ETV Bharat / state

ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಅಂತಿಮ ವರ್ಷದ MBBS ವಿದ್ಯಾರ್ಥಿ ಸಾವು - ಸಿಸಿಟಿವಿ ವಿಡಿಯೋ - ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ

ಸಿಗ್ನಲ್ ದಾಟುವಾಗ ಕೆಎಸ್​​​ಆರ್​​​ಟಿಸಿ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಿಂದ ಬಿದ್ದ ರಭಸಕ್ಕೆ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಮೈಸೂರಲ್ಲಿ ಈ ಘಟನೆ ನಡೆದಿದೆ.

ಅಂತಿಮ ವರ್ಷದ MBBS ವಿದ್ಯಾರ್ಥಿ ಸಾವು
ಅಂತಿಮ ವರ್ಷದ MBBS ವಿದ್ಯಾರ್ಥಿ ಸಾವು
author img

By

Published : Jan 5, 2022, 4:02 PM IST

Updated : Jan 5, 2022, 4:36 PM IST

ಮೈಸೂರು: ಭೀಕರ ರಸ್ತೆ ಅಪಘಾತದಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ನಗರದ ಶಾಂತಲಾ ಥಿಯೇಟರ್ ಸಿಗ್ನಲ್​​​ನಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ.

ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ ಸಿಸಿಟಿವಿ ವಿಡಿಯೋ

ಬೆಳಗಾವಿಯ ಘಟಪ್ರಭಾದ ಎಲ್.ಎಚ್. ರಾಹುಲ್ ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ. ಸಿಗ್ನಲ್ ದಾಟುವಾಗ ಕೆಎಸ್​​​ಆರ್​​​ಟಿಸಿ ಬಸ್ಸೊಂದು ರಾಹುಲ್​ ಬೈಕ್​​ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ರಾಹುಲ್​ ಬೈಕ್​ನಿಂದ ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆ.ಆರ್. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Last Updated : Jan 5, 2022, 4:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.