ETV Bharat / state

ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ, ವಿವಿಧ ಬಣ್ಣಗಳಲ್ಲಿ ಮಿಂದೆದ್ದ ಬಸವ

ಚಾಮುಂಡಿಬೆಟ್ಟದಲ್ಲಿನ ನಂದಿ ವಿಗ್ರಹಕ್ಕೆ ಕಾರ್ತಿಕ ಮಾಸದ ಪ್ರಯುಕ್ತ ಮಹಾಭಿಷೇಕ ನಡೆಯಿತು.

ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ
ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ
author img

By ETV Bharat Karnataka Team

Published : Dec 3, 2023, 8:02 PM IST

Updated : Dec 3, 2023, 9:02 PM IST

ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ

ಮೈಸೂರು : ಕಾರ್ತಿಕ ಮಾಸದ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿನ ನಂದಿ ವಿಗ್ರಹಕ್ಕೆ ವಿಜೃಂಭಣೆಯಿಂದ ಮಹಾಭಿಷೇಕ ಭಾನುವಾರ ನಡೆಯಿತು. ಮೈಸೂರಿನ ಬೆಟ್ಟದ ಬಳಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಹಾಭಿಷೇಕ ಹಾಗೂ ಪೂಜಾ ಮಹೋತ್ಸವ ನಡೆಸಲಾಗಿದ್ದು, 18ನೇ ವರ್ಷದ ಮಹಾಭಿಷೇಕ ಕಾರ್ಯಕ್ರಮ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಮಹಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ನಂದಿ ವಿಗ್ರಹಕ್ಕೆ ಮುಂಜಾನೆಯಿಂದಲೇ ವಿವಿಧ ಪೂಜೆ ಸಲ್ಲಿಸಲಾಯಿತು. ಬಳಿಕ ನಡೆದ ಮಹಾಭಿಷೇಕ ಕಾರ್ಯಕ್ರಮಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿ ವಿದ್ಯುಕ್ತ ಚಾಲನೆ ನೀಡಿದರು.

ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ
ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ

ವಿವಿಧ ದ್ರವ್ಯಗಳ ಅಭಿಷೇಕ : ಮಹಾಭಿಷೇಕ ಹಾಗೂ ಪೂಜಾ ಮಹೋತ್ಸವದ ಅಂಗವಾಗಿ ಬೃಹತ್ ನಂದಿ ವಿಗ್ರಹಕ್ಕೆ ಕನಕಾಭಿಷೇಕ, ರುದ್ರಾಭಿಷೇಕದ ಜತೆಗೆ 36 ಬಗೆಯ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಪ್ರಮುಖವಾಗಿ ಕ್ಷೀರಾಭಿಷೇಕ, ಗಂಧಾಭಿಷೇಕ, ಕುಂಕುಮಾಭಿಷೇಕ, ಅರಿಶಿನ ಅಭಿಷೇಕ ಸೇರಿದಂತೆ ವಿವಿಧ ಬಗೆಯ ಹಣ್ಣು, ಹಾಲು, ಚಂದನ, ಶ್ರೀಗಂಧ, ಬಿಲ್ವಪತ್ರೆ, ಖರ್ಜೂರ, ಕೊಬ್ಬರಿ ಅಭಿಷೇಕ ನೆರವೇರಿಸಲಾಯಿತು. ನಂತರ ಕೊನೆಯಲ್ಲಿ ಜಲಾಭಿಷೇಕದೊಡನೆ ಮಹಾಭಿಷೇಕವನ್ನು ಸಮಾಪ್ತಿಗೊಳಿಸಲಾಯಿತು. ಈ ಎಲ್ಲಾ ಅಭಿಷೇಕಗಳು ಹಾಗೂ ಪೂಜಾ ಕೈಂಕರ್ಯಗಳು, ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಮಹಾಭಿಷೇಕ ಆಚರಣೆ ಬಗ್ಗೆ ಮಾತನಾಡಿದ ಬೆಟ್ಟದ ಬಳಗ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶನ್, ಮೈಸೂರು ಮಹಾರಾಜರ ಆಳ್ವಿಕೆ ಸಂದರ್ಭದಲ್ಲಿ ಈ ಅಭಿಷೇಕ ನಡೆಸಲಾಗುತ್ತಿತ್ತು. ನಂತರದಲ್ಲಿ ಈ ಸಂಪ್ರದಾಯ ನಿಂತು ಹೋಗಿತ್ತು. ಆದರೆ, ಬೆಟ್ಟದ ಬಳಗದಿಂದ ಮಹಾಭಿಷೇಕ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಪೂಜೆ ಆರಂಭಕ್ಕೂ ಮುನ್ನ ಯದುವಂಶದ ಹೆಸರಿನಲ್ಲಿ ಸಂಕಲ್ಪವನ್ನು ಕೂಡ ಮಾಡಲಾಗುತ್ತದೆ. ಈ ರೀತಿಯ ಅಭಿಷೇಕ ಮಾಡುವುದರಿಂದ ಏಕಶಿಲೆಯಲ್ಲಿ ನಿರ್ಮಿಸಿರುವ ನಂದಿ ವಿಗ್ರಹದ ಸಂರಕ್ಷಣೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ಈ ವೇಳೆ ನೂರಾರು ಮಂದಿ ಭಕ್ತರು ಹಾಜರಿದ್ದರು. ದೇಶದ ಮೂರನೇ ಅತಿದೊಡ್ಡ ನಂದಿ ಪ್ರತಿಮೆಯನ್ನು 17ನೇ ಶತಮಾನದಲ್ಲಿ ಮೈಸೂರು ದೊರೆ ದೊಡ್ಡ ದೇವರಾಜ ಒಡೆಯರ್ ಸ್ಥಾಪಿಸಿದರು ಎಂದು ನಂಬಲಾಗಿದೆ. ಬೆಟ್ಟದ ಬಳಗ ಟ್ರಸ್ಟ್‌ನ ಪ್ರಕಾಶನ್, ಕಾರ್ಯದರ್ಶಿ ಗೋವಿಂದ ಅವರ ನೇತೃತ್ವದಲ್ಲಿ ಮಹಾಭಿಷೇಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ : ಚಾಮುಂಡಿ ಬೆಟ್ಟ, ಮೈಸೂರು ನಗರದಲ್ಲಿ ಸೆಕ್ಷನ್ 144 ಜಾರಿ: ಪೊಲೀಸ್​ ಕಮಿಷನರ್

Last Updated : Dec 3, 2023, 9:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.