ETV Bharat / state

ಹೆಚ್ಚಿದ ಚಿರತೆ ಹಾವಳಿ: ಕಬ್ಬು ಕಟಾವು ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಆದೇಶ - ETv Bharat Karnataka

ಮೈಸೂರು ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕಬ್ಬು ಕಟಾವು ಮಾಡವಂತೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ
ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ
author img

By

Published : Dec 6, 2022, 6:41 PM IST

Updated : Dec 6, 2022, 6:53 PM IST

ಮೈಸೂರು : ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಿರುವ ಕಾರಣ ರೈತರು ಕಬ್ಬು ಕಟಾವು ಮಾಡವಂತೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಚಿರತೆಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳ ಮನವಿಯ ಮೇರೆಗೆ ಈ ಆದೇಶ ಮಾಡಿದ್ದಾರೆ. ಟಿ ನರಸೀಪುರ ತಾಲೂಕಿನ 23 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 40 ಗ್ರಾಮಗಳಲ್ಲಿ ಕಟಾವಿಗೆ ಬಂದ ಕಬ್ಬನ್ನು ಆದ್ಯತೆ ಮೇರೆಗೆ ಜರೂರಾಗಿ ಕಟಾವು ಮಾಡುವಂತೆ ಸೂಚಿಸಿದರು.

ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ವ್ಯಾಪ್ತಿಯ ಸೋಸಲೆ ಹೋಬಳಿಯ ಎಂ ಎಲ್ ಹುಂಡಿ ಗ್ರಾಮದ ಮಂಜುನಾಥ ಎಂಬಾ ಯುವಕನನ್ನು 31/10/2022 ರಂದು ಹಾಗೂ ಎಸ್ ಕೆಬ್ಬೆಹುಂಡಿ ಗ್ರಾಮದ ಯುವತಿ ಮೇಘನಾ 1/12/2022 ರಂದು ಚಿರತೆ ದಾಳಿಯಿಂದ ಸ್ಥಳದಲ್ಲೇ ಮೃತಪಟ್ಟಿದರು. ಇದರಿಂದ ಅರಣ್ಯ ಇಲಾಖೆ ಅವರು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದು, ಈ ವ್ಯಾಪ್ತಿಯ ಗ್ರಾಮಗಳ ಜಮೀನಿನಲ್ಲಿ ಬೆಳೆದಿರುವ ಕಬ್ಬು ಚಿರತೆ ಪತ್ತೆಗೆ ತೊಡಕಾಗಿದೆ.

Operation to capture leopard
ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ

ಆದ್ದರಿಂದ ಈ ಗ್ರಾಮಗಳ ವ್ಯಾಪ್ತಿಯ ಕಟಾವಿಗೆ ಬಂದ ಕಬ್ಬನ್ನು ಆದ್ಯತೆ ಮೇರೆಗೆ ಕಟಾವು ಮಾಡುವಂತೆ ಆದೇಶ ಉಪ ಅರಣ್ಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿಗಳು ಕಟಾವಿಗೆ ಬಂದ ಕಬ್ಬನ್ನು ರೈತರು ಬೇಗ ಕಟಾವು ಮಾಡುವಂತೆ ಆದೇಶಿಸಿದ್ದು, ಆ ಮೂಲಕ ಚಿರತೆಯ ಸೆರೆಗೆ ಸಹಕರಿಸಬೇಕು ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :ಮಿತಿ ಮೀರಿದ ಚಿರತೆಗಳ ಹಾವಳಿ... ಪೊದೆಗಳ ತೆರವಿಗೆ ಮುಂದಾದ ಅರಣ್ಯ ಇಲಾಖೆ

Last Updated : Dec 6, 2022, 6:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.