ಮೈಸೂರು: ಮಾನಸಿಕ ಅಸ್ವಸ್ಥನೋರ್ವ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ತಿ. ನರಸೀಪುರ ತಾಲೂಕಿನಲ್ಲಿ ನಡೆದಿದೆ.
ತಿ. ನರಸೀಪುರ ತಾಲೂಕಿನ ಕನ್ನಳ್ಳಿ ಮೋಳೆ ಗ್ರಾಮದ ಶಿವಣ್ಣ (42) ಮೃತ ವ್ಯಕ್ತಿ. ಮಾನಸಿಕ ಅಸ್ವಸ್ಥ ಶಿವಣ್ಣನನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆ್ಯಬುಲೆನ್ಸ್ನಿಂದ ಜಿಗಿದು ತಿ. ನರಸೀಪುರ ರಸ್ತೆ ಮಧ್ಯೆ ಕುಳಿತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತನ ವರ್ತನೆ ಕಂಡು ಸಾರ್ವಜನಿಕರು ಗಾಬರಿಯಾಗಿದ್ದಾರೆ.
ಇದನ್ನೂ ಓದಿ: 'ನನ್ನ ಜೀವನದಲ್ಲಿ ಕಪ್ಪು ಚುಕ್ಕೆ ಇರಲಿಲ್ಲ'.. ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವರದಿಗಾರ
ಪೊಲೀಸರು ಹಾಗೂ ಸಾರ್ವಜನಿಕರು ಈತನನ್ನು ಹಿಡಿದು ಕೆ.ಆರ್. ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಿವಣ್ಣ ಮೃತಪಟ್ಟಿದ್ದಾನೆ.