ETV Bharat / state

ಕೆಂಪು ವಲಯದಲ್ಲಿದ್ದರೂ ಈ ನಿರ್ಲಕ್ಷ್ಯವೇಕೆ?: ರಸ್ತೆಗಳಿದ ಮೈಸೂರು ಮಂದಿ - ರೆಡ್​ ಝೋನ್​ನಲ್ಲಿದ್ದರೂ ಡೋಂಡ್​ ಕೇರ್​

ಮೈಸೂರು ನಗರ ವ್ಯಾಪ್ತಿ ರೆಡ್​ ಝೋನ್​ನಲ್ಲಿದ್ದು, ಅನಗತ್ಯವಾಗಿ ಹೊರಗಡೆ ಓಡಾಡದಂತೆ ಪೊಲೀಸರು ಈಗಾಗಲೇ ಮನವಿ ಮಾಡಿದ್ದಾರೆ. ಆದರೆ, ಜನ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಅನ್ನದೆ ರಸ್ತೆಗಿಳಿದಿದ್ದಾರೆ.

Lockdown in Mysuru
ರಸ್ತೆಗಳಿದ ಮೈಸೂರು ಮಂದಿ
author img

By

Published : May 4, 2020, 4:06 PM IST

ಮೈಸೂರು : ನಗರ ರೆಡ್ ಝೋನ್​ನಲ್ಲಿದ್ದರೂ ಜನರು ಮಾತ್ರ ಗಂಭೀರವಾಗಿ ಪರಿಗಣಿಸದೆ ರಸ್ತೆಗಿಳಿದಿದ್ದು, ವಾಹನಗಳ ಓಡಾಟ ಇಂದು ತುಸು ಹೆಚ್ಚಾಗಿಯೇ ಇತ್ತು.

ಈಗಾಗಲೇ ಪೊಲೀಸರು ನಗರದಾದ್ಯಂತ ತೀವ್ರ ನಿಗಾವಹಿಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ಹೊರತು ಯಾರು ಹೊರಗಡೆ ಓಡಾಡದಂತೆ ತಿಳಿಸಿದ್ದಾರೆ. ಆದರೆ, ಜನ ಮಾತ್ರ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಹೊರಗಡೆ ಓಡಾಡುತ್ತಿದ್ದಾರೆ.

ರಸ್ತೆಗಳಿದ ಮೈಸೂರು ಮಂದಿ

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ವರ್ತಕ ಮನು, ನಗರ ವ್ಯಾಪ್ತಿ ಈಗಾಗಲೇ ರೆಡ್​ಝೋನಲ್ಲಿದೆ. ಆದರು ಜನ ಹೊರಗಡೆ ಓಡಾಡುತ್ತಿದ್ದಾರೆ. ಇಂದು ಮದ್ಯದಂಗಡಿಗಳು ತೆರೆದಿದ್ದು, ಅಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿದೆ. ಎಲ್ಲರು ನಿಯಮಗಳನ್ನು ಪಾಲಿಸಿ, ದಯವಿಟ್ಟು ಮನೆಯಲ್ಲೇ ಇರಿ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.