ETV Bharat / state

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಸಾವು: ಕೊಲೆ ಶಂಕೆ - mysore latest crime news

ಮನೆ ಬಿಟ್ಟು ಬಂದು ಪರಸ್ತ್ರೀಯೊಂದಿಗೆ ವಾಸವಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಮೈಸೂರಿನ ಕೆಂಪೇಗೌಡ ಲೇಔಟ್​​​​ನಲ್ಲಿ ನಡೆದಿದೆ. ಆದರೆ, ಈತನ ಪಾಲಕರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದು, ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

man-suicide-in-mysore
ವ್ಯಕ್ತಿ ಸಾವು
author img

By

Published : Jun 22, 2020, 1:55 PM IST

ಮೈಸೂರು: ಮನೆ ಬಿಟ್ಟು ಪರ ಸ್ತ್ರೀಯೊಂದಿಗೆ ವಾಸವಿದ್ದ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ಪಟ್ಟಣದ ಕೆಂಪೇಗೌಡ ಲೇಔಟ್​​ನ ಮಂಗಳ ಮಂಟಪದ ಬಳಿ ನಡೆದಿದೆ.

ರವಿ (36) ಎಂಬಾತ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ನಂಜನಗೂಡು ಪಟ್ಟಣದ ಚಾಮಲಾಪುರ ಬೀದಿಯ ನಿವಾಸಿಯಾಗಿದ್ದು, ಈತ ಮನೆ ಬಿಟ್ಟು ಪರ ಸ್ತ್ರೀಯೊಂದಿಗೆ ಹಲವಾರು ವರ್ಷಗಳಿಂದ ವಾಸವಿದ್ದರು ಎನ್ನಲಾಗಿದೆ. ಇಂದು ಅವರು ವಾಸವಿದ್ದ ಕೆಂಪೇಗೌಡ ಲೇಔಟ್ ನ ಮನೆಯಲ್ಲಿ ನೇಣು ಬಿಗಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದು , ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.