ಮೈಸೂರು: ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿ 65ಕ್ಕೂ ಹೆಚ್ಚು ಪಾಲಿಕೆ ಸದಸ್ಯರು, ಸಿಬ್ಬಂದಿ ಹಾಗೂ ಕಾರ್ಮಿಕರು ನಗರ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
'ವಿ ಸ್ಟಾಂಡ್ ವಿತ್ ಅವರ್ ಕಮಿಷನರ್' ಎಂಬ ಬ್ಯಾನರ್ ಹಿಡಿದು ನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಶಿಲ್ಪಾನಾಗ್ ಪರ ಜಯಕಾರ ಕೂಗಿದರು. ಬಳಿಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
![MCC staff protest, MCC staff protest for Mysore commissioner resign, MCC staff protest for Mysore commissioner Shilpanag resign, Mysore commissioner Shilpanag, Mysore commissioner Shilpanag news, ಶಿಲ್ಪಾನಾಗ್ಗಾಗಿ ಬೀದಿಗಿಳಿದ ಮಹಾನಗರ ಪಾಲಿಕೆ ಸದಸ್ಯರು, ಮೈಸೂರಿನಲ್ಲಿ ಶಿಲ್ಪಾನಾಗ್ಗಾಗಿ ಬೀದಿಗಿಳಿದ ಮಹಾನಗರ ಪಾಲಿಕೆ ಸದಸ್ಯರು, ಮೈಸೂರು ಆಯುಕ್ತೆ ಶಿಲ್ಪಾನಾಗ್, ಮೈಸೂರು ಆಯುಕ್ತೆ ಶಿಲ್ಪಾನಾಗ್ ಸುದ್ದಿ,](https://etvbharatimages.akamaized.net/etvbharat/prod-images/kn-mys-05-protest-mcc-vis-ka10003_04062021115658_0406f_1622788018_573.jpg)
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲೆಯಿಂದ ವರ್ಗಾವಣೆ ಮಾಡಿ ಶಿಲ್ಪಾನಾಗ್ ಅವರ ರಾಜೀನಾಮೆ ಹಿಂಪಡೆಯಬೇಕು. ಇಲ್ಲವಾದರೆ ಮತ್ತಷ್ಟು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ನಿನ್ನೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಿರುಕುಳದಿಂದ ಪ್ರತಿಭಟಿಸಿ ರಾಜೀನಾಮೆ ನೀಡಿದ ಪಾಲಿಕೆಯ ಆಯುಕ್ತೆ ಶಿಲ್ಪಾನಾಗ್ ಬೆಂಬಲಿಸಿ ಪಾಲಿಕೆಯ ಮುಂಭಾಗದಲ್ಲಿ ‘ನಮ್ಮ ಬೆಂಬಲ ಶಿಲ್ಪಾನಾಗ್’ ಎಂದು ಬ್ಯಾನರ್ ಹಾಕಿಕೊಂಡು ಪಾಲಿಕೆ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಇಲ್ಲಿ ಆಂಧ್ರದ ಲಾಬಿ ನಡೆಯುತ್ತಿದೆ. ಅಲ್ಲದೆ ಶಿಲ್ಪಾನಾಗ್ ರಾಜೀನಾಮೆಯನ್ನು ಅಂಗೀಕರಿಸಬಾರದು. ಜಿಲ್ಲಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
![MCC staff protest, MCC staff protest for Mysore commissioner resign, MCC staff protest for Mysore commissioner Shilpanag resign, Mysore commissioner Shilpanag, Mysore commissioner Shilpanag news, ಶಿಲ್ಪಾನಾಗ್ಗಾಗಿ ಬೀದಿಗಿಳಿದ ಮಹಾನಗರ ಪಾಲಿಕೆ ಸದಸ್ಯರು, ಮೈಸೂರಿನಲ್ಲಿ ಶಿಲ್ಪಾನಾಗ್ಗಾಗಿ ಬೀದಿಗಿಳಿದ ಮಹಾನಗರ ಪಾಲಿಕೆ ಸದಸ್ಯರು, ಮೈಸೂರು ಆಯುಕ್ತೆ ಶಿಲ್ಪಾನಾಗ್, ಮೈಸೂರು ಆಯುಕ್ತೆ ಶಿಲ್ಪಾನಾಗ್ ಸುದ್ದಿ,](https://etvbharatimages.akamaized.net/etvbharat/prod-images/kn-mys-05-protest-mcc-vis-ka10003_04062021115658_0406f_1622788018_846.jpg)