ETV Bharat / state

ಕೋವಿಡ್ ನಿಯಮ ಪಾಲಿಸಿದರೆ ಲಾಕ್​ಡೌನ್ ಅವಶ್ಯಕತೆಯಿಲ್ಲ: ಸಂಸದ ಪ್ರತಾಪ್ ಸಿಂಹ

ಲಾಕ್ ಡೌನ್​ನಿಂದ ಇಡೀ ಪ್ರಪಂಚವೇ ಕಳೆದ ವರ್ಷ ಸಂಕಷ್ಟಕ್ಕೆ ಸಿಲುಕಿತ್ತು. ಮತ್ತೆ ಲಾಕ್ ಡೌನ್ ಅವಶ್ಯಕತೆ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

MP Pratap Simha
ಸಂಸದ ಪ್ರತಾಪ್ ಸಿಂಹ
author img

By

Published : Apr 12, 2021, 3:50 PM IST

ಮೈಸೂರು: ಕೋವಿಡ್ ನಿಯಮ ಪಾಲಿಸಿದರೆ ಯಾವುದೇ ರೀತಿ ಲಾಕ್ ಡೌನ್ ಅವಶ್ಯಕತೆ ಇಲ್ಲವೆಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಮಯವನ್ನು ಚಾಚು ತಪ್ಪದೆ ಪಾಲಿಸಿ, ಪ್ರತಿಯೊಬ್ಬರು ಕೋವಿಡ್ ವ್ಯಾಕ್ಸಿನ್​ ಪಡೆದುಕೊಳ್ಳಿ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮವಾಗುವುದಿಲ್ಲ. ಇಂದು ನಾನು‌ ಸಹ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡೆ. ಲಾಕ್ ಡೌನ್​ನಿಂದ ಇಡೀ ಪ್ರಪಂಚವೇ ಕಳೆದ ವರ್ಷ ಸಂಕಷ್ಟಕ್ಕೆ ಸಿಲುಕಿತ್ತು. ಮತ್ತೆ ಲಾಕ್ ಡೌನ್ ಅವಶ್ಯಕತೆ ಇಲ್ಲ ಎಂದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೋವಿಡ್ ಸಮಯದಲ್ಲಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಸರಿಯಲ್ಲ. ನಾನು ನೌಕರರ ಪರವಾಗಿದ್ದೇನೆ. 6ನೇ ವೇತನ ಆಯೋಗ ನೀಡಲು ನೌಕರರು ಆಗ್ರಹಿಸುತ್ತಿದ್ದಾರೆ. ಆದರೆ ಈಗಾಗಲೇ ಕೆಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಬೇರೆ ಬೇಡಿಕೆಗಳನ್ನು ಈಡೇರಿಸಲು ಕಾಲಾವಕಾಶ ಕೇಳಿದ್ದಾರೆ ಎಂದರು.

ಕೋವಿಡ್ ಇರುವ ಕಾರಣ ಸಾರಿಗೆ ಇಲಾಖೆಯಲ್ಲಿ ಆದಾಯ ಕಡಿಮೆಯಾಗಿದೆ. ನೌಕರರಿಗೆ ಸಂಬಳ ಕೊಡಲು ತೊಂದರೆಯಾಗಿದೆ. ಈ ಸಂದರ್ಭ 6ನೇ ವೇತನವನ್ನು ಆಯೋಗದಂತೆ ನೀಡುವಂತೆ ಆಗ್ರಹಿಸುವುದು ಸರಿಯಲ್ಲ. ‌ಕೂಡಲೇ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಬೇಕು ಎಂದು ಸಂಸದ ಪ್ರತಾಪ್​ ಸಿಂಹ ನೌಕರರಲ್ಲಿ ಮನವಿ ಮಾಡಿದರು.

ಓದಿ: 'ರೈತರ ದಾರಿ ತಪ್ಪಿಸಿದ ಮುಖಂಡ ಈಗ KSRTC ನೌಕರರ ದಾರಿ ತಪ್ಪಿಸುತ್ತಿದ್ದಾರೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.