ಮೈಸೂರು: ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ರಾಜೀನಾಮೆ ಅಂಗೀಕರಿಸಿದಂತೆ ಶಾಸಕ ಎಸ್.ಎ.ರಾಮದಾಸ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಶಿಲ್ಪಾನಾಗ್ ಅವರ ಕಾರ್ಯವೈಖರಿ ವಿವರಿಸಿ ಪತ್ರ ಬರೆದಿದ್ದಾರೆ. ಅವರು ಮೈಸೂರಿಗೆ ಬಂದ ಮೇಲೆ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆಂದು ಪತ್ರದಲ್ಲಿ ತಿಳಿಸಿದ್ದಾರೆ. ಅವರು ಜಾರಿಗೆ ತಂದ ಹೊಸ ಯೋಜನೆಗಳ ಮಾಹಿತಿ ನೀಡಿ ಪತ್ರ ಬರೆದಿದ್ದಾರೆ. ಜತೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರತಿ ಕಳುಹಿಸಿದ್ದಾರೆ.
ಮುಡಾ ಅಧ್ಯಕ್ಷರಿಂದ ಪ್ರಕಟಣೆ: ಆಯುಕ್ತೆ ಶಿಲ್ಪಾನಾಗ್ ಪರ ಮೂಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸಹ ಬ್ಯಾಟಿಂಗ್ ಮಾಡಿದ್ದು, ಶಿಲ್ಪಾನಾಗ್ ದಕ್ಷ ಅಧಿಕಾರಿಯಾಗಿದ್ದಾರೆ. ಅವರು ಕೋವಿಡ್ ಮಿತ್ರ, ರಿವರ್ಸ್ ಐಸೋಲೇಷನ್, ಕೋವಿಡ್ ವಾರ್ ರೂಂ ಹೀಗೆ ಹಲವು ಕಾರ್ಯಕ್ರಮ ರೂಪಿಸಿದ್ದರು. ಸಾಮಾನ್ಯರಂತೆ ಜೀವಿಸಿ ಪ್ರತಿಯೊಂದನ್ನೂ ಅವಲೋಕಿಸಿ ಕೆಲಸ ಮಾಡುತ್ತಿದ್ದರು. ಅವರ ರಾಜೀನಾಮೆ ಅಂಗೀಕರಿಸಬಾರದು. ಶಿಲ್ಪಾನಾಗ್ ಅವರು ಸಹ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳ ಆರೋಪ-ಪ್ರತ್ಯಾರೋಪ ಜಿಲ್ಲೆಗೆ ಶೋಭೆ ತರಲ್ಲ: ತನ್ವೀರ್ ಸೇಠ್