ETV Bharat / state

'ಟಿಪ್ಪು ನಿಜ ಕನಸುಗಳು' ಕೃತಿ ತಡೆಗೆ ಕಾನೂನು ಹೋರಾಟ ಮಾಡುತ್ತೇವೆ: ಶಾಸಕ ತನ್ವಿರ್ ಸೇಠ್ - ಟಿಪ್ಪು ನಿಜ ಕನಸುಗಳು ನಾಟಕ

ಟಿಪ್ಪು ಸುಲ್ತಾನ್ ದೇಶದ ಸ್ವಾತಂತ್ರ್ಯ ಹೋರಾಟಗಾರ. ಅವರ ಸಾಧನೆಗಳು ಚರಿತ್ರೆಯಲ್ಲಿ ದಾಖಲಾಗಿದೆ. ಚರಿತ್ರೆ ತಿದ್ದುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ತನ್ವಿರ್ ಸೇಠ್ ಹೇಳಿದ್ದಾರೆ.

ಶಾಸಕ ತನ್ವಿರ್ ಸೇಠ್
ಶಾಸಕ ತನ್ವಿರ್ ಸೇಠ್
author img

By

Published : Nov 10, 2022, 4:41 PM IST

ಮೈಸೂರು: ರಂಗಾಯಣದ ನಿರ್ದೇಶಕರು ಬರೆದಿರುವ 'ಟಿಪ್ಪು ನಿಜ ಕನಸುಗಳು' ಕೃತಿ ಹಾಗೂ ನಾಟಕ ತಡೆಯಲು ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವಿರ್ ಸೇಠ್ ಹೇಳಿಕೆ ನೀಡಿದ್ದಾರೆ.

ಶಾಸಕ ತನ್ವಿರ್ ಸೇಠ್ ಅವರು ಮಾತನಾಡಿದರು

ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಎನ್. ಆರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್, ರಂಗಾಯಣ ನಮ್ಮ ಯುವ ಕಲಾವಿದರಿಗೆ ಒಂದು ನೆಲೆಯಾಗಬೇಕಿರುವ ಸ್ಥಾನ. ಅಲ್ಲಿ ಅಧಿಕಾರ ದುರುಪಯೋಗ ಮಾಡಿ ಅವರ ಕಾರ್ಯಸೂಚಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಿರುವುದು ವಿಷಾದವಾಗಿದ್ದು, ನ. 13 ರಂದು ರಂಗಾಯಣದ ನಿರ್ದೇಶಕರು ಬರೆದಿರುವ ಟಿಪ್ಪು ನಿಜ ಕನಸುಗಳು ಕೃತಿ ಬಿಡುಗಡೆಯಾಗಲಿದೆ. ಇದೆ ಪುಸ್ತಕ ಆಧಾರವಾಗಿ ನ. 20 ರಿಂದ ಟಿಪ್ಪು ನಿಜ ಕನಸುಗಳು ನಾಟಕದ ಪ್ರದರ್ಶನ ನಡೆಯಲಿದ್ದು, ಅದನ್ನು ತಡೆಯಲು ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಟಿಪ್ಪು ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು: ಟಿಪ್ಪು ಜಯಂತಿ ಆಚರಣೆ ಮಾಡಿ ಅಂತ ನಾವು ಸರ್ಕಾರಕ್ಕೆ ಅರ್ಜಿ ಹಾಕಿಲ್ಲ. ಜಯಂತಿಯನ್ನು ರದ್ದು ಮಾಡಿದ ನಂತರವೂ ನಾವು ನಿರಂತರವಾಗಿ ಟಿಪ್ಪು ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಟಿಪ್ಪು ಸುಲ್ತಾನ್ ದೇಶದ ಸ್ವಾತಂತ್ರ್ಯ ಹೋರಾಟಗಾರ.

ಅವರ ಸಾಧನೆಗಳು ಚರಿತ್ರೆಯಲ್ಲಿ ದಾಖಲಾಗಿದೆ. ಚರಿತ್ರೆಯನ್ನು ತಿದ್ದುವುದು ಯಾರಿಗೂ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರ ಟಿಪ್ಪು ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ರಂಗಾಯಣ ಟಿಪ್ಪು ಹೆಸರಿನ ಚರಿತ್ರೆಯ ವಿರುದ್ಧವಾದ ವಿಚಾರಗಳನ್ನು ನಾಟಕ ಮಾಡಲು ಹೊರಟಿರುವುದು ಸರಿಯಲ್ಲ ಎಂದರು.

ಓದಿ: ಟಿಪ್ಪು ಸುಲ್ತಾನ್​ ಮೈಸೂರಿನ ಹುಲಿ: ಎಂಎಲ್​ಸಿ ವಿಶ್ವನಾಥ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.