ETV Bharat / state

ಬೊಮ್ಮಾಯಿ ಎಲ್ಲಾ ವರ್ಗದ ಪರವಾದ ಬಜೆಟ್ ಮಂಡಿಸಲಿದ್ದಾರೆ: ಸಚಿವ ಆರ್‌.ಅಶೋಕ್ - ಮೈಸೂರಿನಲ್ಲಿ ಕರ್ನಾಟಕ ಬಜೆಟ್ ಬಗ್ಗೆ ಸಚಿವ ಆರ್ ಅಶೋಕ್ ಹೇಳಿಕೆ

ರಾಜ್ಯ ಬಜೆಟ್‌, ಉಕ್ರೇನ್‌ನಿಂದ ಭಾರತೀಯ ಪ್ರಜೆಗಳ ಸ್ಥಳಾಂತರ ಹಾಗು ಕಾಂಗ್ರೆಸ್‌ ಪಾದಯಾತ್ರೆ ಕುರಿತಂತೆ ಮೈಸೂರಿನಲ್ಲಿ ಸಚಿವ ಆರ್.ಅಶೋಕ್‌ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಆರ್‌.ಅಶೋಕ್
ಆರ್‌.ಅಶೋಕ್
author img

By

Published : Mar 3, 2022, 3:24 PM IST

ಮೈಸೂರು: ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜ್ಯದ ರೈತರು, ಬಡವರು ಹಾಗು ಮಧ್ಯಮ ವರ್ಗದ ಪರವಾದ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ತಿ.ನರಸೀಪುರ ಬೂತ್ ಅಧ್ಯಕ್ಷರ ಸಮಾವೇಶದಲ್ಲಿ ಭಾಗಿಯಾಗಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಜೆಟ್​​ನಲ್ಲಿ ಮಂಡನೆಯಾದ ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಉಕ್ರೇನ್ ಮತ್ತು ರಷ್ಯಾ ನಡುವಿವ ಯುದ್ಧ ಸಂಬಂಧ ಪ್ರತಿಕ್ರಿಯಿಸಿ, ಉಕ್ರೇನ್ ದೇಶದಲ್ಲಿರುವ ವಿವಿಧ ರಾಷ್ಟ್ರಗಳ ಜನರನ್ನು ಕರೆತರುವಲ್ಲಿ ಇತರೆ ದೇಶಗಳು ಹಿಂದೆ ಸರಿದಿದೆ. ಆದರೆ, ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ನಾಲ್ಕು ಸಚಿವರನ್ನು ಉಕ್ರೇನ್ ದೇಶಕ್ಕೆ ಕಳುಹಿಸಿಕೊಟ್ಟಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಮನೋಸ್ಥೈರ್ಯ ತುಂಬಿ 17ಸಾವಿರ ಭಾರತೀಯರನ್ನು ಭಾರತಕ್ಕೆ ಕರೆ ತರುವ ಉದ್ದೇಶವಿದೆ ಎಂದರು.

ಇದನ್ನೂ ಓದಿ : ಉಕ್ರೇನ್​ನಲ್ಲಿ ಸಿಲುಕಿದ 693 ಕನ್ನಡಿಗರು: 149 ಮಂದಿ ಈವರೆಗೆ ತಾಯ್ನಾಡಿಗೆ ವಾಪಸ್

ಕಾಂಗ್ರೆಸ್​​ನ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಮಾತನಾಡುತ್ತಾ, ಕಾಂಗ್ರೆಸ್ ನಾಯಕರು ರಾಜ್ಯದ ರೈತರ ಏಳಿಗೆ ಬಯಸುತ್ತಿಲ್ಲ. ಮೋಜು ಮಸ್ತಿ ಮಾಡುವುದಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಆ ಪಕ್ಷದ ನಾಯಕರ ನಡವಳಿಕೆ ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ ಎಂದು ಟೀಕಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.