಸಹಕಾರ ನೀಡಬೇಕು, ಇದು ಬರೀ ಚಿತ್ರರಂಗದಲ್ಲಿ ಅಲ್ಲ , ಎಲ್ಲಾ ಕಡೆ ಇರುತ್ತದೆ. ಚಿತ್ರರಂಗದ ಹೆಣ್ಣು ಮಕ್ಕಳನ್ನು ಫಿಕ್ಸ್ ಮಾಡುತ್ತಿದ್ದಾರೆ, ಹೆಣ್ಣು ಮಕ್ಕಳಿಗೆ ಬಹಳಷ್ಟು ಒತ್ತಡಗಳು ಇರುತ್ತದೆ ಅದಕ್ಕಾಗಿ ಡ್ರಗ್ಸ್ ಗೆ ಮೊರೆ ಹೋಗುತ್ತಾರೆ.

ಈ ದಂಧೆ ಎಲ್ಲಿ ನಡೆಯುತ್ತದೆ ಎಂಬುದು ಪೊಲೀಸರಿಗೆ , ಸಿಸಿಬಿ ಅವರಿಗೆ ಗೊತ್ತಿರುವ ವಿಚಾರ. ಗಾಂಜಾ ಕೇಸ್ ನಡೆಸುವ ಲಾಯರ್ ಮನೆಗಳ ಹತ್ತಿರ ಹೋಗಿ ಕುಳಿತರೆ ಎಲ್ಲವೂ ಗೊತ್ತಾಗುತ್ತದೆ. ಇನ್ನು ಎಲ್ಲಾ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಬೇಕೆಂದು ಹೇಳಿದ ವಿಶ್ವನಾಥ್, ಸಿದ್ದರಾಮಯ್ಯ ನವರ ಕಣ್ಣಿಗೆ ಜಮೀರ್ ಖಾನ್ ಸತ್ಯವಂತನಂತೆ ಕಾಣಿಸುತ್ತಿದ್ದಾರೆ, ಪೊಲೀಸರ ಕಣ್ಣಿಗೆ ಬೇರೆ ತರಹ ಕಾಣಿಸುತ್ತಾರೆ, ನಮಗೆ ಪೊಲೀಸರ ಕಣ್ಣು ಮುಖ್ಯ, ಸಿದ್ದರಾಮಯ್ಯ ಕಣ್ಣು ಅಲ್ಲ ಎಂದು ವ್ಯಂಗ್ಯವಾಡಿದ್ರು. ಮೈಸೂರಿನ ದೇವರಾಜ ಅರಸು ಮಾರುಕಟ್ಟೆಯಲ್ಲಿ ಸಣ್ಣ ಸಣ್ಣ ಗೂಡು ಅಂಗಡಿಗಳು ಇವೆ, ಅಲ್ಲಿ ಏನು ಸಿಗುತ್ತದೆ ಎಂಬುದು ಪೊಲೀಸರಿಗೆ ಗೊತ್ತಿರದ ವಿಚಾರವಲ್ಲ ಎಂದು ವಿಶ್ವನಾಥ್ ಹೇಳಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.