ETV Bharat / state

ಗ್ರೀನ್​ ಝೋನ್​ನತ್ತ ಮಹಾದೇವಪುರ ವಲಯ: ಅರವಿಂದ ಲಿಂಬಾವಳಿ

author img

By

Published : Apr 23, 2020, 5:44 PM IST

ಮಹಾದೇವಪುರ ವಲಯದಲ್ಲಿ ಕೊರೊನಾ ಕಡಿಮೆಯಾಗುತ್ತಿದ್ದು, ರೆಡ್​ ಝೋನ್​ನಿಂದ ಆರೆ‌ಂಜ್ ಝೋನ್​ಗೆ ಬಂದಿದೆ. ಮುಂದಿನ ದಿನಗಳಲ್ಲಿ ಗ್ರೀನ್ ಝೋನ್​​ಗೆ ಹೋಗಲಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ವಿಶ್ವಾಸ ವ್ಯಕ್ತಪಡಿಸಿದರು.

Aravinda Limba
ಅರವಿಂದ ಲಿಂಬಾವಳಿ

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಮಹಾದೇವಪುರ ವಲಯ ಸ್ವಲ್ಪಮಟ್ಟಿಗೆ ಚೇತರಿಕೊಳ್ಳುತ್ತಿದ್ದು, ರೆಡ್​ ಝೋನ್​ನಿಂದ ಆರೆ‌ಂಜ್ ಝೋನ್​ಗೆ ಬಂದಿದೆ. ಮುಂದಿನ ದಿನಗಳಲ್ಲಿ ಗ್ರೀನ್ ಝೋನ್​ಗೆ ಹೋಗಲಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಅರವಿಂದ ಲಿಂಬಾವಳಿ

ಕ್ಷೇತ್ರದ ಬೆಳ್ಳಂದೂರು, ಬೆಳಗೆರೆ, ಚಿಕ್ಕನಾಯಕನಹಳ್ಳಿ, ಕೊಡತಿ ಹಾಗೂ ವಾರಣಾಸಿಯಲ್ಲಿ ಬಡವರಿಗೆ ಮೂರನೇ ಹಂತ‌ದ ಆಹಾರ ಸಾಮಗ್ರಿಗಳ ಕಿಟ್​​ಗಳನ್ನು‌ ವಿತರಿಸಿದರು. ಬಳಿಕ ವಾರಣಾಸಿ ಕಂಟೈನ್​​ಮೆಂಟ್​ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡಿಸಿದರು. ಬಳಿಕ ಮಾಧ್ಯಮಗಳೊದಿಗೆ ಮಾತನಾಡಿದ ‌ಅವರು, ರಾಜ್ಯ ಸರ್ಕಾರ ಆರೋಗ್ಯ ವಿಭಾಗದ ಸಲಹೆಯಂತೆ ವಾರಣಾಸಿ ಕಂಟೈನ್​​ಮೆಂಟ್ ಝೋನ್​ ಆಗಿದೆ. ಕೊರೊನಾ ಸೋಂಕು ತಗುಲಿದ್ದ ಜನರು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

Aravinda Limba
ಮಹಾದೇವಪುರಕ್ಕೆ ಭೇಟಿ ನೀಡಿದ ಶಾಸಕ ಅರವಿಂದ ಲಿಂಬಾವಳಿ

ಈ ಪ್ರದೇಶದಲ್ಲಿ ಸುಮಾರು 21 ಮನೆಗಳ 84 ಜನರು ಕಂಟೈನ್​ಮೆಂಟ್​ ಝೋನ್​ಗೆ​ ಒಳಗಾಗಿದ್ದಾರೆ. ಇಲ್ಲಿರುವವರನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಪ್ರತಿಯೊಂದು ಮನೆಗೆ ಭೇಟಿ ನೀಡಿ, ಜನರ ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದೇವೆ. ಇದು ಐಟಿ ಕ್ಷೇತ್ರವಾಗಿದ್ದು, ಅನೇಕ ಆರ್ಥಿಕ ಚಟುವಟಿಕೆಗಳು ಹಂತ ಹಂತವಾಗಿ ಆರಂಭಿಸುತ್ತೇವೆ. ಮೇ 3ರವರೆಗೆ ಜನರು ಮನೆಯಲ್ಲೇ ಇದ್ದು ಸರ್ಕಾರ ಸೂಚಿಸುವ ಸಲಹೆಗಳನ್ನ ಪಾಲಿಸುವಂತೆ ಮನವಿ ಮಾಡಿದರು.

ಲಾಕ್​ಡೌನ್ ಹಿನ್ನೆಲೆಯಲ್ಲಿ ಮೂರನೇ‌ ಹಂತದ 16,500 ಅಹಾರ ಸಾಮಾಗ್ರಿಗಳ ಕಿಟ್​​ಗಳನ್ನು ಬಡವರಿಗೆ ವಿತರಿಸಲಾಗುತ್ತಿದೆ. ಈಗಾಗಲೇ ಕ್ಷೇತ್ರದಾದ್ಯಂತ 2 ಹಂತಗಳಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಇದರ ಜೊತೆಗೆ ರೈತರಿಗೆ ಅನುಕೂಲವಾಗಲೆಂದು ವಿಜಯಪುರದ ರೈತರಿಂದ ಖರೀದಿಸಿದ್ದ 15 ಟನ್ ಆಲೂಗಡ್ಡೆಯನ್ನು ಆಹಾರ ಸಾಮಗ್ರಿಗಳ ‌ಕಿಟ್​​ಗಳಲ್ಲಿ ಸೇರಿಸಿ ಬಡವರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಲಾಕ್​ಡೌನ್ ಮುಗಿಯವವರೆಗೂ ಕ್ಷೇತ್ರದಲ್ಲಿ ಬಡ ಕುಟುಂಬ ಹಾಗೂ ಕೂಲಿ ಕಾರ್ಮಿಕರನ್ನು ಗುರುತಿಸಿ ಅವಶ್ಯವಿರುವ ಕಡೆ ವಿತರಿಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.