ಮೈಸೂರು: ನೂರಕ್ಕೆ ನೂರರಷ್ಟು ಆರ್.ಆರ್. ನಗರದಲ್ಲಿ ಮುನಿರತ್ನ ಗೆಲ್ಲುತ್ತಾರೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಆರ್.ಆರ್. ನಗರದಲ್ಲಿ ಮುನಿರತ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದು, ಅದರ ಆಧಾರದ ಮೇಲೆ ನೂರಕ್ಕೆ ನೂರರಷ್ಟು ಮುನಿರತ್ನ ಗೆಲ್ಲುತ್ತಾರೆ. ನಾನು ಸೋಮವಾರ, ಮಂಗಳವಾರ, ಬುಧವಾರ ಕ್ಯಾಂಪೇನ್ಗೆ ಹೋಗುತ್ತೇನೆ ಎಂದರು.
ನೀತಿ ಸಂಹಿತೆ ಉಲ್ಲಂಘನೆ ಕಾಂಗ್ರೆಸ್, ಜೆಡಿಎಸ್ ಅಥವಾ ಬಿಜೆಪಿ ಅನ್ನುವುದು ಇಲ್ಲ, ಅದರಲ್ಲಿ ಯಾರೇ ಉಲ್ಲಂಘನೆ ಮಾಡಿದರೂ ಅಧಿಕಾರಿಗಳು ಕೇಸ್ ದಾಖಲಿಸುವುದು ಕರ್ತವ್ಯ ಅದನ್ನು ಮಾಡುತ್ತಾರೆ. ಇದು ಡಿ.ಕೆ. ಶಿವಕುಮಾರ್ ಕಣ್ಣಿಗೆ ಕಾಣಿಸಲಿಲ್ವಾ? ನೀತಿ ಸಂಹಿತೆ ಎಲ್ಲರೂ ಪಾಲಿಸಬೇಕು ಎಂದರು.
ಇನ್ನು ಎಪಿಎಂಸಿ ಯಲ್ಲಿ ಯಾವುದೇ ಸಮಸ್ಯೆ ಇಲ್ಲ, ರಾಜ್ಯದಲ್ಲಿ 126 ಎಪಿಎಂಸಿ ನಲ್ಲಿ ಮಾರ್ಕೆಟ್ ರೇಟ್ ಫಿಕ್ಸ್ ಆಗಿದೆ, ಈಗ ಫ್ರೀ ಮಾಡುತ್ತೀವಿ. ಪ್ರತಿದಿನ ನಾವು ಎಲ್ಲಾ ಡಿಟೇಲ್ಸ್ ತೆಗೆದುಕೊಳ್ಳುತ್ತೇನೆ. ಎಪಿಎಂಸಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಸಿದ್ದರಾಮಯ್ಯ ಟ್ವೀಟ್ ನಲ್ಲಿ ಸತ್ಯಾಂಶ ಇದ್ದರೆ ಜಿಲ್ಲಾಧಿಕಾರಿಗಳಿಂದ ಸರಿಪಡಿಸೋಣ ಎಂದರು.
ಇನ್ನು ನವರಾತ್ರಿ ಸಂದರ್ಭದಲ್ಲಿ ಪ್ರವಾಸಿ ತಾಣಗಳ ನಿರ್ಬಂಧ ಕುರಿತು ಮೈಸೂರಿನ ಜನತೆ ಮಾಹಿತಿ ನೀಡಿದ್ದಾರೆ. ಇಂದು ಮೈಸೂರಿನಲ್ಲಿ ಕೋವಿಡ್ ಸಭೆಯನ್ನು ಮುಖ್ಯಮಂತ್ರಿಗಳು ನಡೆಸಲಿದ್ದು, ಸಿಎಂ ಗಮನಕ್ಕೆ ಈ ವಿಚಾರ ತರುತ್ತೇನೆ ಅಲ್ಲಿ ಸಿಎಂ ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದರು.
ಇನ್ನು ಮುಖ್ಯಮಂತ್ರಿ ಕುಟುಂಬದವರ ಭ್ರಷ್ಟಾಚಾರ ಆರ್.ಆರ್. ನಗರದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಹಾಗೇನು ಆಗುವುದಿಲ್ಲ ಹಾಗೇನಾದರೂ ಆದರೆ ಡಿ.ಕೆ. ಶಿವಕುಮಾರ್ ಕ್ಯಾಂಪೇನ್ಗೆ ಹೋಗುವ ಹಾಗೆಯೇ ಇಲ್ಲ ಎಂದು ಟಾಂಗ್ ನೀಡಿದರು.