ETV Bharat / state

ರಾಜ್​​ಕುಮಾರ್, ಅಂಬರೀಶ್​​​, ವಿಷ್ಣುವರ್ಧನ್ ಹೆಸರಲ್ಲಿ 2 ಆನೆ, 1ಸಿಂಹ ದತ್ತು ಪಡೆದ ಸಚಿವ.. - ಎರಡು ಆನೆ, ಒಂದು ಸಿಂಹ ದತ್ತು ಪಡೆದ ಸಚಿವ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವಿಲ್ಲದೆ, ನಿರ್ವಹಣೆ ಮಾಡುವುದೂ ಕಷ್ಟಕರವಾಗಿತ್ತು. ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಾಗ ಅವರು ಸ್ಪಂದಿಸಿದ ರೀತಿ ನಿಜಕ್ಕೂ ಮಾದರಿ. ಆಪ್ತರಿಂದ ಹಾಗೂ ಜನಪ್ರತಿನಿಧಿಗಳಿಂದ ಮೃಗಾಲಯಕ್ಕೆ ₹ 3.23 ಕೋಟಿ ದೇಣಿಗೆ ಸಂಗ್ರಹಿಸಿಕೊಟ್ಟರು.

minister-for-adoption-of-animals
ಮೃಗಾಲಯಕ್ಕೆ ಚಾಲನೆ
author img

By

Published : Jun 8, 2020, 4:29 PM IST

ಮೈಸೂರು : ಕನ್ನಡ ಚಿತ್ರರಂಗದ ಧ್ರುವತಾರೆಗಳಾದ ಡಾ.ರಾಜ್ ಕುಮಾರ್, ಅಂಬರೀಶ್‌ ಹಾಗೂ ಡಾ.ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಆನೆಗಳು ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯುವ ಮೂಲಕ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ದಿಗ್ಗಜ ನಟರುಗಳಿಗೆ ಗೌರವ ಸೂಚಿಸಿದರು.

ಲಾಕ್​ಡೌನ್​​ನಿಂದ ಮುಚ್ಚಲಾಗಿದ್ದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಇಂದು ಚಾಲನೆ ನೀಡಿದ ಸಚಿವರು, ಮೈಸೂರು ಮೂಲದ ಮೂವರು ನಟರಿಗೆ ಗೌರವ ಸೂಚಿಸಲು ಇದು ಸಕಾಲ. ಈ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದೇನೆ ಎಂದರು.

ಎರಡು ಆನೆ, ಒಂದು ಸಿಂಹ ದತ್ತು : ವರನಟ ರಾಜ್ ಕುಮಾರ್ ಹೆಸರಿನಲ್ಲಿ ಆನೆ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್​ ಹೆಸರಿನಲ್ಲಿ ಆಫ್ರಿಕನ್ ಆನೆ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಸಿಂಹವನ್ನು ಸಚಿವರು ದತ್ತು ಪಡೆದುಕೊಂಡರು.

ಮೃಗಾಲಯಕ್ಕೆ ಮರು ಚಾಲನೆ ನೀಡಿದ ಬಳಿಕ ಸಚಿವ ಎಸ್‌ ಟಿ ಸೋಮಶೇಖರ್‌ ಹೇಳಿಕೆ..

ಲಾಕ್​ಡೌನ್​​​ನಿಂದಾಗಿ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಹೇರಿದ್ದರಿಂದ ಮೃಗಾಲಯಕ್ಕೆ ಆದಾಯ ಇರಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವಿಲ್ಲದೆ, ನಿರ್ವಹಣೆ ಮಾಡುವುದೂ ಕಷ್ಟಕರವಾಗಿತ್ತು. ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಾಗ ಅವರು ಸ್ಪಂದಿಸಿದ ರೀತಿ ನಿಜಕ್ಕೂ ಮಾದರಿ. ಆಪ್ತರಿಂದ ಹಾಗೂ ಜನಪ್ರತಿನಿಧಿಗಳಿಂದ ಮೃಗಾಲಯಕ್ಕೆ ₹ 3.23 ಕೋಟಿ ದೇಣಿಗೆ ಸಂಗ್ರಹಿಸಿಕೊಟ್ಟರು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದರು.

ಅಕ್ಕ ಸಂಸ್ಥೆಯಿಂದ ₹40 ಲಕ್ಷ: ಅಮೆರಿಕದ ಅಕ್ಕ ಸಂಸ್ಥೆಯಿಂದ ಮೃಗಾಲಯದ ನಿರ್ವಹಣೆಗೆಂದು ₹40 ಲಕ್ಷ ಚೆಕ್‌ನ ಇದೇ ವೇಳೆ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಮೂರ್ತಿ ಕಿಲಾರ ಅವರು ಮೃಗಾಲಯಕ್ಕೆ ಹಸ್ತಾಂತರಿಸಿದರು.

ಸಚಿವರ ಹೆಸರಿನಲ್ಲಿ ಫಲಕ : ಸಂಕಷ್ಟದ ಕಾಲದಲ್ಲಿ ಮೃಗಾಲಯಕ್ಕೆ ₹ 3.23 ಕೋಟಿ ದೇಣಿಗೆ ಸಂಗ್ರಹಿಸಿಕೊಟ್ಟ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಗೌರವಾರ್ಥವಾಗಿ ಅವರ ಹೆಸರಿನಲ್ಲಿ ಮೃಗಾಲಯದ ಮುಖ್ಯ ಪ್ರವೇಶದ್ವಾರದ ಎದುರು ಫಲಕವೊಂದನ್ನು ನಿರ್ಮಿಸಲಾಗಿದೆ. ಅದನ್ನು ಮೃಗಾಲಯದ ಪುನಾರಂಭಗೊಳಿಸುವ ಸಂದರ್ಭದಲ್ಲಿ ಅನಾವರಣ ಮಾಡಲಾಯಿತು.

ಜಿರಾಫೆ ಮರಿಗಳಿಗೆ ನಾಮಕರಣ: ಈಚೆಗೆ ಜನಿಸಿದ ಜಿರಾಫೆ ಮರಿಗಳಿಗೆ ಇದೇ ವೇಳೆ ಆದ್ಯಯಧುವೀರ ಹಾಗೂ ಬಾಲಾಜಿ ಎಂದು ನಾಮಕರಣ ಮಾಡಲಾಯಿತು. ನಾಮಫಲಕವನ್ನು ಸೋಮಶೇಖರ್ ಹಾಗೂ ಸಂಸದೆ ಸುಮಲತಾ ಅಂಬರೀಶ್​ ಅವರು ಪ್ರದರ್ಶಿಸಿದರು.

ಬಿಳಿ ಹುಲಿಗಾಗಿ ಆವರಣ ಅನಾವರಣ: ಅಪರೂಪದ ತಳಿಯಾದ ಬಿಳಿ ಹುಲಿ ಸಂಚರಿಸಲು ಅನುಕೂಲವಾಗಲು ನೂತನವಾಗಿ ನಿರ್ಮಿಸಲಾಗಿರುವ ಆವರಣವನ್ನು ಸಚಿವರು ಅನಾವರಣಗೊಳಿಸಿದರು. ಇಲ್ಲಿ ಪ್ರಸ್ತುತ ಸಾರಾ ಎಂಬ ಬಿಳಿ ಹೆಣ್ಣು ಹುಲಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಅಭಿರಾಮ್​​ ಜಿ.ಶಂಕರ್ ಮಾತನಾಡಿ, ಒಂದೂವರೆ ತಿಂಗಳಲ್ಲಿ ಮೂರು ₹3 ಕೋಟಿ ಸಂಹ್ರಹಿಸಿ ಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರ ಎಲ್ಲರಿಗೂ ಅನುಕರಣೀಯ. ಮೃಗಾಲಯ ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಂಸದೆ ಸುಮಲತಾ ಅಂಬರೀಶ್​ ಮಾತನಾಡಿ, ಮೈಸೂರು ಮೃಗಾಲಯ ಬಗ್ಗೆ ಅಂಬರೀಶ್​​ ಅವರಿಗೆ ತುಂಬಾ ಪ್ರೀತಿ ಇತ್ತು. ಅವರು ಇಲ್ಲಿ ಮೃಗಾಲಯ ಸಿನಿಮಾದ ಜೊತೆಗೆ ಸಾಕಷ್ಟು ಸಿನಿಮಾಗಳ ನಂಟು ಹೊಂದಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.