ಮೈಸೂರು: ಸುಪ್ರೀಂಕೋರ್ಟ್ ತೀರ್ಪು ಎಷ್ಟು ಕಠಿಣವಾಗಿರುತ್ತದೆ ಎಂಬುದನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ನಾನು ಹೇಳಲು ಆಗುವುದಿಲ್ಲ ಎಂದು ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್ ಹೇಳಿದರು.
ನಂಜನಗೂಡು ತಾಲೂಕಿನ ಉಚ್ಚಗಣಿ ಗ್ರಾಮದಲ್ಲಿ ಮಹಾದೇವಮ್ಮ ದೇವಸ್ಥಾನ ತೆರವು ವಿಚಾರವಾಗಿ ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್ಗೆ ಜಯಲಕ್ಷ್ಮಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಶಾಸಕ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಬಿಡುವಂತೆ ಹೇಳಿದಾಗ ಅವರು ಉದ್ವೇಗವಾಗಿ ಮಾತನಾಡಿದ್ದರು. ಆದರೆ ಕೊನೆಗೆ ಕೋರ್ಟ್ಗೆ ತಲೆಬಾಗಿ ನೀರು ಬಿಟ್ಟರು. ಜನಪ್ರತಿನಿಧಿಗಳಾಗಿ ದೇಶದ ಸಂವಿಧಾನ ಹಾಗೂ ಸುಪ್ರೀಂಗೆ ತಲೆಬಾಗಲೇ ಬೇಕು. ಸಿದ್ದರಾಮಯ್ಯ ಉನ್ನತ ಸ್ಥಾನ ಅಲಂಕರಿಸಿದವರು. ಆದರೆ ನಂಜನಗೂಡು ದೇವಸ್ಥಾನ ಬಗ್ಗೆ ಈ ರೀತಿ ಟ್ವೀಟ್ ಮಾಡಿದ್ದು, ಬೇಸರ ತಂದಿದೆ ಎಂದರು.
-
ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿಹಾಕಿರುವುದು ಖಂಡನೀಯ ಕೃತ್ಯ. ಇದೊಂದು ಧರ್ಮಸೂಕ್ಷ್ಮ ವಿಚಾರವಾಗಿದ್ದು ಇಂತಹ ನಿರ್ಧಾರ ಕೈಗೊಳ್ಳುವ ಮೊದಲು @BJP4Karnataka ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು.
— Siddaramaiah (@siddaramaiah) September 11, 2021 " class="align-text-top noRightClick twitterSection" data="
1/5 pic.twitter.com/809YTvCLha
">ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿಹಾಕಿರುವುದು ಖಂಡನೀಯ ಕೃತ್ಯ. ಇದೊಂದು ಧರ್ಮಸೂಕ್ಷ್ಮ ವಿಚಾರವಾಗಿದ್ದು ಇಂತಹ ನಿರ್ಧಾರ ಕೈಗೊಳ್ಳುವ ಮೊದಲು @BJP4Karnataka ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು.
— Siddaramaiah (@siddaramaiah) September 11, 2021
1/5 pic.twitter.com/809YTvCLhaನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿಹಾಕಿರುವುದು ಖಂಡನೀಯ ಕೃತ್ಯ. ಇದೊಂದು ಧರ್ಮಸೂಕ್ಷ್ಮ ವಿಚಾರವಾಗಿದ್ದು ಇಂತಹ ನಿರ್ಧಾರ ಕೈಗೊಳ್ಳುವ ಮೊದಲು @BJP4Karnataka ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು.
— Siddaramaiah (@siddaramaiah) September 11, 2021
1/5 pic.twitter.com/809YTvCLha
ಉಚ್ಚಗಣಿ ಗ್ರಾಮದಲ್ಲಿರುವ ಮಹಾದೇವಮ್ಮ ದೇವಸ್ಥಾನವನ್ನು ಉಳಿಸಿಕೊಳ್ಳಲು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರು ಯಾವುದಾದರೂ ದಾಖಲೆ ಕೊಟ್ಟರೆ ಉಳಿಸಿ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ಆದರೆ ದೇವಸ್ಥಾನದ ಯಾವುದೇ ದಾಖಲಾತಿ ಸೂಕ್ತವಾಗಿರದ ಕಾರಣ ನ್ಯಾಯಾಲಯದ ಆದೇಶಕ್ಕೆ ಅಧಿಕಾರಿಗಳು ತಲೆ ಬಾಗಿದ್ದಾರೆ. ನಾನು ಗ್ರಾಮಸ್ಥರಿಗೆ ಸೂಕ್ತ ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಿಸಿ ಕೊಡುವ ಭರವಸೆ ಕೊಟ್ಟಿದ್ದೇನೆ ಎಂದು ಈಟಿವಿ ಭಾರತಕ್ಕೆ ಹೇಳಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಲಾರಿ- ಜೀಪ್ ನಡುವೆ ಭೀಕರ ಅಪಘಾತ, 7 ಸಾವು, ಐವರು ಗಂಭೀರ