ETV Bharat / state

ಮೈಸೂರಿನಲ್ಲಿ ಮಹಾಶಿವರಾತ್ರಿ ಸಂಭ್ರಮ: ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧರಿಸಿ ವಿಶೇಷ ಪೂಜೆ

ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಯಿತು.

author img

By

Published : Feb 18, 2023, 1:04 PM IST

trineshwara temple
ತ್ರಿನೇಶ್ವರ ಸ್ವಾಮಿ
ಮೈಸೂರಿನ ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು

ಮೈಸೂರು : ಮಹಾಶಿವರಾತ್ರಿಯ ನಿಮಿತ್ತ ಇಂದು ಬೆಳಗ್ಗೆಯಿಂದಲೇ ಮೈಸೂರು ಜಿಲ್ಲೆಯ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ಆರಂಭವಾಗಿದೆ. ಅರಮನೆ ಆವರಣದಲ್ಲಿರುವ ತ್ರಿನೇಶ್ವರ ಸ್ವಾಮಿಗೆ 11 ಕೆಜಿ ತೂಕದ ಚಿನ್ನದ ಮುಖವಾಡದ ಕೊಳಗವನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ಬೆಳಗ್ಗೆಯಿಂದಲೇ ತ್ರಿನೇಶ್ವರನ ದರ್ಶನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ದೇಶಾದ್ಯಂತ ಇಂದು ಮಹಾಶಿವರಾತ್ರಿ ಸಂಭ್ರಮ. ಮುಂಜಾನೆಯಿಂದಲೇ ಭಕ್ತರು ಶಿವನ ದೇವಾಲಯಗಳಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಉಪವಾಸ ಹಾಗೂ ಜಾಗರಣೆ ಈ ದಿನದ ವಿಶೇಷವಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಸಹ ಶಿವರಾತ್ರಿ ಸಂಭ್ರಮ ಜೋರಾಗಿದೆ. ನಗರದ ಅಂಬಾ ವಿಲಾಸ ಅರಮನೆಯ ಆವರಣದಲ್ಲಿರುವ ಇತಿಹಾಸ ಪ್ರಸಿದ್ಧ ತ್ರಿನೇಶ್ವರ ಸ್ವಾಮಿಗೆ ಮಹಾರಾಜರು ನೀಡಿರುವಂತಹ 11 ಕೆಜಿ ತೂಕದ ಬಾಲ ಶಿವನ ಚಿನ್ನದ ಮುಖವಾಡದ ಕೊಳಗವನ್ನು ಬೆಳಗ್ಗೆಯೇ ದೇವರಿಗೆ ಧರಿಸಿ ಪೂಜೆ ಸಲ್ಲಿಸಲಾಯಿತು. ವರ್ಷದಲ್ಲಿ ಶಿವರಾತ್ರಿಯ ದಿನದಂದು ಮಾತ್ರ ಈ ದರ್ಶನ ಭಾಗ್ಯ ಶಿವಭಕ್ತರಿಗೆ ಸಿಗುವುದು ವಿಶೇಷ.

ಶಿವರಾತ್ರಿಯಂದು ನಡೆಯುವ ವಿಶೇಷ ಪೂಜೆಗಳು : ಶಿವರಾತ್ರಿ ದಿನದಂದು ಶಿವನ ದರ್ಶನ ಪಡೆದು ಅರ್ಚನೆ ಮಾಡಿದರೆ ಪುಣ್ಯ ಫಲಗಳು ಸಿಗುತ್ತವೆ ಎಂಬುದು ಶಿವಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಇರುವ ತ್ರಿನೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 4:30 ಯಿಂದಲೇ ವಿಶೇಷ ಚಿನ್ನದ ಕೊಳಗವನ್ನ ಧಾರಣೆ, ಗಣಪತಿ ಪೂಜೆ, ರುದ್ರಾಭಿಷೇಕ, ಅಷ್ಟೋತ್ತರ ದೀಪಾರಾಧನೆ ಮಾಡಲಾಗಿತು. ರಾತ್ರಿಯವರೆಗೂ ಭಕ್ತರಿಗೆ ದೇವರ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಶಿವನನ್ನ ನೋಡಲು ಭಕ್ತಸಾಗರ ಹರಿದು ಬರುತ್ತಿದೆ.

ಇದನ್ನೂ ಓದಿ: ಮಹಾಶಿವರಾತ್ರಿ ಹಿನ್ನೆಲೆ ಮಾದಪ್ಪನ ಬೆಟ್ಟದಲ್ಲಿ ಜನಸಾಗರ: ಸಾಲೂರು ಮಠದಿಂದ ಭಕ್ತರಿಗೆ ಮುದ್ದೆ - ಬಸ್ಸಾರು ಪ್ರಸಾದ

ಇನ್ನು ದರ್ಶನಕ್ಕೆ ಬರುವ ಭಕ್ತರು ದೇವರಿಗೆ ಖರ್ಜುರದ ಹಾರ, ಬಿಳಿ ಸೇವಂತಿಗೆ ಹಾರ, ಗುಲಾಬಿ, ರುದ್ರಾಕ್ಷಿ ಮಾಲೆ ಸೇರಿದಂತೆ ವಿವಿಧ ಬಗೆಯ ಹೂವು, ಹಣ್ಣುಗಳನ್ನು ಅರ್ಪಿಸುತ್ತಿದ್ದಾರೆ. ಇದರ ಜೊತೆಗೆ ಬಿಲ್ವ ಪತ್ರೆ ಹಾರ ಸಹ ನೀಡುತ್ತಿರುವುದು ವಿಶೇಷ.

ಇದನ್ನೂ ಓದಿ: ಮಹಾಶಿವರಾತ್ರಿ ವಿಶೇಷ.. ಮಧುರೈಗೆ ರಾಷ್ಟ್ರಪತಿ ಮುರ್ಮು ಆಗಮನ: ವಿಶೇಷ ಭದ್ರತೆ

ತ್ರಿನೇಶ್ವರ ಸ್ವಾಮಿ ದೇವಾಲಯದ ವಿಶೇಷತೆ: ಅರಮನೆಯ ಆವರಣದ ತ್ರಿನೇಶ್ವರ ಸ್ವಾಮಿ ದೇವಾಲಯ ಪ್ರಾಚೀನ ಶಿವನ ದೇವಾಲಯವಾಗಿದೆ. ಈ ತ್ರಿನೇಶ್ವರ ಸ್ವಾಮಿ ದೇವಸ್ಥಾನ ಪಶ್ಚಿಮಾಭಿಮುಖವಾಗಿ ಇರುವ ಶಿವನ ದೇವಾಲಯ ಎಂಬ ವಿಶೇಷತೆ ಹೊಂದಿದೆ. ಈ ದೇವಸ್ಥಾನವನ್ನು ಋಷಿಮುನಿಗಳು ಕಟ್ಟಿಸಿರುವ ಉಲ್ಲೇಖವಿದೆ. ಅಷ್ಟೇ ಅಲ್ಲದೆ, ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಪ್ರವಚನ ಬರೆಯಲು ಶಕ್ತಿ ಕೊಟ್ಟ ಸ್ಥಳವೆಂದು ದೇವಾಲಯದ ಅರ್ಚಕ ಸ್ಕಂದ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರು: ತ್ರಿನೇಶ್ವರ ದೇವಾಲಯಕ್ಕೆ ಬಂತು 11 ಕೆ.ಜಿ ತೂಕದ ಶಿವನ ಚಿನ್ನದ ಮುಖವಾಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.