ETV Bharat / state

ಇಂದಿರಾ ಕ್ಯಾಂಟೀನ್​ನಲ್ಲಿ ಹೊರಗಡೆಯಿಂದ ಮಾಂಸ ತಂದು ತಿನ್ನಬಹುದು, ಆದರೆ ಪೂರೈಕೆ ಇಲ್ಲ: ಸಚಿವ ಮಹಾದೇವಪ್ಪ - ಇಂದಿರಾ ಕ್ಯಾಂಟೀನ್

ಇಂದಿರಾ ಕ್ಯಾಂಟೀನ್​ನಲ್ಲಿ ಹೊರಗಡೆಯಿಂದ ಮಾಂಸಹಾರ ತಂದು ತಿನ್ನಬಹುದು. ಆದರೆ ಕ್ಯಾಂಟೀನ್​ನಲ್ಲಿ ಪೂರೈಕೆ ಇಲ್ಲ ಎಂದು ಸಚಿವ ಮಹಾದೇವಪ್ಪ ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್
author img

By

Published : Jun 17, 2023, 1:40 PM IST

ಮೈಸೂರು: ಇಂದಿರಾ ಕ್ಯಾಂಟೀನ್​ನಲ್ಲಿ ಊಟ ಕೊಡುತ್ತೇವೆ, ಆದರೆ ಮಾಂಸಹಾರ ಪೂರೈಕೆ ಇಲ್ಲ. ಆದರೆ ಹೊರಗಡೆಯಿಂದ ಮಾಂಸಹಾರ ತಂದು ತಿನ್ನಬಹುದು ಎಂದು ಮಾಧ್ಯಮ ಸಂವಾದದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್ ಸಿ.ಮಹಾದೇವಪ್ಪ ಹೇಳಿದ್ದಾರೆ.

ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಸಚಿವ ಡಾ.ಎಚ್ ಸಿ.ಮಹಾದೇವಪ್ಪ, ’’ನಾನು 9 ಚುನಾವಣೆಯನ್ನು ಎದುರಿಸಿದ್ದೇನೆ. ಅದರಲ್ಲಿ ಆರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಮೂರು ಚುನಾವಣೆಯಲ್ಲಿ ಸೋತಿದ್ದೇನೆ. ಒಂದು ಬಾರಿ ಲೋಕಸಭಾ ಚುನಾವಣೆಗೂ ಸ್ಪರ್ಧೆ ಮಾಡಿ ಸೋತಿದ್ದೇನೆ. ಅಲ್ಲಿಂದ ಇಲ್ಲಿಯವರೆಗೆ ಯಾರ ಬಳಿಯೂ ಟಿಕೆಟ್​ ಕೊಡಿ ಎಂದು ಕೇಳಿಲ್ಲ. ಟಿಕೆಟ್​ ಕೊಟ್ಟಾಗ ಗೆದ್ದು, ಅಧಿಕಾರ ಸಿಕ್ಕಾಗ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ‘‘ ಎಂದರು.

ಇಂದಿರಾ ಕ್ಯಾಂಟೀನ್ ಆರಂಭಿಸುವ ಪ್ರಸ್ತಾಪ ಇದೆ: ಹಳೆಯ ಇಂದಿರಾ ಕ್ಯಾಂಟೀನ್​ ಜೊತೆಗೆ ಹೊಸ ಇಂದಿರಾ ಕ್ಯಾಂಟಿನ್​ ಶುರು ಮಾಡುವ ಪ್ರಸ್ತಾವ ಇದೆ. ಸದ್ಯ ಇಂದಿರಾ ಕ್ಯಾಂಟೀನ್​ನಲ್ಲಿ ಊಟ ಕೊಡಬೇಕು ಎಂದು ಪ್ರಸ್ತಾಪ ಮಾಡಲಾಗುತ್ತಿದ್ದು. ಮಾಂಸಹಾರ ನೀಡುವ ಬಗ್ಗೆ ಸದ್ಯಕ್ಕೆ ಚಿಂತನೆ ಇಲ್ಲ. ಆದರೆ ಮಾಂಸಾಹಾರಿಗಳು ಹೊರಗಡೆಯಿಂದ ತಂದು ಇಂದಿರಾ ಕ್ಯಾಂಟೀನ್​ನಲ್ಲಿ ಮಾಂಸಾಹಾರ ತಿನ್ನಬಹುದು ಎಂದು ಸಚಿವರು ಹೇಳಿಕೆ ನೀಡಿದ್ದಾರೆ.

ಬೇರೆ ಕಡೆಯಿಂದ ಅಕ್ಕಿ ಖರೀದಿಸುವ ಚಿಂತನೆ: ಚುನಾವಣಾ ಸಂದರ್ಭದಲ್ಲಿ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿದ್ದೆವು. ಅದರಂತೆ ಐದು ಗ್ಯಾರಂಟಿಗಳಾದ ಉಚಿತ ವಿದ್ಯುತ್, ಉಚಿತ ಬಸ್ ಸೌಲಭ್ಯ, ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಿದ್ದೆವು. ಆದರೆ, ಕೇಂದ್ರ ಸರ್ಕಾರ ಅಕ್ಕಿ ನೀಡಲು ಹಿಂದೇಟು ಹಾಕುತ್ತಿದ್ದು. ಮುಖ್ಯಮಂತ್ರಿಗಳು ಕೇಂದ್ರದ ಜೊತೆ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೆ ಪರ್ಯಾಯ ಮಾರ್ಗದ ಮೂಲಕ ಅಕ್ಕಿಯನ್ನು ಖರೀದಿಸುವ ಚಿಂತನೆ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ: ಪತ್ರಿಕಾ ಸಂವಾದದಲ್ಲಿ ಸಿಎಂ ಅಧಿಕಾರ ಹಂಚಿಕೆ ವಿಚಾರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಹಾದೇವಪ್ಪ, ಈಗ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಅವರು ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಎಂದು ಮೂರು ಬಾರಿ ಪುನರುಚ್ಚಾರ ಮಾಡಿ ಅಧಿಕಾರ ಹಸ್ತಾಂತರ ಬಗ್ಗೆ ಜಾಣ್ಮೆಯ ಉತ್ತರ ನೀಡಿದರು.

ಸಾಮಾನ್ಯವಾಗಿ ಕುಟುಂಬದಲ್ಲಿ ಮಹಿಳೆಯರೇ ಯಜಮಾನಿ : ಕೇಂದ್ರ ಸರ್ಕಾರ ದೇಶಾದ್ಯಂತ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದೆ. ಕಾಯಿದೆಯ ಮಾರ್ಗಸೂಚಿ ಅನ್ವಯ ಮನೆಯ ಯಜಮಾನಿ ಯಾರೆಂಬುದನ್ನು ತೀರ್ಮಾನ ಮಾಡುತ್ತದೆ. ಇದರಲ್ಲಿ ಯಾವುದೇ ಗೊಂದಲ ಮೂಡುವುದಕ್ಕೆ ಅವಕಾಶ ಇಲ್ಲ. ಶೇಕಡಾ 87 ರಷ್ಟು ಕುಟುಂಬಗಳಲ್ಲಿ ಮಹಿಳೆಯರೇ ಯಜಮಾನಿ. ಇನ್ನುಳಿದ ಕುಟುಂಬಗಳಲ್ಲಿ ಪುರುಷ ಯಜಮಾನರು ಇರಬಹುದು ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿಕೆ ನೀಡಿದರು.

ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು : ಸಂವಿಧಾನ ತಿದ್ದುಪಡಿಗೆ ಅವಕಾಶ ಇದೆ. ಆದರೆ ತಿರುಚಲು ಅವಕಾಶ ಇಲ್ಲ. ಸಂವಿಧಾನ ಪೀಠಿಕೆಯ ಮೂಲಕ ಮಕ್ಕಳಿಗೆ ಸಮಾನತೆಯ ಬದುಕು ಕಲಿಸಬಹುದು. ನಾವೆಲ್ಲ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದೆವು. ಸಂವಿಧಾನದ ಹೇಳಿದ ರೀತಿಯಲ್ಲಿ ನಡೆದುಕೊಳ್ಳಬೇಕು. ಪಠ್ಯದಲ್ಲಿ ಚರಿತ್ರೆಯನ್ನು ಸರಿಯಾಗಿ ಹೇಳಬೇಕು.

ಚರಿತ್ರೆಯನ್ನು ತಪ್ಪಾಗಿ ಹೇಳಿದರೆ ಯುವಕರು ದಾರಿ ತಪ್ಪುತ್ತಾರೆ. ಗೋ ಹತ್ಯೆ ನಿಷೇಧ ಕಾಯಿದೆ 1964 ರಲ್ಲೇ ಇದೆ. ಇದರಲ್ಲಿ ಗೋ ಹತ್ಯೆ ವಿಚಾರವನ್ನು ಪ್ರಸ್ತಾವನೆ ಮಾಡಲಾಗಿದ್ದು. ಇದರ ಬಗ್ಗೆ ಈಗ ಯಾರ್ಯಾರೋ ನಮಗೆ ಹೇಳಲು ಬರುತ್ತಿದ್ದಾರೆ. ನಮ್ಮ ಧರ್ಮ ಆಧಾರಿತ ರಾಷ್ಟ್ರವಲ್ಲ. ಸಮೃದ್ಧ ರಾಷ್ಟ್ರವೇ ನಮ್ಮ ಗುರಿ ಎಂದು ಇದೇ ಸಂದರ್ಭದಲ್ಲಿ ಸಚಿವ ಡಾ. ಎಚ್ ಸಿ.ಮಹಾದೇವಪ್ಪ ಹೇಳಿಕೆ ನೀಡಿದರು.

ಇದನ್ನೂ ಓದಿ: ರೂಪಾಯಿ ನೋಟಿಗೆ ಬಿರಿಯಾನಿ ಮಾರಾಟ.. ನೂಕುನುಗ್ಗಲು, ಮಾರಾಮಾರಿ, 100 ರೂಪಾಯಿ ದಂಡ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.