ETV Bharat / state

ದಶಪಥ ಯೋಜನೆಯ ಕ್ರೆಡಿಟ್ ಯಾರಿಗೂ ಸೇರಿದ್ದಲ್ಲ, ಜನರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿದೆ : ಶಾಸಕ ರಾಮದಾಸ್

author img

By

Published : Aug 23, 2021, 3:20 PM IST

ನಮ್ಮ ಯಾತ್ರೆಯಿಂದ ಮತ್ತಷ್ಟು ಕೊರೊನಾ ಹರಡದಂತೆ ಎಚ್ಚರಿಕೆವಹಿಸಬೇಕು. ಅದರಿಂದ ಕೊರೊನಾ ಬಂದರೆ ಅದಕ್ಕಿಂತ ದೊಡ್ಡ ಪಾಪದ ಕೆಲಸ ಮತ್ತೊಂದಿಲ್ಲ. ಕೋವಿಡ್ ನಿಯಮಗಳು ರಾಜಕಾರಣಿ, ಜನ ಸಾಮಾನ್ಯರು ಎಲ್ಲರಿಗೂ ಒಂದೇ.. ನಮ್ಮ ಯಾತ್ರೆಯಿಂದ‌ ಜನರಿಗೆ ತೊಂದರೆ ಆಗಬಾರದು..

MLA Ramadas on Dashapatha Scheme news
ಶಾಸಕ ರಾಮದಾಸ್

ಮೈಸೂರು : ದಶಪಥ ಯೋಜನೆಯ ಕ್ರೆಡಿಟ್ ಭಾರತ ಮಾತೆಗೆ, ದೇಶಕ್ಕೆ ಸಲ್ಲಿಕೆಯಾಗಬೇಕು ಎಂದು ಶಾಸಕ ರಾಮದಾಸ್ ಹೇಳಿದರು. ಇಂದಿನಿಂದ ಶಾಲೆ ಪುನಾರಂಭ ಹಿನ್ನೆಲೆ ವಿದ್ಯಾರಣ್ಯಪುರಂನಲ್ಲಿರುವ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಚಾಕೊಲೇಟ್ ನೀಡಿ ಸ್ವಾಗತ ಕೋರಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಶಪಥ ಯೋಜನೆಯ ಕ್ರೆಡಿಟ್ ಇದು ಯಾರಿಗೂ ಸೇರಿದ್ದಲ್ಲ. ಇದು ಭಾರತ ಮಾತೆಗೆ, ದೇಶಕ್ಕೆ ಸೇರಿದ ಕ್ರೆಡಿಟ್‌. ಜನರ ತೆರಿಗೆ ಹಣದಲ್ಲಿ ‌ನಿರ್ಮಾಣವಾಗುತ್ತಿರುವ ರಸ್ತೆ ಇದು. ಇದು ನಾನು ಮಾಡಿದ್ದು, ನಾನು ಮಾಡಿದ್ದು ಎನ್ನುವುದು ಸರಿಯಲ್ಲ. ಇದು ಎಲ್ಲರಿಗೂ ಸೇರಿದ ಅಭಿವೃದ್ಧಿ ಕಾರ್ಯ ಎಂದರು.

ದಶಪಥ ರಸ್ತೆ ನಿರ್ಮಾಣದ ಕ್ರೆಡಿಟ್ ಯಾರಿಗೂ ಸೇರಬೇಕಿಲ್ಲ ಅಂತಾರೆ ಬಿಜೆಪಿ ಶಾಸಕ ರಾಮದಾಸ್

ನನ್ನ ಕ್ಷೇತ್ರದಲ್ಲೂ ನಾನು ರಸ್ತೆ ನಿರ್ಮಾಣ ಮಾಡುತ್ತಿದ್ದೇನೆ. ಆದರೆ, ಅದರ ಕ್ರೆಡಿಟ್ ನನ್ನದಲ್ಲ. ಎಲ್ಲಾ ಇಲಾಖೆ ವ್ಯವಸ್ಥೆಗೆ ಸೇರಿದ್ದಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿಯೂ ಅದು ಎಲ್ಲರಿಗೂ ಸೇರಿದ್ದು ಎಂದು ಹೇಳಿದರು.

ಬಿಜೆಪಿ ಜನಾಶಿರ್ವಾದ ಯಾತ್ರೆಯಿಂದ ಕೊರೊನಾ ಹೆಚ್ಚುವ ಆತಂಕ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಯಾತ್ರೆಯಿಂದ ಮತ್ತಷ್ಟು ಕೊರೊನಾ ಹರಡದಂತೆ ಎಚ್ಚರಿಕೆವಹಿಸಬೇಕು. ಅದರಿಂದ ಕೊರೊನಾ ಬಂದರೆ ಅದಕ್ಕಿಂತ ದೊಡ್ಡ ಪಾಪದ ಕೆಲಸ ಮತ್ತೊಂದಿಲ್ಲ. ಕೋವಿಡ್ ನಿಯಮಗಳು ರಾಜಕಾರಣಿ, ಜನ ಸಾಮಾನ್ಯರು ಎಲ್ಲರಿಗೂ ಒಂದೇ.. ನಮ್ಮ ಯಾತ್ರೆಯಿಂದ‌ ಜನರಿಗೆ ತೊಂದರೆ ಆಗಬಾರದು ಎಂದು ಹೇಳಿದರು.

ನಾವು ನಮ್ಮ ವಾರ್ಡ್‌ನಲ್ಲಿ ಯಾತ್ರೆ ಮಾಡಿದ್ದೇವೆ. ಕೋವಿಡ್ ನಿಯಮಗಳನ್ನ ಪಾಲಿಸಿಕೊಂಡು ಯಾತ್ರೆ ಮಾಡಿದ್ದೇವೆ. ಜನರ ಬಳಿ ಹೋಗುವುದು ಸರಿ. ಆದರೆ, ಹೋಗುವ ಹೆಸರಿನಲ್ಲಿ ನಿಯಮಗಳ ಉಲ್ಲಂಘನೆ ತಪ್ಪು ಎಂದರು.

ಸ್ವಪಕ್ಷದ ವಿರುದ್ಧವೇ ಹೆಚ್ ವಿಶ್ವನಾಥ್ ಟೀಕೆ ವಿಚಾರವಾಗಿ ಮಾತನಾಡಿದ ರಾಮನಾಥ್​, ಅವರಿಗೆ ಹೇಳುವಷ್ಟು ದೊಡ್ಡವನು ನಾನಲ್ಲ. ಪಕ್ಷದ ಅಧ್ಯಕ್ಷರು ಅದನ್ನ ಗಮನಿಸುತ್ತಾರೆ. ಅವರು ಮಾಡುತ್ತಿರುವುದು ಸರಿಯೋ/ತಪ್ಪೋ ಎಂದು ಅವರ ಆತ್ಮಸಾಕ್ಷಿಗೆ ಗೊತ್ತು. ಈ‌ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರವಾಗಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಅದನ್ನ ನೋಡಿಕೊಳ್ತಿದ್ದಾರೆ. ಅವರು ಯಾರ ಜೊತೆ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಜೊತೆ ಏನು ಚರ್ಚೆ ಮಾಡಿಲ್ಲ. ಅವರು ಮತ್ತು ಪಕ್ಷದವರು ಯಾರನ್ನ ಅಭ್ಯರ್ಥಿ ಮಾಡುತ್ತಾರೋ ಅವರಿಗೆ ನಾನು ಸೇರಿ ನಮ್ಮ ಸದಸ್ಯರು ಮತ ಹಾಕುತ್ತೇವೆ. ನಮ್ಮ ಕ್ಷೇತ್ರದಲ್ಲೇ 12, ನಾನು ಸೇರಿ 13 ಮತಗಳಿವೆ. ಪಕ್ಷ ಸೂಚಿಸಿದವರಿಗೆ ನಮ್ಮ ಮತ ಇರುತ್ತದೆ. ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಹೇಳಿದರು.

ಓದಿ:ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ ಕಾರ್ಯಕ್ಕೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.