ETV Bharat / state

ಕಾವೇರಿ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ: ಸಾಯುವ ಮುನ್ನ ವಿಡಿಯೋ ಮಾಡಿದ ಯುವಕ! - carvery river news

ಹೆಮ್ಮಿಗೆ ಸೇತುವೆ ಬಳಿಗೆ ದ್ವಿಚಕ್ರ ವಾಹನದಲ್ಲಿ ಬಂದು ಸೇತುವೆಯ ಬಳಿ ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿ ನಂತರ ಇಬ್ಬರೂ ಒಟ್ಟಿಗೆ ನೀರಿಗೆ ಹಾರಿದ್ದಾರೆ.

ಕಾವೇರಿ ನದಿಗೆ ಹಾರಿ ಆತ್ಮಹತ್ಯೆ
author img

By

Published : Aug 5, 2019, 4:01 PM IST

ಮೈಸೂರು: ಪೋಷಕರಿಗೆ ಹೆದರಿದ ಪ್ರೇಮಿಗಳು ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮೊದಲು ಆತ್ಮಹತ್ಯೆಗೆ ಕಾರಣ ತಿಳಿಸಿ ವಿಡಿಯೋ ಮಾಡಲಾಗಿದೆ.

ಟಿ. ನರಸೀಪುರ ಬಳಿಯ ಹೆಮ್ಮಿಗೆ ಸೇತುವೆ ಬಳಿ ಈ ದುರ್ಘಟನೆ ನಡೆದಿದೆ. 21 ವರ್ಷದ ಮನು ಹಾಗೂ 16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದವರು. ಹೆಮ್ಮಿಗೆ ಸೇತುವೆ ಬಳಿಗೆ ದ್ವಿಚಕ್ರ ವಾಹನದಲ್ಲಿ ಬಂದು ಸೇತುವೆಯ ಬಳಿ ತಮ್ಮ ಮೊಬೈಲ್​ನಲ್ಲಿ ವಿಡಿಯೋ ಮಾಡಿ ನಂತರ ಇಬ್ಬರೂ ಒಟ್ಟಿಗೆ ನೀರಿಗೆ ಹಾರಿದ್ದಾರೆ.

ಕಾವೇರಿ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ

ಬಾಲಕಿ ಶವ ಸಿಕ್ಕಿದ್ದು, ಯುವಕ ಮನು ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ. ಘಟನೆ ಸಂಬಂಧ ತಲಕಾಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮೈಸೂರು: ಪೋಷಕರಿಗೆ ಹೆದರಿ ಇಬ್ಬರು ಯುವ ಪ್ರೇಮಿಗಳು ಕಾವೇರಿ ನದಿಗೆ ಹಾರುವ ಮುನ್ನ ಯುವಕ ನೀರಿನ ಬಳಿ ಮೊಬೈಲ್ ವಿಡಿಯೋವನ್ನು ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿ. ನರಸೀಪುರ ಬಳಿಯ ಹೆಮ್ಮಿಗೆ ಸೇತುವೆ ಬಳಿ ನಡೆದಿದೆ.

Body:

ಹೀಗೆ ಪೋಷಕರಿಗೆ ಪ್ರೀತಿ ವಿಚಾರ ಗೊತ್ತಾಗಿ ಅವರು ಹೇಳಿದ ಬುದ್ದಿ ಮಾತಿನಿಂದ ಮನನೊಂದ ಯುವ ಪ್ರೇಮಿಗಳಾದ ಮನು (೨೧), ೧೬ ವರ್ಷದ ಅಪ್ರಾಪ್ತೆ.
ಟಿ.ನರಸೀಪುರ ಬಳಿ ಕಾವೇರಿ ನದಿಗೆ ಕಟ್ಟಲಾಗಿರುವ ಹೆಮ್ಮಿಗೆ ಸೇತುವೆ ಬಳಿ ದ್ವಿಚಕ್ರ ವಾಹನದಲ್ಲಿ ಬಂದು ಸೇತುವೆಯ ಬಳಿ ಬೈಕ್ ಅನ್ನು ನಿಲ್ಲಿಸಿ ತನ್ನ ಮೊಬೈಲ್ ನಲ್ಲಿ ನೀರಿನ ಬಳಿ ವಿಡಿಯೋ ಮಾಡಿ ಆ ಮೊಬೈಲ್ ಹಾಗೂ ಬೈಕ್, ಚಪ್ಪಲಿಯನ್ನು ಸೇತುವೆ ಮೇಲೆ ಬಿಟ್ಟು ಇಬ್ಬರು ಒಟ್ಟಿಗೆ ನದಿಗೆ ಹಾರಿದ್ದಾರೆ ಎನ್ನಲಾಗಿದ್ದು, ಅಪ್ರಾಪ್ತ ಬಾಲಕಿಯ ಶವ ದೊರೆತಿದ್ದು ಯುವಕ ಮನು ಶವಗಾಗಿ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.