ETV Bharat / state

ಪತ್ರಕರ್ತರ ಆರೋಗ್ಯ ತಪಾಸಣೆಗೆ ಅಡ್ಡಿ: ಸಂಸದ ಪ್ರತಾಪ​ ಸಿಂಹ ಕಿಡಿ - corona test in camp in mandya

ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಕೊರೊನಾ ತಪಾಸಣೆಗೆ ತೆರೆಯಲಾಗಿದ್ದ ಕ್ಯಾಂಪ್​ಗೆ ಎಂಎಲ್​ಸಿ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಅಡ್ಡಿಪಡಿಸಿದ್ದು ಶಿಕ್ಷಾರ್ಹ ಅಪರಾಧ. ಸರ್ಕಾರ ಕೂಡಲೇ ಇವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಪ್ರತಾಪ ಸಿಂಹ ಒತ್ತಾಯಿಸಿದರು.

MP pratap simha
ಸಂಸದ ಪ್ರತಾಪ್​ ಸಿಂಹ್
author img

By

Published : Apr 26, 2020, 5:12 PM IST

ಮೈಸೂರು: ಮಾಧ್ಯಮ ಪ್ರತಿನಿಧಿಗಳ ಕೊರೊನಾ ತಪಾಸಣೆಗೆ ಅಡ್ಡಿಪಡಿಸಿದ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ಅವರ ಮಗನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಸದ ಪ್ರತಾಪ ಸಿಂಹ ಆಗ್ರಹಿಸಿದರು.

ಸಂಸದ ಪ್ರತಾಪ್​ ಸಿಂಹ

ಆಡಳಿತ ವರ್ಗದ ಮೇಲೆ ಒತ್ತಡ ಹೇರಿ, ಜೀವದ ಹಂಗು ತೊರೆದು ಸಾರ್ವಜನಿಕರಿಗೆ ಸುದ್ದಿ ತಲುಪಿಸುತ್ತಿರುವ ಮಾಧ್ಯಮಗಳು ಹಾಗೂ ಪತ್ರಕರ್ತರ ಪಾತ್ರ ಅಪಾರವಾದುದು. ಇವರ ತಪಾಸಣೆಗೆ ತೆರೆಯಲಾಗಿದ್ದ ಕ್ಯಾಂಪ್​ ಸ್ಥಳಾಂತರಿಸಲು ಮುಂದಾದ ನಾಯಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಮಂಡ್ಯ ಪತ್ರಕರ್ತರ ತಪಾಸಣೆಗೆಂದು ಶ್ರೀಕಂಠೇಗೌಡ ಅವರ ಮನೆಯ ಬಳಿ ತಪಾಸಣಾ ಕ್ಯಾಂಪ್​ ತೆರೆಯಲಾಗಿತ್ತು. ಇದನ್ನು ವಿರೋಧಿಸಿದ ಎಂಎಲ್​ಸಿ ಶ್ರೀಕಂಠೇಗೌಡ ಹಾಗೂ ಪುತ್ರ ಸ್ಥಳಾಂತರಕ್ಕೆ ಆಗ್ರಹಿಸಿದ್ದರು.

ಆರೋಗ್ಯ ಅಧಿಕಾರಿಗಳು ತಪಾಸಣೆ ಎಲ್ಲಿ ನಡೆಸಬೇಕು, ಹೇಗೆ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಸ್ಥಳೀಯ ನಾಯಕರು ಇದರಲ್ಲಿ ಮೂಗು ತೂರಿಸುವುದು ಅನಾವಶ್ಯಕ ಎಂದು ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.