ಮೈಸೂರು : ನನ್ನ 37 ವರ್ಷದ ರಾಜಕೀಯ ಜೀವನದ ಎದುರಾಳಿಗಳು ಈಗ ನಮ್ಮ ಮುಂದೆ ಇಲ್ಲ. ಹಾಗಾಗಿ, ನನ್ನನ್ನು ಟಾರ್ಗೆಟ್ ಮಾಡುವುದಕ್ಕೆ ಬಂದವರೆಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಎಂದು ಶಾಸಕ ಸಿ ಎಸ್ ಪುಟ್ಟರಾಜು ಅವರು ಎದುರಾಳಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1983ರಲ್ಲೇ ನಾನು ಸಕ್ರಿಯವಾಗಿ ರಾಜಕೀಯಕ್ಕೆ ಬಂದವನು. ನನಗೆ ಬುದ್ಧಿ ಹೇಳಿ ಸರಿ ದಾರಿ ತೋರಿದವರೂ ಇದ್ದಾರೆ. ಕ್ಯಾತೆ ತೆಗೆದು ಕಣ್ಮರೆಯಾದವರೂ ಇದ್ದಾರೆ ಎಂದು ಸಂಸದೆ ಸಮಲತಾ ಅಂಬರೀಶ್ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಗಣಿಗಾರಿಕೆ ವಿಚಾರದಲ್ಲಿ ಯಾರೇ ಅಕ್ರಮ ಮಾಡಿದರೂ, ಮುಲಾಜಿಲ್ಲದೇ ಕ್ರಮಕೈಗೊಳ್ಳಲಿ. ಆದರೆ, ಸಕ್ರಮ ಇರುವ ಕ್ರಷರ್ಗಳನ್ನು ಅಭಿವೃದ್ಧಿ ದೃಷ್ಟಿಯಿಂದ ಆರಂಭಿಸಬೇಕು. ಈ ಬಗ್ಗೆ ದಿಶಾ ಮೀಟಿಂಗ್ನಲ್ಲಿ ಚರ್ಚೆ ಮಾಡಿದ್ದೇವೆ ಎಂದರು.
ಅಕ್ರಮ ಗಣಿಗಾರಿಕೆ ಎಂದು ಎರಡು ತಿಂಗಳಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಹಾಗಾಗಿ, ದಿಶಾ ಸಭೆಯಲ್ಲಿ ಜಿಲ್ಲೆ ಅಭಿವೃದ್ಧಿಗೆ ಒತ್ತು ನೀಡುವಂತೆ ತೀರ್ಮಾನ ಮಾಡಲಾಗಿದೆ. ಕಾನೂನು ಚೌಕಟ್ಟಿನಲ್ಲೇ ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಓದಿ: ಒತ್ತುವರಿ ಮಾಡಿದ್ದ ಸರ್ಕಾರಿ ಭೂಮಿಗೆ ಹಣ ಪಾವತಿಸಲು ಮೀನಾಮೇಷ : ಹೈಕೋರ್ಟ್ ಛೀಮಾರಿ