ETV Bharat / state

ಮೈಸೂರಿನಲ್ಲಿ ತಂತ್ರಜ್ಞಾನದ ಟ್ರೈನಿಂಗ್ ಸೆಂಟರ್ ಆರಂಭ: ಸಚಿವ ಡಾ. ಸಿ. ಎನ್ ಅಶ್ವತ್ಥ್​​ ನಾರಾಯಣ್..

ಐಟಿ ಸೇವೆಯಲ್ಲಿ ಮೈಸೂರು ಉನ್ನತ ಮಟ್ಟಕ್ಕೆ ಬೆಳೆದಿದೆ. ಸಾಫ್ಟ್‌ವೇರ್ ಎಕ್ಸ್​ಪೋರ್ಟ್​ನಲ್ಲಿ 2ನೇ ಸ್ಥಾನದಲ್ಲಿದೆ. ಪ್ರವಾಸೋದ್ಯಮ, ಶಿಕ್ಷಣ, ಉದ್ಯಮ, ಉತ್ಪಾದನೆ, ಸೇರಿದಂತೆ ಎಲ್ಲಾ ರಂಗಗಳಲ್ಲೂ ಹೆಸರು ಪಡೆದಿದೆ ಎಂದು ಸಚಿವ ಡಾ. ಸಿ. ಎನ್ ಅಶ್ವತ್ಥ್​ ನಾರಾಯಣ್ ತಿಳಿಸಿದ್ದಾರೆ.

mysore
ದಿ ಬಿಗ್ ಟೆಕ್ ಷೋ- ಮೈಸೂರು ಕಾರ್ಯಕ್ರಮ
author img

By

Published : Oct 25, 2021, 4:18 PM IST

ಮೈಸೂರು: ಮೈಸೂರು ವಸ್ತು ಪ್ರದರ್ಶನದಲ್ಲಿ ತಂತ್ರಜ್ಞಾನದ ಟ್ರೈನಿಂಗ್ ಸೆಂಟರ್ ಅನ್ನು ಪ್ರಾರಂಭ ಮಾಡುವುದಾಗಿ ಸಚಿವ ಡಾ. ಸಿ. ಎನ್ ಅಶ್ವತ್ಥ್​ ನಾರಾಯಣ್ ತಿಳಿಸಿದ್ದಾರೆ.

programme
ದಿ ಬಿಗ್ ಟೆಕ್ ಷೋ- ಮೈಸೂರು ಕಾರ್ಯಕ್ರಮ

ಇಂದು ದಿ ಬಿಗ್ ಟೆಕ್ ಷೋ- ಮೈಸೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೈಸೂರು ಎಲೆಕ್ಟ್ರಾನಿಕ್ ಶಕ್ತಿಯಾಗಿ ಬೆಳೆಯುತ್ತಿದೆ. ಇಲ್ಲಿ ಟೆಕ್ ಪಾರ್ಕ್ ನಿರ್ಮಾಣ ಮಾಡಲು ಅವಕಾಶ ನೀಡಲಾಗಿದೆ. ಇಂತಹ ನೂರು ಟೆಕ್ ಪಾರ್ಕ್ ಕಟ್ಟಲು ತಯಾರಿದ್ದೇವೆ. ಇಂಜಿನಿಯರಿಂಗ್​ಗೆ 3-4 ವಾರ ಟ್ರೈನಿಂಗ್ ನೀಡುತ್ತಿದ್ದೆವು. ಈಗ ಅದು ಎಂಟರ್ ಪ್ರಿನರ್​ಶಿಪ್​ 30 ವಾರಗಳ ಕಾಲ ನೀಡಲಾಗುತ್ತಿದೆ.

ಇದರ ಜೊತೆಗೆ ಸ್ಟೈ ಫಂಡ್‌ ಕೊಡಿಸಲು ಪ್ರಯತ್ನ ಮಾಡಲಾಗುತ್ತಿದೆ. ತಂತ್ರಜ್ಞಾನದಲ್ಲಿ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇಡೀ ವಿಶ್ವದಲ್ಲಿ ಪ್ರಥಮ ಸ್ಥಾನ ಪಡೆಯಬೇಕು. ಟೆಕ್ ಪಾರ್ಕ್ ನಿರ್ಮಾಣಕ್ಕೆ ಲ್ಯಾಂಡ್ ವ್ಯವಸ್ಥೆ ಕಲ್ಪಿಸಲಾಗುವುದು.‌‌ ಏರ್ ಪೋಟ್೯ ವಿಸ್ತರಣೆ ಮಾಡಲು ಸಿಎಂ ಜೊತೆಯಲ್ಲಿ ಚರ್ಚೆ ಮಾಡಲಾಗಿದ್ದು, ಎಲ್ಲ ರಂಗಗಳಲ್ಲೂ ಸಹಕಾರ ನೀಡಲು ತಯಾರಿದ್ದೇವೆ ಎಂದರು.

ಐಟಿ ಸೇವೆಯಲ್ಲಿ ಮೈಸೂರು ಉನ್ನತ ಮಟ್ಟಕ್ಕೆ ಬೆಳೆದಿದೆ. ಸಾಫ್ಟ್‌ವೇರ್ ಎಕ್ಸ್​ಪೋರ್ಟ್​ನಲ್ಲಿ 2ನೇ ಸ್ಥಾನದಲ್ಲಿದೆ. ಪ್ರವಾಸೋದ್ಯಮ, ಶಿಕ್ಷಣ, ಉದ್ಯಮ, ಉತ್ಪಾದನೆ, ಸೇರಿದಂತೆ ಎಲ್ಲ ರಂಗಗಳಲ್ಲೂ ಹೆಸರು ಪಡೆದಿದೆ. ಮೊದಲು ಮೀಸಲಾತಿ‌ ಪ್ರಾರಂಭವಾಗಿದ್ದು ಮೈಸೂರಿನಲ್ಲಿ. ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾಗಿರುವುದು ಸೈಬರ್ ಸೆಕ್ಯೂರಿಟಿ ಎಂದು‌ ಹೇಳಿದರು.

ನಮ್ಮ ಸಮಾಜಕ್ಕೆ ನಾವು ಶಕ್ತಿ ತುಂಬಬೇಕು. ಈ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ನಮ್ಮ ಸರ್ಕಾರ ತಿಳಿವಳಿಕೆ ನೀಡಿದೆ. ನಾವು ನಮ್ಮ ಕಲಿಕೆಗಳನ್ನು ಸರ್ಕಾರ ವಿಸ್ತರಿಸಿದೆ. ಕಂಪ್ಯೂಟರ್ ಪ್ಯೂಚರ್ ಪರೀಕ್ಷೆಯನ್ನು ಕಡ್ಡಾಯ ಮಾಡಬೇಕು. ಕರ್ನಾಟಕ ರಾಜ್ಯ ಸಂಪೂರ್ಣವಾಗಿ ಎಲ್ಲಾ ತಂತ್ರಜ್ಞಾನಗಳಿಂದ ಹೆಸರು ಪಡೆದಿದೆ. ಮೈಸೂರು ಶಕ್ತಿಯನ್ನು ವಿಶ್ವಕ್ಕೆ ತೋರಿಸಬೇಕು.‌ ಲಕ್ಷ ಕೋಟಿ ಬಂಡವಾಳ ಹೂಡಲಿಕ್ಕೆ ಬಹಳಷ್ಟು ಕಂಪನಿಗಳು ತಯಾರಿವೆ. ನಮ್ಮಲ್ಲಿ ಬಂಡವಾಳ ಹಾಕಿದರೆ, ಯಾರಿಗೋ ಬಂಡವಾಳ ಸಿಗುತ್ತದೆ.‌ ಮೈಸೂರು ಈ ಮಟ್ಟಕ್ಕೆ ಬೆಳೆಯಲಿಕ್ಕೆ ಕಾರಣವಾಗಿದೆ ಎಂದರು.

ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮಾನ್ಯುಪ್ಯಾಕ್ಚರಿಂಗ್ (ಇ ಎಸ್ ಡಿ ಎಂ)ಪ್ರಾರಂಭವಾಗಿದ್ದು, ನಮ್ಮ ಪಾರ್ಕ್ ಪ್ರಾರಂಭವಾಗಿದೆ. ರಾಜ್ಯ ಸರ್ಕಾರದಿಂದ ಈಗಾಗಲೇ ಬೆಂಗಳೂರು ಹೊರತುಪಡಿಸಿ, ಮೈಸೂರಿನಲ್ಲಿ ಐಟಿ ಪಾಲಿಸಿ ಮಾಡಲಿಕ್ಕೆ ಒತ್ತು ನೀಡುತ್ತಿದ್ದೇವೆ.‌

ಇಂಡಸ್ಟ್ರಿ ಪಾಲಿಸಿಯಲ್ಲಿ ಹೆಚ್ಚು ಒತ್ತನ್ನು ನೀಡುತ್ತಿದ್ದೇವೆ. ಇಎಸ್ ಡಿಎಂಗೆ ಸಬ್ಸಿಡಿ ನೀಡುತ್ತಿದ್ದೇವೆ. ಲ್ಯಾಂಡ್ ರೀಫಾರ್ಮ್​ ಅನ್ನು ಜಾರಿಗೆ ತಂದಿದ್ದೇವೆ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ತಕ್ಕ ಬೆಲೆ ಸಿಗುತ್ತಿದೆ. ರೈತರಿಗೆ ಅನುಕೂಲವಾಗಬೇಕು. ಜಾಗತೀಕರಣದಿಂದ ನಾವು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ತಂತ್ರಜ್ಞಾನದಲ್ಲಿ ಅಭಿವೃದ್ಧಿಯಾಗಬೇಕು. ಈ ಆವಿಷ್ಕಾರ ತಂತ್ರಜ್ಞಾನ‌ಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕ ಸಮಾಜವನ್ನು ಕಟ್ಟೋಣ ಎಂದು ತಿಳಿಸಿದರು.

ಓದಿ: ಏಕಕಾಲಕ್ಕೆ ಅರಬ್ಬಿ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ಮಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.