ಮೈಸೂರು: ವಿವಾಹೇತರ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪ್ರೇಯಸಿಯನ್ನು ಕೊಂದ ಪ್ರಿಯಕರ, ಬಳಿಕ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಿ. ನರಸೀಪುರ ತಾಲೂಕಿನ ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.
ತಿ. ನರಸೀಪುರ ತಾಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದ ಮಹಿಳೆ ಹಾಗೂ ಸಿದ್ದರಾಜು ಮೃತರು. ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ಸಿದ್ದರಾಜು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದರೆ, ಮಹಿಳೆಯ ಶವ ಹೂಳಿರುವುದು ಕಂಡುಬಂದಿದೆ. ಹಲವು ವರ್ಷಗಳಿಂದ ಮಹಿಳೆ ಹಾಗೂ ಸಿದ್ದರಾಜು ಅಕ್ರಮ ಸಂಬಂಧ ಹೊಂದಿದ್ದರು. ಶನಿವಾರ ಮಹಿಳೆ ಜೊತೆ ಸಿದ್ದರಾಜು ತಲಕಾಡಿನತ್ತ ತೆರಳಿದ್ದ. ಬಳಿಕ ಇಬ್ಬರು ಹೆಣವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಾಯುವ ಮುನ್ನ ಕೊನೆಯದಾಗಿ ತಮ್ಮ ಗ್ರಾಮದವರಿಗೆ ವಾಟ್ಸ್ ಆ್ಯಪ್ ವಾಯ್ಸ್ ಮೆಸೇಜ್ ಮಾಡಿರುವ ಸಿದ್ದರಾಜು, ನನ್ನೊಂದಿಗಿದ್ದವಳು ಸತ್ತಿದ್ದಾಳೆ, ನಾನು ಸಹ ಸಾಯುತ್ತೇನೆ. ತನಗೆ ಬದುಕಲು ಇಷ್ಟವಿಲ್ಲ ಎಂದು ತಿಳಿಸಿದ್ದಾನೆ. ಇಬ್ಬರಿಗೂ ಕೂಡ ಈಗಾಗಲೇ ವಿವಾಹವಾಗಿದ್ದರೂ ಕೂಡ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ತಲಕಾಡು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶವಗಳ ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ನೀಡಲಾಗಿದೆ.
ಇದನ್ನೂ ಓದಿ: 50 ರೂಪಾಯಿಗಾಗಿ ಸ್ನೇಹಿತರ ನಡುವೆ ಜಗಳ.. ಬೆಂಗಳೂರಲ್ಲಿ ಚಾಕು ಇರಿದು ಗೆಳೆಯನ ಕೊಲೆ