ETV Bharat / state

ಕುಮಾರಸ್ವಾಮಿ ಹೇಳಿಕೆಗೆ ನಯವಾಗಿಯೇ ತಿರುಗೇಟು ನೀಡಿದ ಸಚಿವ ವಿ. ಸೋಮಣ್ಣ - ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

ಶಾಸಕ ಹೆಚ್.ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ವಸತಿ ಸಚಿವರು ದಸರಾ ಸಚಿವರಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದು ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ಸಚಿವ ವಿ.ಸೋಮಣ್ಣ
author img

By

Published : Sep 13, 2019, 8:19 PM IST

ಮೈಸೂರು: ನಾಡಹಬ್ಬಕ್ಕೂ ಮಂತ್ರಿಗಿರಿಗೂ ಹೋಲಿಕೆ ಬೇಡ ಕುಮಾರಸ್ವಾಮಿಯವರೇ. ನೀವು ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೆಚ್​​ಡಿಕೆಗೆ ನಯವಾಗಿಯೇ ತಿರುಗೇಟು ನೀಡಿದ್ದಾರೆ‌.

ನಿನ್ನೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ವಸತಿ ಸಚಿವರು ದಸರಾ ಸಚಿವರಾಗಿದ್ದಾರೆ ಎಂದು ಹೇಳಿದ್ದರು.

ಕುಮಾರಸ್ವಾಮಿ 2 ಬಾರಿ ಸಿಎಂ ಆಗಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ನಾನು ಟೀಕಿಸಲು ಹೋಗುವುದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ, ಅವರ ಹೇಳಿಕೆಯ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ವಿ. ಸೋಮಣ್ಣ

ಕುಮಾರಸ್ವಾಮಿ 1996ರಲ್ಲಿ ರಾಜಕೀಯಕ್ಕೆ ಬಂದರೆ, ನಾನು 1983ರಲ್ಲಿ ರಾಜಕೀಯಕ್ಕೆ ಬಂದೆ. ನಾವಿಬ್ಬರು ತುಂಬಾ ಆತ್ಮೀಯರು.ಅದೃಷ್ಟ ಯಾರ ಸ್ವತ್ತಲ್ಲ, ಅವರು ಸಿಎಂ ಆದರೂ ನಾನು ಮಂತ್ರಿಯಾದೆ. ಈಗ ಯಡಿಯೂರಪ್ಪ ಅವರು ನನಗೆ ಒಳ್ಳೆಯ ಖಾತೆ ಕೊಟ್ಟಿದ್ದಾರೆ. ಅದರಲ್ಲಿ ಒಳ್ಳೆಯ ಕೆಲಸ ಮಾಡಿ ತೋರಿಸುತ್ತೇನೆ. ಹಳೆಯದನ್ನೆಲ್ಲಾ ಕುಮಾರಸ್ವಾಮಿ ಕೆದಕುವುದು ಬೇಡ ಎಂದರು.

Intro:ಮೈಸೂರು: ನಾಡಹಬ್ಬಕ್ಕೂ ಮಂತ್ರಿಗಿರಿಗೂ ಹೋಲಿಕೆ ಮಾಡಿಕೊಳ್ಳುವುದು ಬೇಡ ಕುಮಾರಸ್ವಾಮಿ ಅವರೇ ೧ ಬಾರಿ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ನಯವಾಗಿಯೇ ತಿರುಗೇಟು ನೀಡಿದ್ದಾರೆ‌.
Body:

ನೆನ್ನೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ವಸತಿ ಸಚಿವರು ದಸರ ಸಚಿವರಾಗಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ವಿ ಸೋಮಣ್ಣ ಕುಮಾರಸ್ವಾಮಿ ಅವರು ೨ ಬಾರಿ ಸಿಎಂ ಆಗಿದ್ದಾರೆ, ಅವರ ಕಾರ್ಯವೈಖರಿ ಬಗ್ಗೆ ನಾನು ಟೀಕೆ ಮಾಡಲು ಹೋಗುವುದಿಲ್ಲ, ಅದರ ಅವಶ್ಯಕತೆಯೂ ನನಗೆ ಇಲ್ಲ , ಅವರ ಹೇಳಿಕೆಯ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ.‌ ಅವರು ೯೬ ರಲ್ಲಿ ರಾಜಕೀಯಕ್ಕೆ ಬಂದರೆ ನಾನು ೮೩ ರಲ್ಲಿ ರಾಜಕೀಯಕ್ಕೆ ಬಂದಿದ್ದೇನೆ‌. ನಾವಿಬ್ಬರು ತುಂಬಾ ಆತ್ಮೀಯರು,
ಅದೃಷ್ಟ ಯಾರ ಸ್ವತ್ತಲ್ಲ, ಅವರು ಸಿಎಂ ಆದರೂ ನಾನು ಮಂತ್ರಿಯಾದೆ, ಈಗ ಯಡಿಯೂರಪ್ಪ ಅವರು ನನಗೆ ಒಳ್ಳೆಯ ಖಾತೆ ಕೊಟ್ಟಿದ್ದಾರೆ ಅದರಲ್ಲಿ ಒಳ್ಳೆಯ ಕೆಲಸ ಮಾಡಿ ತೋರಿಸುತ್ತೇನೆ. ಹಳೆಯದೆನ್ನೆಲ್ಲಾ ಕುಮಾರಸ್ವಾಮಿ ಕೆದಕುವುದು ಬೇಡ, ಮಂತ್ರಿಗಿರಿಗೂ ನಾಡಹಬ್ಬಕ್ಕೂ ಹೋಲಿಕೆ ಬೇಡ ಎಲ್ಲಿಯವರೆಗೆ ಮಂತ್ರಿಯಾಗಿರುತ್ತೇನೆ ಅಲ್ಲಿಯವರೆಗೆ ಒಳ್ಳೆಯ ಕೆಲಸ ಮಾಡುತ್ತೇನೆ ಎಂದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.