ಮೈಸೂರು: ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಜನತೆಯ ಮತವನ್ನು ಬಾಂಬೇಲಿ ತಗೊಂಡು ಹೋಗಿ ಅಡ ಇಟ್ಟಂತಹ ಮನುಷ್ಯರು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ಅಸ್ಥಿರತೆ ಹುಡುಕಾಟದಲ್ಲಿದ್ದಾರೆ ಎಂಬ ವಿಶ್ವನಾಥ್ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ರಾಜಕೀಯ ನೆಲೆನೆ ಇಲ್ದೇನೆ ಅಲೆದಾಡುತ್ತಿದ್ದವರು ಯಾರು ಎಂದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಅದರಲ್ಲೂ ಮೈಸೂರು ಜಿಲ್ಲೆ ಜನತೆ ಹಾಗೂ ವಿಶೇಷವಾಗಿ ಕೃಷ್ಣರಾಜನಗರದ ಜನತೆಗೆ ಗೊತ್ತಿದೆ ಎಂದು ಟಾಂಗ್ ಕೊಟ್ಟರು. ಕ್ಷೇತ್ರದ ಜನರ ಸ್ವಾಭಿಮಾನವನ್ನು, ಪವಿತ್ರವಾದ ಜನತೆಯ ಮತವನ್ನು ಬಾಂಬೇಲಿ ತಗೊಂಡು ಹೋಗಿ ಅಡ ಇಟ್ಟಂತಹ ಮನುಷ್ಯರು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇದೆಯಾ?, ತಮ್ಮ ಮನಃಸಾಕ್ಷಿಯನ್ನು ಕೇಳಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಇನ್ನು ಗ್ರಾ.ಪಂ ಚುನಾವಣೆಯನ್ನು ಜನರ ಆರೋಗ್ಯದ ದೃಷ್ಟಿಯಿಂದ ಮುಂದೂಡಬೇಕು. ಮೊದಲು ಜನರ ಆರೋಗ್ಯ ಮುಖ್ಯ, ನಂತರ ಚುನಾವಣೆ ಎಂದರು.