ETV Bharat / state

ಮೆಡಿಕಲ್ ಹಾಸ್ಟೆಲ್ ಛಾವಣಿ ಕುಸಿತ...ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು - Hostel roof collapse news

ನಗರದ ಜೆಎಲ್​​​​ಬಿ ರಸ್ತೆಯಲ್ಲಿರುವ ಮೆಡಿಕಲ್ ಹಾಸ್ಟೆಲ್​ನಲ್ಲಿ ಒಟ್ಟು 300 ವಿದ್ಯಾರ್ಥಿಗಳು ನೆಲೆಸಿದ್ದು, ತಡರಾತ್ರಿ ಸುರಿದ ಭಾರಿ ಮಳೆಯಿಂದ ಛಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರೊಬ್ಬರೂ ಗಂಭೀರವಾಗಿ ಗಾಯಗೊಂಡಿಲ್ಲ.

medical-hostel-roof-collapse-in-mysuru
ಮೆಡಿಕಲ್ ಹಾಸ್ಟೆಲ್ ಛಾವಣಿ ಕುಸಿತ.
author img

By

Published : Nov 4, 2020, 1:48 PM IST

ಮೈಸೂರು: ಶಿಥಿಲಗೊಂಡಿರುವ ಮೆಡಿಕಲ್ ಹಾಸ್ಟೆಲ್‌ ಛಾವಣಿ ಕುಸಿದ್ದಿದ್ದು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ನಗರದ ಜೆಎಲ್​​​​ಬಿ ರಸ್ತೆಯಲ್ಲಿರುವ ಮೆಡಿಕಲ್ ಹಾಸ್ಟೆಲ್​ನಲ್ಲಿ ಒಟ್ಟು 300 ವಿದ್ಯಾರ್ಥಿಗಳು ನೆಲೆಸಿದ್ದು, ತಡರಾತ್ರಿ ಸುರಿದ ಭಾರಿ ಮಳೆಯಿಂದ ಛಾವಣಿ ಕುಸಿದು ಬಿದ್ದಿದೆ.

ಘಟನೆ ಕುರಿತು ಮಾತನಾಡಿರುವ ಹಾಸ್ಟೆಲ್ ವಾರ್ಡನ್ ಚಂದ್ರಶೇಖರ್, ಈ ಹಾಸ್ಟೆಲ್ ಅನ್ನು 1962ರಲ್ಲಿ ನಿರ್ಮಿಸಲಾಗಿದೆ. ಮಳೆ ಬಂದ ಕಾರಣ ಮೇಲೆ ಇರುವ ರೂಮ್​​ನಲ್ಲಿ ಛಾವಣಿ ಕುಸಿದಿದ್ದು, ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದೇವೆ. ಹಾಗೂ ಮುಂದೆ ಬರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಗೆಸ್ಟ್ ಹೌಸ್​​ನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದು, ಈ ಹಾಸ್ಟೆಲ್ ಕಟ್ಟಡ ಸರಿಪಡಿಸುವಂತೆ ನಾವು ಹಾಗೂ ಅಧಿಕಾರಿಗಳು ಸಭೆ ನಡೆಸಿ ದರಸ್ತಿ ಕಾರ್ಯ ಕುರಿತು ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಯಶವಂತ್ ಮಾತನಾಡಿ, ರೂಮ್​​​​ನಲ್ಲಿ ಓದುತ್ತಿರುವಾಗ ಇದ್ದಕ್ಕಿದ್ದಂತೆ ಗೋಡೆ ಬಿದ್ದಿದ್ದು, ತಲೆಗೆ ಸ್ವಲ್ಪ ಪೆಟ್ಟಾಗಿದೆ, ನಾನು ಕೆಲಸ ಮುಗಿಸಿಕೊಂಡು ಆಗಾ ತಾನೆ ರೂಮ್​ಗೆ ಬಂದಿದ್ದೆ, ನನ್ನ ಇನ್ನೊಬ್ಬ ಸ್ನೇಹಿತ ರೂಮ್​​​ನಲ್ಲಿ‌ ಮಲಗಿದ್ದ, ಛಾವಣಿ ಬೀಳುವಾಗ ಯಾವುದೇ ಶಬ್ದವಾಗಲಿಲ್ಲ, ಏಕಾಏಕಿ ಬಿದ್ದ ಕಾರಣ ಸ್ವಲ್ಪ ಪೆಟ್ಟಾಗಿದ್ದು, ನಾವು ತಕ್ಷಣ ರೂಮಿನಿಂದ ಹೊರ ಬಂದೆವು ಎಂದಿದ್ದಾರೆ.

ಈ ಘಟನೆ ಬಗ್ಗೆ ಸಚಿವರು ಹೇಳಿದ್ದೇನು ?

ಈ‌ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನನಗೆ ಈ ಘಟನೆ ಬಗ್ಗೆ ಮಾಹಿತಿ ಇಲ್ಲ. ಆದರೆ, ನಾನು ಸ್ಥಳಕ್ಕೆ ಹೋಗಿ ಖಂಡಿತ ಪರಿಶೀಲನೆ ನಡೆಸುತ್ತೇನೆ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.