ETV Bharat / state

ಬಂಡೀಪುರ, ನಾಗರಹೊಳೆ ಸಫಾರಿಯಲ್ಲಿ ಬಾರ್ಡರ್​, ನಾಜೀರ್​ ಕಟ್ಟೆ ಘರ್ಜನೆ.. ಈ ಹೆಸರಿನಿಂದಲೇ ಹುಲಿಗಳು ಪ್ರಸಿದ್ಧಿ

author img

By

Published : Apr 8, 2023, 8:34 PM IST

Updated : Apr 8, 2023, 8:57 PM IST

ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ಹೆಚ್ಚಿನ ಪ್ರವಾಸಿಗರು ದೇಶ- ವಿದೇಶಗಳಿಂದ ಆಗಮಿಸುತ್ತಾರೆ. ಇಂತಹ ಪ್ರವಾಸಿಗರಿಗೆ ಸಫಾರಿ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರತಿದಿನ ಹುಲಿಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಪದೇ ಪದೇ ಕಾಣಿಸಿಕೊಳ್ಳುವ ಹುಲಿಗಳಿಗೆ ವನ್ಯಜೀವಿ ಹವ್ಯಾಸಿ ಛಾಯಾಗ್ರಾಹಕರು, ಅರಣ್ಯ ಅಧಿಕಾರಿಗಳು ಹಾಗೂ ಪ್ರಾಣಿ ಪ್ರಿಯರು ಒಂದೊಂದು ಹೆಸರುಗಳನ್ನಿಟ್ಟು ಕರೆಯುತ್ತಾರೆ. ಅಂತಹ ಹೆಸರುಗಳಿಂದ ಪ್ರಖ್ಯಾತವಾದ ಹುಲಿಗಳ ಬಗ್ಗೆ ಇಲ್ಲಿದೆ ಸ್ಟೋರಿ..

tigers
ಹುಲಿಗಳು

ಮೈಸೂರು: ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕರ್ನಾಟಕದ ಬಂಡೀಪುರ ಹಾಗೂ ನಾಗರಹೊಳೆ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಇಲ್ಲಿಗೆ ಸಫಾರಿಗಾಗಿ ಜನರು ಹಾಗೂ ಗಣ್ಯರು ಆಗಮಿಸುತ್ತಾರೆ. ಇಲ್ಲಿ ಸಫಾರಿಗಾಗಿ ಬರುವ ಪ್ರವಾಸಿಗೆ ಹುಲಿಗಳು ದರ್ಶನ ನೀಡುತ್ತವೆ. ಸಫಾರಿಯಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಹುಲಿಗಳ ಗಾಂಭೀರ್ಯದ ವರ್ತನೆ, ನಡೆಗೆ ಮತ್ತು ಚೆಲ್ಲಾಟಗಳನ್ನು ಆಧರಿಸಿ, ವನ್ಯಜೀವಿ ಛಾಯಾಗ್ರಾಹಕರು ಹಾಗೂ ಅರಣ್ಯ ಅಧಿಕಾರಿಗಳು ಈ ಹುಲಿಗಳಿಗೆ ಒಂದೊಂದು ಹೆಸರನ್ನು ಇಟ್ಟಿದ್ದಾರೆ. ಅದೇ ಹೆಸರಿನಿಂದ ಇಂದಿಗೂ ಪ್ರಖ್ಯಾತವಾಗಿರುವ ವ್ಯಾಘ್ರಗಳ ವಿವರವಾದ ಮಾಹಿತಿ ಇಲ್ಲಿದೆ.

ಬಂಡೀಪುರ ಸಫಾರಿ: ದೇಶದಲ್ಲೇ ಅತಿ ದೊಡ್ಡದಾದ ವಿಸ್ತಾರ ಹೊಂದಿರುವ ಹುಲಿ ಸಂರಕ್ಷಿತ ಪ್ರದೇಶ ಎಂಬ ಖ್ಯಾತಿ ಪಡೆದಿರುವ ಬಂಡೀಪುರ ಸಫಾರಿಯಲ್ಲಿ, ಹಲವಾರು ವರ್ಷಗಳ ಕಾಲ ಸಫಾರಿ ಜನರಿಗೆ ದರ್ಶನ ನೀಡಿರುವ ಹಾಗೂ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರ ಫೋಟೊಗಳಿಗೆ ಸೆರೆಯಾಗಿರುವ ಪ್ರಿನ್ಸ್ ಎಂಬ ಖ್ಯಾತಿಯ ಹುಲಿ ಬಂಡೀಪುರ ಸಫಾರಿಯಲ್ಲಿ ಪ್ರಸಿದ್ಧಿಯಾಗಿದೆ. ಆನಂತರ ಮಾದೇಶ ಎಂಬ ಹುಲಿ ಸಫಾರಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇವೆರಡು ಹುಲಿಗಳು ಮೃತಪಟ್ಟ ನಂತರ ಈಗ ಬಾರ್ಡರ್ ಮೇಲ್ ಎಂಬ ಹುಲಿ ಆಗಾಗ ಸಫಾರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಇತ್ತೀಚೆಗೆ ಬಂಡೀಪುರ ಸಫಾರಿಯಲ್ಲಿ ಹುಲಿಗಳ ದರ್ಶನ ಕಷ್ಟವಾಗಿದೆ. ಈ ಹುಲಿಗಳು ದಟ್ಟಾರಣ್ಯದಲ್ಲಿ ಇರುವುದರಿಂದ ಸಫಾರಿ ದರ್ಶನ ಕಷ್ಟವಾಗಿದೆ ಎನ್ನತ್ತಾರೆ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಶ್ರೇಯಸ್ ದೇವನೂರು.

ನಾಗರಹೊಳೆ ಸಫಾರಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಮ್ಮನಕಟ್ಟೆ ಸಫಾರಿ ಕೇಂದ್ರ ಹಾಗೂ ಕಬಿನಿ ಬ್ಯಾಕ್ ವಾಟರ್ ಪ್ರದೇಶದ ಸಫಾರಿಯಲ್ಲಿ ಅತಿ ಹೆಚ್ಚು ಕಾಡುಪ್ರಾಣಿಗಳು ಸಫಾರಿಯಲ್ಲಿ ಕಾಣ ಸಿಗುತ್ತವೆ. ಅದರಲ್ಲಿ ಹುಲಿಗಳ ದರ್ಶನ ಹೆಚ್ಚಾಗಿ ಕಂಡುಬರುತ್ತದೆ. ಈ ಭಾಗದಲ್ಲಿ ಹೆಚ್ಚಾಗಿ ಸಫಾರಿಯಲ್ಲಿ ಕಂಡುಬಂದ ಹುಲಿಗಳನ್ನು ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ.

ನಾಜೀರ್ ಕಟ್ಟೆ ಮೇಲ್ ಟೈಗರ್: ನಾಜೀರ್ ಕಟ್ಟೆ ಮೇಲ್ ಟೈಗರ್ ಆ್ಯಂಡ್ ಫಿಮೇಲ್ ಟೈಗರ್, ಬಸವನಕಟ್ಟೇ ಮೇಲ್ ಟೈಗರ್, ಮೂರುಕಟ್ಟೆ ಫಿಮೇಲ್ ಟೈಗರ್ ಹಾಗೂ ಟೈಗರ್ ಟ್ಯಾಂಕ್ ಫಿಮೇಲ್ ಟೈಗರ್ ಸಫಾರಿ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ಈ ಪ್ರದೇಶದಲ್ಲಿ ಕಂಡುಬರುತ್ತವೆ. ಆ ಪ್ರದೇಶದ ಹೆಸರನ್ನೇ ಹುಲಿಗಳಿಗೆ ನಾಮಕರಣ ಮಾಡಿ, ಗುರುತಿಸಿ ಕರೆಯುತ್ತಿದ್ದರು. ಈಗ ಹುಲಿಗಳು ಸ್ವಾಭಾವಿಕವಾಗಿ ಮರಣ ಹೊಂದಿದ್ದು, ಸದ್ಯಕ್ಕೆ ಕಬಿನಿ ಬ್ಯಾಕ್ ವಾಟರ್ ಫಿಮೇಲ್ ಮಾತ್ರ ಇದ್ದು, ಈ ಟೈಗರ್ ಹುಲಿಗಳ ಕಾದಾಟದಲ್ಲಿ ಗಾಯಗೊಂಡಿರುವುದರಿಂದ ಅರಣ್ಯ ಇಲಾಖೆಯವರು ಕಬಿನಿ ಬ್ಯಾಕ್ ವಾಟರ್ ಫಿಮೇಲ್ ಅನ್ನು ಸೆರೆ ಹಿಡಿದು ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ನಾಗರಹೊಳೆ ಸಫಾರಿಯಲ್ಲಿ ಹುಲಿ ಮರಿಗಳು ಆಗಾಗ ಕಾಣಿಸಿಕೊಳ್ಳುತ್ತದೆ.

ಬಂಡೀಪುರ ಹಾಗೂ ನಾಗರಹೊಳೆ ಸಫಾರಿ ಸಂದರ್ಭದಲ್ಲಿ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಿಗೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಹುಲಿಗಳಿಗೆ ಒಂದೊಂದು ಹೆಸರನ್ನು ಇಟ್ಟು ಕರೆಯುತ್ತಿದ್ದು, ಅದೇ ಹೆಸರಿನಲ್ಲಿ ಈ ಹುಲಿಗಳು ದೇಶ ವಿದೇಶಗಳಲ್ಲಿ ಪ್ರಖ್ಯಾತಿಯಾಗಿವೆ.

ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್​ ಉದ್ಘಾಟಿಸಿದ ಪ್ರಧಾನಿ ಮೋದಿ

Last Updated : Apr 8, 2023, 8:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.