ಮೈಸೂರು: ಮನೆ ದುರಸ್ತಿ ಮಾಡುವ ಸಂದರ್ಭದಲ್ಲಿ ಸಜ್ಜ ಕುಸಿದು ವೃದ್ಧನೋರ್ವ ಸಾವನ್ನಪ್ಪಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಶೀರನಹುಂಡಿ ಗ್ರಾಮದಲ್ಲಿ ನಡೆದಿದೆ.
ಹೆಚ್.ಡಿ. ಕೋಟೆ ತಾಲೂಕಿನ ಶೀರನಹುಂಡಿ ಗ್ರಾಮದ ನಿವಾಸಿಯಾದ ಜವರಯ್ಯ (68) ಮೃತ ವ್ಯಕ್ತಿ. ಮಳೆಯಿಂದಾಗಿ ಇವರ ಮನೆ ಸಂಪೂರ್ಣ ಹಾಳಾಗಿತ್ತು. ಆ ಮನೆಯನ್ನು ದುರಸ್ತಿ ಮಾಡಲು ಮುಂದಾಗಿದ್ದ ವೇಳೆ ಏಕಾಏಕಿ ಸಜ್ಜ ಕುಸಿದಿದ್ದು, ಮನೆಯ ಹಿರಿಯ ಜವರಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಈ ಘಟನೆ ಹೆಚ್.ಡಿ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.