ETV Bharat / state

ಐಟಿ ದಾಳಿಗೂ ಯಡಿಯೂರಪ್ಪ ಅವರಿಗೂ ಸಂಬಂಧ ಇಲ್ಲ: ಸಚಿವ ಎಸ್. ಟಿ ಸೋಮಶೇಖರ್ - IT Ride on BSY close aide house

ಫಿರಂಗಿ ತಾಲೀಮಿನಲ್ಲಿ ಭಾಗವಹಿಸುವ ಪೊಲೀಸ್ ಸಿಬ್ಬಂದಿ ವ್ಯವಸ್ಥಿತವಾಗಿ ತರಬೇತಿ ಪಡೆದುಕೊಂಡಿರುತ್ತಾರೆ. ಎಲ್ಲ ಸಿಬ್ಬಂದಿಗೂ ಇನ್ಶುರೆನ್ಸ್ ಮಾಡಿಸಿದ್ದೇವೆ.‌ ಜಂಬೂ ಸವಾರಿಯ ದಿನ ರಾಷ್ಟ್ರಗೀತೆ ನಡೆಯುವ ವೇಳೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

minister-s-t-somashekhar
ಸಚಿವ ಎಸ್. ಟಿ ಸೋಮಶೇಖರ್
author img

By

Published : Oct 8, 2021, 3:32 PM IST

ಮೈಸೂರು: ಯಡಿಯೂರಪ್ಪ ಅವರ ಆಪ್ತನ ಮನೆಯ ಮೇಲಿನ ಐಟಿ ದಾಳಿಗೂ ಬಿಎಸ್​ವೈ ಅವರಿಗೂ ಸಂಬಂಧ ಇಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.

ಇಂದು ಅರಮನೆಯ ಆವರಣದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಫಿರಂಗಿ ತಾಲೀಮು ವೀಕ್ಷಣೆ ಮಾಡಲು ಆಗಮಿಸಿದ ಅವರು ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಲೆಕ್ಕಪತ್ರದಲ್ಲಿ ಏನಿದೆ ಎಂದು ಐಟಿ ಅವರು ನೋಡಿಕೊಳ್ಳುತ್ತಾರೆ. ಏನಾದರೂ ಹೆಚ್ಚು ಕಡಿಮೆ ಇದ್ದರೆ ಆದಾಯ ತೆರಿಗೆ ಇಲಾಖೆಯವರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಸಚಿವ ಎಸ್. ಟಿ ಸೋಮಶೇಖರ್

ಫಿರಂಗಿ ತಾಲೀಮಿನಲ್ಲಿ ಭಾಗವಹಿಸುವ ಪೊಲೀಸ್ ಸಿಬ್ಬಂದಿ ವ್ಯವಸ್ಥಿತವಾಗಿ ತರಬೇತಿ ಪಡೆದುಕೊಂಡಿರುತ್ತಾರೆ. ಎಲ್ಲ ಸಿಬ್ಬಂದಿಗೂ ಇನ್ಶುರೆನ್ಸ್ ಮಾಡಿಸಿದ್ದೇವೆ.‌ ಜಂಬೂ ಸವಾರಿಯ ದಿನ ರಾಷ್ಟ್ರಗೀತೆ ನಡೆಯುವ ವೇಳೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ. ದಸರಾ ಕಾರ್ಯಕ್ರಮ ಯಶಸ್ವಿಗೊಳಿಸಲು ಯಾವ ರೀತಿ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಲು ಫಿರಂಗಿ ತಾಲೀಮು ನಡೆಸಲಾಗುತ್ತದೆ. ಇದನ್ನು ನೋಡಿ ಸಂತೋಷವಾಯಿತು ಎಂದರು.

ಸಚಿವ ಎಸ್. ಟಿ ಸೋಮಶೇಖರ್

ಚಿತ್ರನಗರಿ ಮೈಸೂರಿಗೆ ಬಂದಿದೆ. ಅದನ್ನು ಅಭಿವೃದ್ಧಿ ಪಡಿಸಲು ಹಾಗೂ ಮೈಸೂರು ಏರ್​ಪೋರ್ಟ್​ ವಿಸ್ತರಣೆ ಮಾಡಲು ಸದ್ಯದಲ್ಲೇ ಮುಖ್ಯಮಂತ್ರಿಗಳ ಜೊತೆ ಮಾತುಕತೆ ಮಾಡುತ್ತೇವೆ.‌ ದಸರಾ ಮುಗಿದ ನಂತರ ಟೂರಿಸಂ ಸರ್ಕ್ಯೂಟ್ ಕಾರ್ಯಕ್ರಮ ರೂಪಿಸೋಣ. ನಂತರ ಮೈಸೂರಿನ ಅಭಿವೃದ್ಧಿ, ಪ್ರವಾಸೋದ್ಯಮದ ಅಭಿವೃದ್ಧಿ, ದಸರಾ ಪ್ರಾಧಿಕಾರದ ರಚನೆಯ ಬಗ್ಗೆ ಅಧಿಕಾರಿಗಳಿಂದ ವರದಿ ತಯಾರಿಸಲು ತಿಳಿಸಲಾಗಿದೆ. ದಸರಾ ಮುಗಿದ ತಕ್ಷಣ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಜಂಬೂಸವಾರಿಗೆ 500 ಮಂದಿಗೆ ಪ್ರವೇಶ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಅರಮನೆಗೆ 500 ಜನರಿಗೆ ಅವಕಾಶ ನೀಡಿದ್ದೆವು. ಆದರೆ, 200 ಜನರು ಮಾತ್ರ‌ ಬಂದಿದ್ದರು. 70 ಸಾವಿರ ಜನ ವರ್ಚುಯಲ್​ ಮೂಲಕ ವೀಕ್ಷಣೆ ಮಾಡಿದ್ದರು. ಅದಕ್ಕಾಗಿಯೇ ಜಂಬೂಸವಾರಿಯಂದು 500 ಮಂದಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಓದಿ: ಶೃಂಗೇರಿ ಶಾರದಾ ಪೀಠಕ್ಕೆ ರಾಷ್ಟ್ರಪತಿಗಳ ಭೇಟಿ; ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.