ಮೈಸೂರು: ಕೊರೊನಾ ಹಾಟ್ಸ್ಪಾಟ್ ಆಗಿರುವ ಜುಬಿಲಂಟ್ ಕಾರ್ಖಾನೆಗೆ ಸಚಿವರು ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲೆಯ ಕೊರೊನಾ ಹಾಟ್ಸ್ಪಾಟ್ ಆಗಿರುವ ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಜನರಿಕ್ ಫಾರ್ಮಾಸುಟಿಕಲ್ ಕಾರ್ಖಾನೆಗೆ ವೈದ್ಯಕೀಯ ಸಚಿವ ಡಾ.ಸುಧಾಕರ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೋಂಕಿಗೆ ಮೂಲ ಯಾವುದು ಎಂಬ ಬಗ್ಗೆ ಪೊಲೀಸ್ ಅಧಿಕಾರಿಗಳು ನಡೆಸಿರುವ ತನಿಖೆಯ ವಿವರ ಪಡೆದರು. ಜುಬಿಲಂಟ್ ಕಂಪನಿಯಲ್ಲಿ ಏನು ತಯಾರಾಗುತ್ತದೆ? ಇದಕ್ಕೆ ಕಚ್ಚಾವಸ್ತುಗಳು ಎಲ್ಲಿಂದ ಬರುತ್ತವೆ? ಇವರ ವ್ಯವಹಾರ ಯಾವ ದೇಶಗಳ ನಡುವೆ ಇದೆ ಎಂಬ ಬಗ್ಗೆ ಸಚಿವ ಸುಧಾಕರ್ ಅಧಿಕಾರಿಗಳಿಂದ ಮಾಹಿತಿ ಪಡೆದರು.