ETV Bharat / state

ಮೈಸೂರು ರಿಂಗ್ ರಸ್ತೆಯಲ್ಲಿ ತ್ಯಾಜ್ಯ ಹಾಕುವವರ ಮೇಲೆ ಹದ್ದಿನ ಕಣ್ಣು: ಸಿಸಿ ಕ್ಯಾಮರ ಅಳವಡಿಸಲು ಪಾಲಿಕೆ ಸಿದ್ಧತೆ

ತ್ಯಾಜ್ಯ ಸುರಿಯುವವರ ಮೇಲೆ ಕಣ್ಣಿಡಲು 43 ಕಿ.ಮೀ ರಿಂಗ್ ರಸ್ತೆಗೆ 75 ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತದೆ. ಪಾಲಿಕೆಯಿಂದ 25, ಮುಡಾದಿಂದ 25 ಮತ್ತು ಗ್ರಾಮ ಪಂಚಾಯತ್​ಗಳಿಂದ 25 ಒಟ್ಟು 75 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ.

author img

By

Published : Feb 16, 2021, 5:54 PM IST

MCC planed to install CC camera on ring road
ಸಂಸದ ಪ್ರತಾಪ್ ಸಿಂಹ

ಮೈಸೂರು : ನಗರದ ರಿಂಗ್ ರಸ್ತೆಯಲ್ಲಿ ತ್ಯಾಜ್ಯ ತಂದು ಸುರಿಯುವವರ ಮೇಲೆ ಕಣ್ಣಿಡುವ ಸಲುವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಮಹಾನಗರ ಪಾಲಿಕೆ‌ ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಂಸದ ಪ್ರತಾಪ್​ ಸಿಂಹ , ನಗರದ ರಿಂಗ್ ರಸ್ತೆಗೆ 75 ಸಿಸಿ ಟಿವಿ ಕ್ಯಾಮರಾ ಅಳವಡಿಕೆಗೆ ನಗರ ಪಾಲಿಕೆ ಸಿದ್ದತೆ ನಡೆಸಿದೆ. 43 ಕಿ.ಮೀ ರಿಂಗ್ ರಸ್ತೆಗೆ 75 ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು. ಪಾಲಿಕೆಯಿಂದ 25, ಮುಡಾದಿಂದ 25 ಮತ್ತು ಗ್ರಾಮ ಪಂಚಾಯತ್​ಗಳಿಂದ 25 ಒಟ್ಟು 75 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ ಎಂದರು.

ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರಿಗೂ ಈ ಸಿಸಿ ಟಿವಿ ಕ್ಯಾಮರಾಗಳು ಸಹಕಾರಿಯಾಗಲಿವೆ. ಕಳೆದ ಹತ್ತು ದಿನಗಳಿಂದ ಅಭಿಯಾನ ಮಾಡಿ ರಿಂಗ್ ರಸ್ತೆಯನ್ನು ಕ್ಲೀನ್​ ಮಾಡಲಾಗುತ್ತಿದೆ. ಸ್ವಚ್ಛ ಮಾಡಿದ ನಂತರವೂ ತ್ಯಾಜ್ಯ ಹಾಕಲಾಗ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಿದರೂ ಕೆಲವರು ಪ್ರಯೋಜನವಾಗಿಲ್ಲ. ಹೀಗಾಗಿ, ರಿಂಗ್ ರಸ್ತೆ ಸುತ್ತಮುತ್ತ ತ್ಯಾಜ್ಯ ಸುರಿಯುದಕ್ಕೆ ಶಾಶ್ವತ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಮುಂದಿನ 15 ದಿನದೊಳಗೆ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಓದಿ : ವರ್ತೂರ್ ಪ್ರಕಾಶ್‌ಗೂ ಕಾಂಗ್ರೆಸ್​​ಗೂ ಯಾವುದೇ ಸಂಬಂಧವಿಲ್ಲ: ಮುನಿಯಪ್ಪ

ಹಿನಕಲ್, ಕೂರ್ಗಳ್ಳಿ, ಶ್ರೀರಾಂಪುರ, ಸಾತಗಹಳ್ಳಿ, ಹಾಲನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಕಸ ಹಾಕದಂತೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ನಿಗಾ ವಹಿಸುವಂತೆ ಗ್ರಾಮ ಪಂಚಾಯತ್​ ಪಿಡಿಒಗಳಿಗೆ ಸೂಚನೆ ನೀಡಿದ್ದೇವೆ. ಸಾರ್ವಜನಿಕರು ಸಹಕರಿಸಬೇಕು, ಹಸಿ ಕಸ, ಒಣ ಕಸ ಹಾಕಲು ವ್ಯವಸ್ಥೆ ಮಾಡಲಾಗಿರುವ ಸ್ಥಳಗಳಲ್ಲಿ ಕಸ ಹಾಕಿ. ಆ ಮೂಲಕ ಮೈಸೂರು ಸ್ವಚ್ಚತೆಯಿಂದಿರಲು ಸಹಕರಿಸಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.