ಮೈಸೂರು: ಮೂರು ದಿನದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದಿದೆ. ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಡಾವಣೆ ನಿವಾಸಿ ಕುಳ್ಳಪ್ಪ ಎಂಬುವವರ ಹಸು ಮೂರು ದಿನಗಳಿಂದ ಕರು ಮರಿ ಹಾಕಿತ್ತು.
ಕಳೆದ ಹಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಓಡಾಡುತ್ತಿರುವ ಗುಮಾನಿ ಇತ್ತು. ಆದರೆ ಭಾನುವಾರ ಬೆಳಗಿನ ಜಾವ ಕರುವನ್ನು ಬಲಿ ಪಡೆದ ನಂತರ ಚಿರತೆಯ ತನ್ನ ಇರುವಿಕೆಯನ್ನು ಖಾತ್ರಿಪಡಿಸಿದೆ. ಇದರ ಬಗ್ಗೆ ಸ್ಥಳೀಯರು ಆತಂಕಪಟ್ಟಿದ್ದು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.