ETV Bharat / state

ಸೈಕ್ಲೋಥಾನ್ ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ವಿ. ಸೋಮಣ್ಣ - ಸೈಕ್ಲೋಥಾನ್ ಸ್ಪರ್ಧೆ

ಮೈಸೂರಲ್ಲಿ ನಾಡಹಬ್ಬ ದಸರಾದ ಸಡಗರ ಮನೆಮಾಡಿದೆ. ದಸರಾ ಮಹೋತ್ಸವ ಹಿನ್ನಲೆಯಲ್ಲಿ ಕ್ರೀಡಾ ಉಪ‌ ಸಮಿತಿಯಿಂದ ಆಯೋಜಿಸಲಾಗಿದ್ದ ಸೈಕ್ಲೋಥಾನ್ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಚಾಲನೆ ನೀಡಿದ್ರು.

Cyclothon Competition
author img

By

Published : Oct 2, 2019, 11:18 AM IST

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಕ್ರೀಡಾ ಉಪ‌ ಸಮಿತಿಯಿಂದ ಆಯೋಜಿಸಲಾಗಿದ್ದ ಸೈಕ್ಲೋಥಾನ್ ಸ್ಪರ್ಧೆಗೆ ಬನ್ನೂರು ಜಂಕ್ಷನ್​​ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರು.

ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ದಸರಾ ಉತ್ಸವದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕಾರ್ಯಕ್ರಮಗಳಲ್ಲಿ ಅವಕಾಶ ನೀಡುತ್ತಿದ್ದು, ಇಂದು ಸೈಕಲ್ ಸವಾರರಿಗೆ ಸ್ಪರ್ಧೆ ನಡೆಸಿರುವುದು ಒಳ್ಳೆಯ ಬೆಳವಣಿಗೆ. ಕ್ರೀಡೆ ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸುತ್ತದೆ. ನಮ್ಮಲ್ಲಿನ‌ ಚಾತುರ್ಯತೆ, ಬುದ್ಧಿವಂತಿಕೆಯನ್ನು ಹೊರ ತರಲಿದೆ ಎಂದರು.

Cyclothon Competition
ಸೈಕ್ಲೋಥಾನ್ ಸ್ಪರ್ಧೆ

ಕ್ರೀಡೆಯಿಂದ ಉತ್ತಮ ಆರೋಗ್ಯ ವೃದ್ಧಿಸುತ್ತದೆ. ಸೈಕಲ್ ತುಳಿಯುವುದು ಅಂಗಾಂಗಗಳ ಚಲನೆಗಳ ವೇಗ ಹೆಚ್ಚು ಮಾಡಲಿದ್ದು, ಗಟ್ಟಿ ಮುಟ್ಟಾಗಿರಬಹುದು. ಸ್ಪರ್ಧೆಯಲ್ಲಿ ಯಾರೂ ಆತುರ ಪಡಬೇಡಿ. ಸೋಲು‌ ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಗೆಲುವು, ಅದೇ ಒಂದು ಸಾಧನೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ಯಶಸ್ವಿಯಾಗಿ ಸಾಗಿರಿ ಎಂದು ಶುಭ ಹಾರೈಸಿದರು.

ಈ ಸ್ಪರ್ಧೆಯಲ್ಲಿ ಸುಮಾರು 180 ಪುರುಷರು ಭಾಗಿಯಾಗಿದ್ದು, ಬನ್ನೂರು ಜಂಕ್ಷನ್​ನಿಂದ ಪ್ರಾರಂಭಿಸಿ ಟಿ.ನರಸೀಪುರ ಮೂಲಕ ಮೂಗೂರು ತಲುಪಿ, ಮತ್ತೆ ವಾಪಸ್ ಅದೇ ಮಾರ್ಗದಲ್ಲಿ ಬಂದು ಲಲಿತಾದ್ರಿಪುರ ಮೂಲಕ ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ಅಂತ್ಯವಾಗಲಿದೆ. ಸುಮಾರು 80 ಮಹಿಳೆಯರು ಈ ಸ್ಪರ್ದೆಯಲ್ಲಿ ಭಾಗಹಿಸಿದ್ದು, ಇವರು ಮೂಗೂರಿನಿಂದ -ಚಾಮುಂಡಿ ಬೆಟ್ಟದ ದೇವಿಕೆರೆ ತನಕ ಸೈಕಲ್​ನಲ್ಲಿ ಚಲಿಸಬೇಕಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 30,000/-, ದ್ವಿತೀಯ 25,000/-, ತೃತೀಯ 20,000 ರೂ. ನಗದು ಬಹುಮಾನ ನೀಡಲಾಗುತ್ತದೆ.

Intro:ಸೈಕ್ಲೋತಾನ್ Body:ಸೈಕ್ಲೋತಾನ್ ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ

ಮೈಸೂರು: ಮೈಸೂರು ದಸರಾ ಮಹೋತ್ಸವ ಹಿನ್ನಲೆ ಕ್ರೀಡಾ ಉಪ‌ ಸಮಿತಿಯಿಂದ ಆಯೋಜಿಸಲಾಗಿದ್ದ ಸೈಕ್ಲೋತಾನ್ ಸ್ಪರ್ಧೆಗೆ ಹೊರವಲಯದ ಬನ್ನೂರು ಜಂಕ್ಷನ್ ನಲ್ಲಿ ವಸತಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ಅವರು ಚಾಲನೆ ನೀಡಿದರು.

ಸೈಕ್ಲೋತಾನ್ ಆಯೋಜನೆ ಕುರಿತು ಮಾತನಾಡಿದ ಅವರು ದಸರಾ ಉತ್ಸವದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕಾರ್ಯಕ್ರಮಗಳಲ್ಲಿ ಅವಕಾಶ ನೀಡುತ್ತಿದ್ದು, ಇಂದು ಸೈಕಲ್ ಸವಾರರಿಗೆ ಸ್ಪರ್ಧೆ ಮಾಡಿರುವುದು ಉತ್ತಮವಾಗಿದೆ. ಕ್ರೀಡೆ ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸುತ್ತದೆ ಹಾಗೂ ನಮ್ಮಲ್ಲಿನ‌ ಚಾತುರ್ಯತೆ, ಬುದ್ದಿವಂತಿಕೆಯನ್ನು ಹೊರ ತರಲಿದೆ ಎಂದು ತಿಳಿಸಿದರು.

ಕ್ರೀಡೆಯಿಂದ ಉತ್ತಮ ಆರೋಗ್ಯ ವೃದ್ದಿಸುತ್ತದೆ. ಸೈಕಲ್ ತುಳಿಯುವುದು ಅಂಗಾಂಗಗಳ ಚಲನೆಗಳನ್ನು ವೇಗಮಾಡಲಿದ್ದು ಗಟ್ಟಿ ಮುಟ್ಟಾಗಿರಬಹುದು. ಸ್ಪರ್ಧೆಯಲ್ಲಿ ಯಾರೂ ಆತುರ ಪಡಬೇಡಿ. ಸೋಲು‌ ಗೆಲುವು ಒಂದೇ ನಾಣ್ಯದ ಎರಡು ಮುಖಗಳು ಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಗೆಲುವು ಅದೇ ಒಂದು ಸಾಧನೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ಯಶಸ್ವಿಯಾಗಿ ಸಾಗಿರಿ ಎಂದು ಶುಭ ಹಾರೈಸಿದರು.

ಸ್ಪರ್ಧೆಯಲ್ಲಿ ಸುಮಾರು 180 ಪುರುಷರು ಭಾಗಿಯಾಗಿದ್ದು 100 ಕಿ.ಮೀ ಸೈಕಲ್ ಸವಾರಿ ಮಾಡಬೇಕಾಗುತ್ತದೆ. ಬನ್ನೂರು ಜಂಕ್ಷನ್  ನಿಂದ ಪ್ರಾರಂಭಿಸಿ ಟಿ.ನರಸೀಪುರ ಮೂಲಕ ಮೂಗೂರು ತಲುಪಿ ಮತ್ತೆ ವಾಪಸ್ ಅದೇ ಮಾರ್ಗದಲ್ಲಿ ಬಂದು ಲಲಿತಾದ್ರಿಪುರ ಮೂಲಕ ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ಅಂತ್ಯವಾಗಲಿದೆ.

ಅದೇ ರೀತಿ ಸುಮಾರು 80 ಮಹಿಳೆಯರು ಮೂಗೂರಿನಿಂದ ಸೈಕಲ್ ಸವಾರಿ  ಪ್ರಾರಂಭಿಸಿ ಚಾಮುಂಡಿ ಬೆಟ್ಟದ ದೇವಿಕೆರೆ ತನಕ ಒಟ್ಟು 50 ‌ಕಿ.ಮೀ ತಲುಪಿಲಿದ್ದಾರೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 30,000/-, ದ್ವಿತೀಯ 25,000/-, ತೃತೀಯ 20,000/-, ನಾಲ್ಕನೇ 15,000/-, ಐದನೇ 10,000/-, ಆರನೇ 5,000/- ರೂಗಳ ನಗದು ಬಹುಮಾನ ನೀಡಲಾಗುವುದು.Conclusion:ಸೈಕ್ಲೋತಾನ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.